expr:class='"loading" + data:blog.mobileClass'>

ಸೋಮವಾರ, ಜೂನ್ 7, 2021

ಕ್ರುಷಿ ಪ್ರಧಾನ ಭಾರತ.

ಭಾರತ ಒಂದು ಕ್ರುಷಿ ಪ್ರಧಾನ ದೇಶ ಇಲ್ಲಿ ಹೆಚ್ಚಿನ ಜನರು ಕ್ರುಷಿಯನ್ನೆ ಅವಲಂಬಿಸಿರುವದರಿಂದ ಭಾರತ ಕ್ರುಷಿ ಪ್ರಧಾನ ದೇಶ ರೈತ ದೇಶದ ಬೆನ್ನೆಲುಬು ಎಂಬ ಮಾತು ಆಡು ಬಾಷೆಯಲ್ಲಿ ಹೊಕ್ಕಾಗಿದೆ.
135 ಕೋಟಿ ಜನ ಸಂಕ್ಯೆಯಷ್ಟು ಪ್ರಾಭಲ್ಯ ಹೊಂದಿರುವ ದೇಶದಲ್ಲಿ %70 ರಷ್ಟು ಜನರು ಕ್ರುಷಿಯನ್ನೆ ಅವಲಂಬಿಸಿರುವದು.ಹಾಗೆ ನೋಡಿದರೆ ದೇಶದಲ್ಲಿ ಇಂದು ಅತೀ ಹೆಚ್ಚು ಉದ್ಯೋಗ ಸ್ರುಷ್ಟಿ ಆಗುತ್ತಿರುವದು ಕ್ರುಷಿ ವಲಯದಲ್ಲಿಯೆ.
ಹಾಗೆ ನೋಡಿದರೆ ಭಾರತದ ಕ್ರುಷಿ ವಲಯದ ಭೂ ರಚನೆ ಕ್ರುಷಿಗೆ ಹೇಳಿ ಮಾಡಿಸಿದಷ್ಟು ಸಮತಟ್ಟಾಗಿ ಇಲ್ಲ ಚಿಕ್ಕ ಚಿಕ್ಕ ಹಿಡುವಳಿ ಎತ್ತರ ತೆಗ್ಗು ರಚನೆ ಇರುವದರಿಂದ ಇಲ್ಲಿ ಕಾರ್ಪೊರೇಟ್ ಕ್ರುಷಿ ಸಾದ್ಯವಿಲ್ಲ.
ಇಲ್ಲಿ ಅತೀ ಹೆಚ್ಚು ಭೂ ಪ್ರಧೇಶ ಅರೆನೀರಾವರಿ ಪದ್ದತಿ ಅಂದರೆ ಮಳೆಯಾಶ್ರಿತ ಕ್ರುಷಿ ಅವಲಂಬಿಸಿರುವದೆ ಹೆಚ್ಚು.ಪ್ರಕ್ರುತಿ ಅಸಮತೊಲನದಿಂದ ಮಳೆ ಅತಿ ಹೆಚ್ಚು ಅತಿ ಕಡಿಮೆ ಆಗುವದರಿಂದ ಇಲ್ಲಿ ಕ್ರುಷಿ ವಿಫಲವಾಗುವದೆ ಹೆಚ್ಚು.ಆದರು ಸಹ ಕ್ರುಷಿಯನ್ನ ದುಡಿಮೆ ಎಂದು ಬಾವಿಸದೆ ಅದು ಜೀವನ ಎಂದು ನಂಬಿರುವ ನಮ್ಮ ರೈತರನ್ನ ಮೆಚ್ಚಲೆ ಬೇಕು.
ಇಂದಿನ ಯುವಜನತೆ ಆಧುನಿಕ ಜೀವನಕ್ಕೆ ಮಾರು ಹೋಗಿ ಹಳ್ಳಿಗಳನ್ನ ತೊರೆದು ನಗರಗಳಿಗೆ ವಲಸೆ ಹೋಗುತ್ತಿರುವದರಿಂದ ಹಳ್ಳಿಗಳಲ್ಲಿ ವ್ರುದ್ದಾಪ್ಯರು ಮಾತ್ರ ಉಳಿದು ಕಾಲ ಕಾಲಕ್ಕೆ ನಡಿಯಬೇಕಾದ ಕ್ರುಷಿ ಚಟುವಟಿಕೆಗಳಿಗೆ ದುಡಿಯುವ ಯುವಕರಿಲ್ಲದೆ ವ್ರುದ್ದಾಪ್ಯರಿಂದ ಮಾಡಲಾಗದೆ ಕ್ರುಷಿ ವಿಫಲವಾಗುತ್ತಿದೆ.
ಭವಿಷ್ಯದಲ್ಲಿ ಯುವಕರನ್ನ ಕ್ರುಷಿಯೆಡೆಗೆ ಆಕರ್ಷಿಸದಿದ್ದರೆ ಮುಂದೆ ಭವಿಷ್ಯದಲ್ಲಿ 70% ಇರುವ ಕ್ರುಷಿ ವಲಯ 40% ಆದರೂ ಆಶ್ಚರ್ಯವಿಲ್ಲ.ಅಂದು ಆಹಾರ ಧಾನ್ಯಗಳನ್ನ ದುಭಾರಿ ಬೆಲೆಗೆ ಆಮದು ಮಾಡಿಕೊಂಡು ಕಡಿಮೆ ಬೆಲೆಗೆ ವಿತರಣೆ ಮಾಡಲು ಯಾವ ಸರ್ಕಾರದಿಂದಲೂ ಸಾದ್ಯವಿಲ್ಲ.

ಸರ್ಕಾರಗಳು ಕಾರ್ಪೊರೇಟ್ ವಲಯಗಳಿಗೆ ನೀಡುವ ಆದ್ಯತೆಗಿಂತ ಕ್ರುಷಿ ವಲಯಕ್ಕೆ ಹೆಚ್ಚಿನ ಆದ್ಯತೆ ಕಲ್ಪಿಸಿದರೆ ಯುವಕರು ಮತ್ತೆ ಕ್ರುಷಿಯೆಡೆಗೆ ಮರಳಿಯಾರು.ನಾಳಿನ ಆಹಾರಕ್ಕಾಗಿ ನಾಳಿನ ಸುಸ್ಥಿರ ಭಾರತಕ್ಕಾಗಿ ಯುವಕರ ಭವಿಷ್ಯಕ್ಕಾಗಿ ಸರ್ಕಾರಗಳು ಜಾಗ್ರುತವಾಗುವ ಅವಶ್ಯಕತೆ ಇದೆ.

ಬಾಳೆ ಕ್ರುಷಿ

ಬಾಳೆ ಒಂದು ಬಹುಜನಪ್ರಿಯ ಹಣ್ಣಿನ ಬೆಳೆ ಮಾವಿನಹಣ್ಣಿನ ನಂತರದ ಸ್ಥಾನ ಬಾಳೆ ಹಣ್ಣಿಗೆ ಲಭಿಸುತ್ತದೆ.ಭಾರತದಲ್ಲಿ 50 ಕ್ಕೂ ಹೆಚ್ಚು ತಳಿಗಳಿದ್ದು ಅವು ವಿವಿಧ ಭಾಗದಲ್ಲಿ ಬೆಳೆ...