expr:class='"loading" + data:blog.mobileClass'>

ಭಾನುವಾರ, ಜುಲೈ 25, 2021

ಮಾವು ಬೆಳೆ.

ಭಾರತದ ಪ್ರಮುಖ ಹಣ್ಣಿನ ಬೆಳೆಗಳಲ್ಲಿ ಮಾವಿನ ಹಣ್ಣಿಗೆ ಮೊದಲ ಸ್ಥಾನ ಹಣ್ಣುಗಳು ತಮ್ಮ ವಿಶಿಷ್ಟವಾದ ವಿಶೇಷ ರುಚಿಯಿಂದಾಗಿ ಎಂತವರ ಮನಸ್ಸನ್ನು ಆಕರ್ಶಿಸುತ್ತವೆ.ಮಾವಿನ ಹಣ್ಣಿನಲ್ಲಿ ವಿಟಮಿನ್ 'ಎ" ಮತ್ತು 'ಸಿ" ಜೀವಸತ್ವಗಳು ಹೇರಳವಾಗಿದ್ದು ಮನುಷ್ಯನ ಜೀರ್ಣಕ್ರಿಯೆಗೆ ಹೆಚ್ಚು ಸಹಕರಿಸುತ್ತವೆ.ಮಾವಿನ ಹಣ್ಣನ್ನು ತಾಜಾಹಣ್ಣುಗಳಾಗಿ ಮತ್ತು ಸಂಸ್ಕರಿಸಿದ ಪಧಾರ್ಥಗಳಾಗಿಯೂ ಉಪಯೋಗಿಸ ಬಹುದು.ಭಾರತದ ಮಾವಿನ ಹಣ್ಣುಗಳಿಗೆ ವಿಧೇಶಗಳಲ್ಲಿ ಹೆಚ್ಚು ಬೇಡಿಕೆ ಇರುವದರಿಂದ ಹಣ್ಣು ಮತ್ತು ಸಂಸ್ಕರಿಸಿದ ಪಧಾರ್ಥಗಳನ್ನು ವಿಧೇಶಗಳಿಗೆ ರಫ್ತು ಮಾಡಲಾಗುತ್ತದೆ.


ಮಾವಿನ ಹಣ್ಣಿನ ತಳಿಗಳು:
ಬಾದಾಮಿ.ರಸಪೂರಿ.ತೋತಾಪುರಿ.ಐಶ್ವರ್ಯ.ಬೆನೆಶಾನ್.ನೀಲಂ.ಮಲಗೋವಾ.ಮಲ್ಲಿಕಾ.ದಶಹರಿ.ಕೇಸರ್.ಖಾದರ್.ನೀಲ್ಗೋವ.ರತ್ನ.ಆಮ್ರಪಾಲಿ.ನೀಲೇಶಾನ್.ಮುಂಡಪ್ಪ.ಕರಇಶಾಡ್.ಬೆನೆಟ್.

ಉಪ್ಪಿನಕಾಯಿ ತಳಿಗಳು:
ಅಪ್ಪೆಮಿಡಿ.ಆಮ್ಲೆಟ್.ಜೀರಿಗೆ.ಕೊಸಜಿಪಟೇಲ.

ಮಾವಿನ ಸಸಿಗಳ ನಾಟಿಯ ಅಂತರ :
ಇತ್ತೀಚೆಗೆ ಮಾವನ್ನು ಅಧಿಕ ಸಾಂದ್ರತೆಯಲ್ಲಿ ಕಡಿಮೆ ಅಂತರ ಕೊಟ್ಟು ಬೆಳೆಸುವದು ಜನಪ್ರಿಯವಾಗುತ್ತಿದೆ.ಇದರ ಅನುಕೂಲವೇನೆಂದರೆ ಪ್ರತಿ ಹೆಕ್ಟೆರ್ ಗೆ ನಾಟಿ ಮಾಡುವ ಸಸಿಗಳ ಸಂಕ್ಯೆ ಹೆಚ್ಚಿಸುವದು ಮತ್ತು ಇಳುವರಿ ಹೆಚ್ಚಿಸುವದು.ವಿಶೇಷವಾಗಿ ಎಲ್ಲಾ ತಳಿಗಳು ಅಧಿಕ ಸಾಂದ್ರತೆಗೆ ಒಗ್ಗುವದಿಲ್ಲ.ಕಡಿಮೆ ಸಾಂದ್ರತೆಗೆ ಹೊಂದುವಂತಹ ಗಿಡ್ಡ ತಳಿಗಳನ್ನೆ ಆರಿಸುವದು ಸೂಕ್ತ.
ಅಂತರ : 5 ಮೀ x 5 ಮೀ = 400 ಗಿಡ ಹೆಕ್ಟೇರ್ ಗೆ.
              8 ಮೀ x 8 ಮೀ = 156 ಗಿಡ ಹೆಕ್ಟೇರ್ ಗೆ.
              9 ಮೀ x 9 ಮೀ = 123 ಗಿಡ ಹೆಕ್ಟೇರು ಗೆ.
          10 ಮೀ x 10 ಮೀ = 100 ಗಿಡ ಹೆಕ್ಟೇರು ಗೆ.
          12 ಮೀ x 12 ಮೀ = 70 ಗಿಡ ಹೆಕ್ಟೇರು ಗೆ.
ಮಾವು ಸಸಿ ಬೇಸಾಯ ಕ್ರಮ :
ಭೂಮಿಯನ್ನು ಉಳುಮೆ ಮಾಡಿ ಸಿದ್ದಪಡಿಸಿಕೊಂಡು. 90 x 90 x 90 ಸೆಂ.ಮೀ ಗಾತ್ರದ ಗುಣಿಗಳನ್ನು ತೆಗೆದು ಪ್ರತಿ ಗುಣಿಗಳಿಗೂ 25 ಕಿ.ಗ್ರಾಂ ಕೊಟ್ಟಿಗೆ ಗೊಬ್ಬರ.2 ಕಿ.ಗ್ರಾಂ ಬೇವಿನ ಹಿಂಡಿ.ಮತ್ತು ಸಮ ಪ್ರಮಾಣದ ಮೇಲ್ಮಣ್ಣನ್ನು ಮಿಶ್ರಣ ಮಾಡಿದ ನಂತರ ಆರೋಗ್ಯಯುತ ಒಂದು ವರ್ಷ ಪ್ರಾಯದ ಉತ್ತಮವಾಗಿ ಕಸಿ ಕಣ್ಣು ಬೆಸೆದು ಕೊಂಡಂತಹ ಸಸಿಗಳನ್ನು ಗುಣಿಯ ಮದ್ಯಬಾಗದಲ್ಲಿ ಕಸಿ ಮಾಡಿದ ಬಾಗ ಭೂಮಿಯ ಮೇಲೆ ಇರುವಂತೆ ನಾಟಿ ಮಾಡಬೇಕು.ನಂತರ ಆಸರೆಗೆ ಕೋಲುಗಳನ್ನು ಕೊಟ್ಟು ಗಿಡಗಳನ್ನು ಕಟ್ಟಬೇಕು.ನಂತರ ನೀರನ್ನು ಒದಗಿಸಬೇಕು.

ಮಾವು ನಾಟಿಯ ನಂತರದ ನಿರ್ವಹಣೆ :
ನಾಟಿಯ ನಂತರ ಅಂತರ ಬೇಸಾಯದ ಜೊತೆ ಮಾವಿನ ತೋಟದಲ್ಲಿ ಉಪಬೆಳೆಗಾದ ತರಕಾರಿ.ಶೆಂಗಾ.ಹಲಸಂದೆ.ಈ ರೀತಿಯ ಮಾವಿನ ಗಿಡಗಳಿಗಿಂತ ಎತ್ತರ ಬೆಳೆಯದಂತಹ ಉಪ ಬೆಳೆಗಳನ್ನು ಬೆಳೆಯುವದರ ಜೊತೆಗೆ ಲಾಭವನ್ನು ಹೊಂದಬಹುದು.ಇದರಿಂದ ಕಳೆ ನಿರ್ಮೂಲನೆಯ ಜೊತೆ ಮಣ್ಣಿನ ಫಲವತ್ತತೆಗೂ ಸಹಕಾರಿಯಾಗುತ್ತದೆ.ಬೇಸಿಗೆಯಲ್ಲಿ ಗಿಡಗಳ ಸುತ್ತ ವ್ರುತ್ತಾಕಾರದಲ್ಲಿ ಪಾತಿಗಳನ್ನು ಮಾಡಿ ಕೊಟ್ಟಿಗೆ ಗೊಬ್ಬರ ಹಾಕಿ ಮಣ್ಣು ಮತ್ತು ಕ್ರುಷಿ ತ್ಯಾಜ್ಯ ಪದಾರ್ಥಗಳಿಂದ ಪಾತಿಯನ್ನು ಮುಚ್ಚಬೇಕು.ಕೊಟ್ಟಿಗೆ ಗೊಬ್ಬರ ಕೊಡುವದಕ್ಕು ಮೊದಲು ಅಥವ ತಿಂಗಳ ನಂತರ ಸಾರಜನಕ 75 ಕಿ.ಗ್ರಾಂ.ರಂಜಕ 20 ಕಿ.ಗ್ರಾಂ.70 ಕಿ.ಗ್ರಾಂ.ಮಿಶ್ರಣದ ಗೊಬ್ಬರವನ್ನು ಮೊದಲ ವರ್ಷದಲ್ಲಿ ಗಿಡಗಳ ಬುಡದಿಂದ ಒಂದು ಅಡಿ ದೂರದಲ್ಲಿ ನೀಡಬೇಕು.ಮೊದಲೆರಡು ವರ್ಷದಲ್ಲಿ ಬೇಸಿಗೆಯಲ್ಲಿ ಗಿಡಗಳಿಗೆ ನೀರನ್ನು ಅತ್ಯಾವಶ್ಯಕವಾಗಿ ಒದಗಿಸಬೇಕು.
 ಮಾವು ಇಳುವರಿ ಸುಧಾರಣ ಸೂತ್ರಗಳು:
ಮಾವಿನ ರೆಂಬೆಗಳು ಒತ್ತೊತ್ತಾಗಿ ಬೆಳೆದಾಗ ಕೆಲವೊಂದು ರೆಂಬೆಗಳನ್ನು ಕತ್ತರಿಸುವದರಿಂದ ಗಿಡಗಳ ಒಳಬಾಗಕ್ಕೆ ಗಾಳಿ ಬೆಳಕು ಹೇರಳವಾಗಿ ದೊರೆತು ರೋಗಗಳ ಬಾದೆ ಕಮ್ಮಿಯಾಗಿರುತ್ತದೆ.ಜೊತೆಗೆ ಉತ್ತಮ  ಗುಣಮಟ್ಟದ ಕಾಯಿಗಳು ದೊರೆಯುತ್ತವೆ.5 ರಿಂದ 6 ವರ್ಷವಾದಾಗ ಮದ್ಯದ ಒಂದೊಂದು ರೆಂಬೆಗಳನ್ನು ಕತ್ತರಿಸಿ ಗಾಳಿ ಬೆಳಕಿಗೆ ಅನುವು ಮಾಡಿಕೊಡಬೇಕು.ಕತ್ತರಿಸಿದ ರೆಂಬೆಗಳಿಗೆ ಶಿಲೀಂದ್ರನಾಶಕ ಮತ್ತು ಕೀಟನಾಶಕದ ಮುಲಾಮನ್ನು ಲೇಪಿಸುವದು ಅತ್ಯಾವಶ್ಯಕ.ಜೂನ್ ಮತ್ತು ಜುಲೈ ತಿಂಗಳು ಈ ಕೆಲಸಕ್ಕೆ ಸೂಕ್ತ ಕಾಲ.
ಕೆಲವು ಮಾವಿನ ತಳಿಗಳು ಎರಡು ವರ್ಷಕ್ಕೊಮ್ಮೆ ಹೆಚ್ಚು ಇಳುವರಿ ಕೊಟ್ಟು ಮದ್ಯ ವರ್ಷದಲ್ಲಿಜ ಇಳುವರಿ ಬಹಳ ಕಡಿಮೆ ಇರುತ್ತವೆ.ಇದು ಪ್ರಕ್ರುತಿದತ್ತ ನಿಯಮ ಇದನ್ನು ತಡೆಯಲು ಮಾವು ಹೂ ಬಿಡುವ ನೂರು ದಿನ ಮುಂಚೆ 5 ಮಿಲಿ 'ಪ್ಯಾಕ್ಲೋಬುಟ್ರಜಾಲ್ " ಸಂಯುಕ್ತ ವಸ್ತು ಹತ್ತು ಲೀಟರ್ ನೀರಿಗೆ ಬೆರೆಸಿ ಗಿಡಗಳ ಪಾತಿಯಲ್ಲಿ ಕಾಂಡದಿಂದ 90 ಸೆಂ.ಮೀ ದೂರದಲ್ಲಿ ಸುರಿಯುವದರಿಂದ ಪ್ರತಿ ವರ್ಷವೂ ಗಿಡಗಳು ಹೂ ಹಣ್ಣು ಬಿಡುವಂತೆ ಮಾಡಬಹುದು.ಸಾಮಾನ್ಯವಾಗಿ ಸೆಪ್ಟೆಂಬರ್ ಅಕ್ಟೋಬರ್ ಅಲ್ಲಿ ಈ ಕ್ರಿಯೆ ಅನುಸರಿಸುವದು ಸೂಕ್ತ. 

ಮಾವುನ ಬೆಳೆಗೆ ತಗುಲುವ ರೋಗಗಳು:
ಮಾವಿನ ಬೆಳೆಯಲ್ಲಿ ಸಾಮಾನ್ಯವಾಗಿ ಜಿಗಿಹುಳು.ಹಿಟ್ಟು ತಿಗಣೆ.ಎಲೆಗಂಟು.ರೆಂಬೆಕುಡಿ ಕೊರಕ.ಓಟೆಕೊರಕ.ಹಣ್ಣಿನ ನೊಣ.ಎಲೆ ತಿನ್ನುವ ಹುಳು.ಶಲ್ಕ ಕೀಟ.ಕಾಂಡಕೊರಕ.ನುಸಿ.ಕೆಂಪು ಇರುವೆ.ಬೂದಿರೋಗ.ಚಿಬ್ಬುರೋಗ.ದುಂಡಾಣು ಎಲೆಚುಕ್ಕೆ ರೋಗ.ಹೂ ಅಂಗಮಾರಿ.ವಿಕಾರತೆ.ಇಂತಹ ರೋಗಗಳು ಸಾಮಾನ್ಯ.ಕಾಲ ಕಾಲಕ್ಕೆ ತಗುಲುವ ರೋಗಲಕ್ಷಣಕ್ಕೆ ಅನುಸಾರವಾಗಿ ನುರಿತ ತಙ್ನರ ಸಲಹೆ ಮೇರೆಗೆ ರೋಗ ಹತೋಟಿ ಮಾಡುವದರಿಂದ ಉತ್ತಮ ಕಾಯಿ.ಹಣ್ಣು.ಇಳುವರಿಯನ್ನು ಹೊಂದಬಹುದು.
ಕೊಯ್ಲು ಮತ್ತು ಇಳುವರಿ:
ಕಸಿ ಗಿಡಗಳು ನಾಟಿ ಮಾಡಿದ ಎರಡನೇ ವರ್ಷದಿಂದ ಹೂ ಬಿಡಲು ಪ್ರಾರಂಬಿಸುತ್ತವೆ ಆದರೂ 4 ವರ್ಷದ ನಂತರ ನಿಯಮಿತ ಹಣ್ಣು ಬಿಡುವದನ್ನು ಪ್ರೋತ್ಸಾಹಿಸಬೇಕು.ಹತ್ತು ವರ್ಷದ ನಂತರ ಗರಿಷ್ಠ ಇಳುವರಿಯನ್ನು ಪಡೆಯಬಹುದು.
ಮೊದಲ ನೇ 5 ರಿಂದ 10 ವರ್ಷದಲ್ಲಿ ಪ್ರತಿ ಗಿಡಕ್ಕೆ 50 ರಿಂದ 400 ಕಾಯಿಯವರೆಗೂ ಪ್ರತಿ ಹೆಕ್ಟೇರು ಗೆ 10 ರಿಂದ 100 ಕ್ವಿಂಟಾಲ್ ವರೆಗೂ ಪಡೆಯಬಹುದು.
20 ವರ್ಷದ ನಂತರ ಪ್ರತಿ ಮರದಿಂದ 1500 ಕ್ಕೂ ಹೆಚ್ಚು ಕಾಯಿ ಅಂದರೆ ಪ್ರತಿ ಹೆಕ್ಟೇರ್ ಗೆ 300 ಕ್ವಿಂಟಾಲ್ ವರೆಗೂ ಇಳುವರಿ ಪಡೆಯಬಹುದು.

ವಿಷೇಶ ಸೂಚನೆ : ಸೂಚಿಸಿರುವ ಇಳುವರಿ ಪ್ರತಿ ಹೆಕ್ಟೇರ್ ಗೆ ನಾಟಿ ಮಾಡಿರುವ ಗಿಡಗಳ ಅಂತರದ ಮೇಲೆ ವ್ಯತ್ಯಾಸವಿರುತ್ತದೆ.

ಮಂಗಳವಾರ, ಜುಲೈ 20, 2021

ಪಾಲಕ್ ಸೊಪ್ಪು.

ಮದ್ಯ ಏಷ್ಯಾದ ಸ್ಥಳೀಯ ಸಸ್ಯ ಪಾಲಕ್ ಸೊಪ್ಪು ಅಮರಾಂಥೇಸಿಯೆ ಇದರ ಮೂಲ ನಾಮಧೇಯ.ಸಹಜವಾಗಿ ಇದು 30 ಸೆಂ.ಮೀ ವರೆಗೂ ಬೆಳೆಯುತ್ತದೆ.ಪಾಲಕ್ ಸೊಪ್ಪನ್ನು ತರಕಾರಿಯಾಗಿ ಆಹಾರ ಪದಾರ್ಥಗಳಲ್ಲಿ ಬಳಸುತ್ತಾರೆ.ಪಾಲಕ್ ಸೊಪ್ಪಿನಲ್ಲಿ ನಾರಿನಂಶ.ಪ್ರೋಟಿನ್.ಕಬ್ಬಿಣಾಂಶ.ಪೊಟ್ಯಾಶಿಯಮ್.ಓಮೆಗಾ 3 ಪ್ಯಾಟಿಯಾಸಿಡ್.ವಿಟಮಿನ್  'ಏ" ಮತ್ತು 'ಸಿ" ಹೇರಳವಾಗಿದೆ.ಪಾಲಕ್ ಸೊಪ್ಪಿನ ಸೇವನೆಯಿಂದ ಸೋರಿಯಾಸಿಸ್.ತುರಿಕೆ.ಒಣಚರ್ಮ.ತಲೆಕೂದಲಿನ ಸಮಸ್ಯೆಗಳಿಗೆ ಇದರ ಸೇವನೆಯಿಂದ ನಿಯಂತ್ರಿಸ ಬಹುದು.ಇದರಲ್ಲಿರುವ  ಹೇರಳವಾದ ಕಬ್ಬಿಣಾಂಶವು ರಕ್ತವ್ರುದ್ದಿಗೆ ತುಂಬ ಸಹಕಾರಿ.
ಮಣ್ಣು ಮತ್ತು ಬಿತ್ತನೆ ಕಾಲ:
ಪಾಲಕ್ ಸೊಪ್ಪಿನ ಬೆಳೆಗೆ ಚೆನ್ನಾಗಿ ನೀರು ಬಸಿದು ಹೋಗುವ.ಎಲ್ಲಾ ಗುಣಗಳ ಮಣ್ಣು ಸೂಕ್ತ.ಸಾವಯವ ಫಲವತ್ತತೆಯ ಮಣ್ಣು ಉತ್ತಮ ಪೋಶಕಾಂಶಯುಕ್ತ ಗುಣಮಟ್ಟದ ಸೊಪ್ಪಿನ್ನು ಪಡೆಯಲು ಸೂಕ್ತ.ಸಹಜವಾಗಿ ಸೆಪ್ಟೆಂಬರ್  ಇಂದ ನವೆಂಬರ್ ತಿಂಗಳ ವಾತಾವರಣ ಕಾಲಮಾನ ಈ ಬೆಳೆಗೆ ತುಂಬ ಸೂಕ್ತವಾದ ಕಾಲಮಾನ.

ಪಾಲಕ್ ಸೊಪ್ಪಿನ ತಳಿಗಳು:
1. ಆರ್ಕಾ ಅನುಪಮ: 90 ದಿವಸದ ಅವದಿಯಲ್ಲಿ 4 ಕಟಾವಿನಲ್ಲಿ ಹೆಕ್ಟೆರ್  ಗೆ 40 ಟನ್ ಸೊಪ್ಪು ಪಡೆಯಬಹುದು.
2. ಆಲ್ ಗ್ರೀನ್ : 90 ರಿಂದ 100 ದಿನ ಅವದಿಯಲ್ಲಿ 6 ರಿಂದ 7 ಕಟಾವಿಗೆ ಹೆಕ್ಟೆರ್ ಗೆ 110 ಟನ್ ಸೊಪ್ಪು ಪಡೆಯಬಹುದು.
3. ಪೂಸಾ ಜ್ಯೋತಿ: 90 ದಿನವದಿಯಲ್ಲಿ 7 ರಿಂದ 8 ಕಟಾವಿನಲ್ಲಿ ಹೆಕ್ಟೆರ್ ಗೆ 45 ಟನ್ ಇಳುವರಿ ಪಡೆಯಬಹುದು.

ಪಾಲಕ್ ಸೊಪ್ಪಿನ ಬಿತ್ತನೆ ಕ್ರಮ:
ಮೊದಲು ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಿ ಸಣ್ಣ ಮಣ್ಣಾಗಿ ಮಾಡಬೇಕು.ನಂತರ ಹೆಕ್ಟೆರ್ ಗೆ 20 ರಿಂದ 25 ಟನ್ ಕೊಟ್ಟಿಗೆ ಗೊಬ್ಬರ ಬೆರೆಸಬೇಕು.ನಂತರ ಸಾರಜನಕ 125 ಕಿ.ಗ್ರಾಂ.ರಂಜಕ 100 ಕಿ.ಗ್ರಾಂ.ಪೊಟ್ಯಾಶ್ 100 ಕಿ.ಗ್ರಾಂ ಗೊಬ್ಬರವನ್ನ ಪ್ರತಿ ಹೆಕ್ಟೇರ್ ಗೆ ಸೂಚಿಸಿದ ಗೊಬ್ಬರದ ಶೇ 50 ರಷ್ಟು ಗೊಬ್ಬರವನ್ನು ಮಣ್ಣಿಗೆ ಬೆರೆಸಿ ನಂತರ 3 ಮೀ x 1 ಮೀ  ಉದ್ದ x ಅಗಲದ ಸಸಿ ಮಡಿಗಳನ್ನು ಮಾಡಿ ಹೆಕ್ಟೇರ್ ಗೆ 25 ಕಿ.ಗ್ರಾಂ ಬೀಜದಂತೆ ಸಸಿ ಮಡಿಗಳ ಮೇಲೆ ಬೀಜವನ್ನು ಚೆಲ್ಲಿ ತೆಳ್ಳಗೆ ಮಣ್ಣು ಕೊಡಬೇಕು.ನಂತರ ತುಂತುರು ನೀರಾವರಿಯಲ್ಲಿ ನೀರು ಕೊಡಬೇಕು.
ನೀರಾವರಿ ಅಂತರ ಬೇಸಾಯ:
ಬೀಜ ಮೊಳಕೆಯೊಡೆದ ನಂತರ ಮಣ್ಣು ಮತ್ತು ಸ್ಥಳಿಯ ಹವಾಗುಣಕ್ಕೆ ಅನುಗುಣವಾಗಿ ಪ್ರತಿ 4 ರಿಂದ 5 ದಿನಕ್ಕೊಮ್ಮೆ ನೀರು ಕೊಟ್ಟು ಸಸಿಮಡಿಗಳಲ್ಲಿ ಕಳೆ ನಿರ್ವಹಣೆ ಮಾಡಿ 30 ನೇ ದಿನದಲ್ಲಿ ಮೇಲೆ ಸೂಚಿಸಿದ ಸಮಮಿಶ್ರಣದ ಉಳಿದ ಶೇ 50 ಗೊಬ್ಬರವನ್ನು ನೀಡಬೇಕು.ಎರೆಜಲ.ಗೋಮೂತ್ರಗಳನ್ನು ಹಂತ ಹಂತವಾಗಿ ನೀರಾವರಿಯ ಜೊತೆ ನೀಡುವದರಿಂದ ಗುಣಮಟ್ಟದ ಪೋಶಕಾಂಷಯುಕ್ತ ಸೊಪ್ಪನ್ನು ಪಡೆಯಬಹುದು.

ಪಾಲಕ್ ಸೊಪ್ಪಿಗೆ ತಗುಲುವ ರೋಗಗಳು:
ಹೇನು.ಎಲೆ ತಿನ್ನುವ ಕೀಟ.ಸಾಮಾನ್ಯ. ಕೀಟನಾಶಕಗಳ ಸಿಂಪಡಣೆಯಿಂದ ಹತೋಟಿ ಮಾಡಬಹುದು.

ಕೊಯ್ಲು ಮತ್ತು ಇಳುವರಿ:
ಬಿತ್ತನೆ ಮಾಡಿದ 30 ನೇ ದಿನದಿಂದ ಮೊದಲ ಕೊಯ್ಲು ಪ್ರಾರಂಭವಾಗಿ 90 ನೇ ದಿನಕ್ಕೆ ಕೊಯ್ಲು ಮುಕ್ತಾಯವಾಗುತ್ತದೆ ಮೊದಲ ಕೊಯ್ಲಿ ನಿಂದ ಕೊನೆ ಕೊಯ್ಲಿನ ವರೆಗೂ 5 ರಿಂದ 6 ಬಾರಿ ಕೊಯ್ಲು ಮಾಡಬಹುದು.ಹೆಕ್ಟೇರ್ ಗೆ 10 ರಿಂದ 12 ಟನ್ ಇಳುವರಿ ಪಡೆಯಬಹುದು.

ಮಂಗಳವಾರ, ಜುಲೈ 6, 2021

ಗ್ಲಾಡಿಯೋಲಸ್ ಪುಷ್ಪ ಕ್ರುಷಿ.

ಗ್ಲಾಡಿಯೋಲಸ್ ಒಂದು ಅಲಂಕಾರಿಕ ಪುಷ್ಪ.ಮೂಲ ಇದು ಕಾಡು ಪುಷ್ಪವಾದರೂ ತಳಿ ಸಂವರ್ಧನೆಯ ನಂತರ ಇದನ್ನು ಕ್ರುಷಿ ಮಾಡಲಾಗುತ್ತಿದೆ.ಇದರ ಮೂಲ  ಇಂಡೋನೇಷಿಯಾದ ಕಾಡುಗಳು.ಇದರಲ್ಲಿ 260 ಕ್ಕೂ ಹೆಚ್ಚು ಪ್ರಭೇದಗಳು ಕಂಡು ಬಂದಿವೆ.ಇದೊಂದು ಅಲಂಕಾರಿಕ ಪುಷ್ಪ.ಸಭೆ.ಸಮಾರಂಭ.ವೇದಿಕೆ ಅಲಂಕಾರ.ಹೂ ಕುಂಡ.ಪುಷ್ಪಗುಚ್ಚ.ತೋಟಗಾರಿಕೆಯಲ್ಲಿ ಹೆಚ್ಚು ಬಳಸಲಾಗುತ್ತದೆ.

ಮಣ್ಣು ಮತ್ತು ಹವಾಗುಣ :
ಗ್ಲಾಡಿಯೋಲಸ್ ಬೆಳೆಗೆ ಮಣ್ಣಿನ ರಸಸಾರ 6 -7 ಇರುವದು ಸೂಕ್ತ.ಫಲವತ್ತಾದ ಕಪ್ಪು ಮತ್ತು ಕೆಂಪು ಗೋಡು ಮಣ್ಣು ಸೂಕ್ತ.ತೆಗ್ಗು ಮತ್ತು ನೀರು ನಿಲ್ಲುವ ಜಾಗ ಸೂಕ್ತವಲ್ಲ.ತಂಪಾದ ವಾತಾವರಣದಲ್ಲಿ ಸಾಧಾರಣ ಬಿಸಿಲು ಈ ಬೆಳೆಗೆ ಸೂಕ್ತ .ಅತಿ ಹೆಚ್ಚು ತಾಪಮಾನ ಈ ಬೆಳೆಗೆ ಹೊಂದುವದಿಲ್ಲ.ಈ ಬೆಳೆಯನ್ನು ಎಲ್ಲಾ ಕಾಲಮಾನದಲ್ಲಿ ಬೆಳೆಯಬಹುದಾದರು ಜೂನ್ ನಿಂದ ನವೆಂಬರ್ ವರೆಗಿನ ಕಾಲ ತುಂಬ ಸೂಕ್ತ.
ಗ್ಲಾಡಿಯೋಲಸ್ ತಳಿಗಳು :
ಗ್ಲಾಡಿಯೋಲಸ್ ಹೂವುಗಳಲ್ಲಿ ಅವುಗಳ ಗಾತ್ರ.ಬಣ್ಣ.ಆಕಾರಕ್ಕೆ ಹೊಂದುವಂತೆ ಬಹಳ ತಳಿಗಳಿವೆ ಆವುಗಳಲ್ಲಿ ಪ್ರಮುಖವಾದವು.
ವೆಡ್ಡಿಂಗ್ ಬೂಕೆ.ಅರ್ಕಾ ಗೋಲ್ಢ್.ಫ್ರೆಂಡ್ ಶಿಪ್.ಅರ್ಕಾ ನವೀನ್.ಅಮೇರಿಕನ್ ಬ್ಯೂಟಿ.ಅರ್ಕಾ ಆಯುಷ್.ಅರ್ಕಾ ಅಮರ.ಕ್ಯಾಂಡಿಮನ್.ಅರ್ಕಾ ಬಿಳಿ.ಅರ್ಕಾ ಫೆಸಿಫಿಕ್.ಅರ್ಕಾ ಧರ್ಶನ್.ಕಾಪರ್ ಕಿಂಗ್.ತ್ರಿಲೋಕ.ಮಯೂರ.ಅರ್ಜುನ.ಅರ್ಕಾ ಪೂನಮ್.ಮೆಲೋಡಿ.ಇನ್ನು ಹಲವಾರು.
ಗ್ಲಾಡಿಯೋಲಸ್ ಬೇಸಾಯ ಕ್ರಮ :
ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಿ 30 ಸೆಂ.ಮೀ ಅಂತರದ ಸಾಲುಗಳು ಮಾಡಿ ಹೆಕ್ಟೇರಿಗೆ 25 ಟನ್ ಕೊಟ್ಟಿಗೆ ಗೊಬ್ಬರ.ಸಾರಜನಕ 50 ಕಿ.ಗ್ರಾಂ.ರಂಜಕ 70 ಕಿ.ಗ್ರಾಂ.ಪೊಟ್ಯಾಶ್ 70 ಕಿ.ಗ್ರಾಂ ಮಿಶ್ರಣದ ಗೊಬ್ಬರವನ್ನು ಸಾಲುಗಳಲ್ಲಿ ಚೆಲ್ಲಿ ಮಣ್ಣಿನಲ್ಲಿ ಬೆರೆಸ ಬೇಕು.ಗಡ್ಡೆಗಳನ್ನು ಪ್ರತಿ ಸಾಲಿನ ಬದುವಿನ ಮೇಲೆ 20 ಸೆಂ.ಮೀ ಅಂತರದಲ್ಲಿ.4 ರಿಂದ 5 ಸೆಂ.ಮೀ ಆಳದಲ್ಲಿ ಊರಬೇಕು.ನಂತರ ಮಣ್ಣಿನ ಹವಾಗುಣಕ್ಕನುಗುಣವಾಗಿ ಪ್ರತಿ 4 -5 ದಿನಕ್ಕೊಮ್ಮೆ ನೀರು ಹಾಯಿಸ ಬೇಕು.ಅಂತರ ಬೇಸಾಯ ಮತ್ತು ಕಳೆ ನಿರ್ವಹಣೆ ನಂತರ ನಾಟಿ ಮಾಡಿದ 35 ನೇ ದಿನಕ್ಕೆ ಪ್ರತಿ ಹೆಕ್ಟೇರ್ ಗೆ 50 ಕಿ.ಗ್ರಾಂ ಸಾರಜನಕವನ್ನು ಕೊಟ್ಟು ಸಸಿಗಳ ಬುಡಕ್ಕೆ ಮಣ್ಣು ಏರಿಸಿ ಕೊಡಬೇಕು.ನಂತರ ಸಸಿಗಳಿಗೆ ಆಸರೆಯಾಗಿ ಕೋಲುಗಳನ್ನು ಕೊಟ್ಟು ಕಟ್ಟಬೇಕು.
                 https://www.facebook.com/share/nKaUeLo1k6XSuYZF/?mibextid=oFDknk
ಗ್ಲಾಡಿಯೋಲಸ್ ಬೆಳೆಗೆ ತಗಲುವ ರೋಗಗಳು :
ಸೊರಗು ರೋಗ.ನುಶಿ.ಕಂದು ಕೊಳೆರೋಗ.ಎಲೆ ತಿನ್ನುವ ಹುಳು.ಬೂದಿ ರೋಗ.ಮುಂತಾದವು.ರೋಗ ಲಕ್ಷಣಗಳು ಕಂಡು ಬಂದಾಗ ತಙ್ನರ ಸಲಹೆ ಮೇರೆಗೆ ರೋಗ ಹತೋಟಿ ಮಾಡುವದರಿಂದ ಉತ್ತಮ ಗುಣಮಟ್ಟದ ಹೂವುಗಳನ್ನು ಪಡೆಯಬಹುದು. 

ಕೊಯ್ಲು.ಇಳುವರಿ.ಮತ್ತು ಸಂಗ್ರಹಣೆ :
ನಾಟಿ ಮಾಡಿದ 70 ರಿಂದ 90 ದಿನಗಳಿಗೆ ಹೂ ಕೊಯ್ಲಿಗೆ ಸಿದ್ದವಾಗುತ್ತದೆ.ಒಂದು ಹೆಕ್ಟೇರ್ ಗೆ 2 ರಿಂದ 2½ ಲಕ್ಷ ಹೂವಿನ ದಂಟುಗಳು ಪಡೆಯಬಹುದು.ಜೊತೆಗೆ ಮುಂದಿನ ಬೆಳೆಗೆ  ಬೇಕಾದಂತಹ ಗಡ್ಡೆಗಳನ್ನು 2 ರಿಂದ 5 ಲಕ್ಷ ಗಡ್ಡೆ ಪಡೆಯಬಹುದು.ಹೂ ದಂಟಿನ ಉದ್ದ.ತೆನೆಯಲ್ಲಿಯ ಹೂಗಳ ಸಂಖ್ಯೆ ಆದಾರದಲ್ಲಿ ವಿಂಗಡಿಸಿ ಚಿಕ್ಕ ಚಿಕ್ಕ ಕಟ್ಟುಗಳನ್ನು ಮಾಡಿ ಸುಕ್ರೋಸ್ ಶೇ.15 ಮತ್ತು ಹೆಡ್ರಾಕ್ಸಿಕ್ವಿನೋಲಿನ್ ದ್ರಾವಣದಲ್ಲಿ ಕೊಠಡಿಯ ಶೀತ 1.7 ಡಿ.ಸೆ ಇಂದ 4.4 ಡಿ.ಸೆ ಅಲ್ಲಿ ಸಂಗ್ರಹಿಸಿ ನಂತರ ಮಾರುಕಟ್ಟೆ ಮಾಡಬಹುದು.

ಬೀಟ್ರೂಟ್ ಬೆಳೆ ಮಾಹಿತಿ.

ಬೀಟ್ರೂಟ್ ಒಂದು ಸಿಹಿಯಾದ ಕಡುಗೆಂಪು ಬಣ್ಣದ ಅಲ್ಪಾವದಿ ತರಕಾರಿ ಬೆಳೆಯಾಗಿದ್ದು ಇದು ನಮ್ಮ ದೇಹಕ್ಕೆ ಬೇಕಾದ 'ಸಿ" ಅನ್ನಾಂಗ ಮತ್ತು ಹೇರಳವಾದ ಖನಿಜಾಂಶಗಳನ್ನು ಒದಗಿಸುತ್ತದೆ.
ಬೀಟ್ರೂಟ್ ಬೆಳೆ ಚೆನ್ನಾಗಿ ನೀರು ಬಸಿದು ಹೋಗುವ ಮರಳು ಮಿಶ್ರಿತ ಗೋಡು ಮಣ್ಣಿನಲ್ಲಿ ಹಾಗೂ ಸವಳು ಮಣ್ಣಿನಲ್ಲಿ ಬೆಳೆಯಬಹುದು.ಚಳಿಗಾಲದ ಬೆಳೆಯಲ್ಲಿ ಒಳ್ಳೆಯ ಗುಣಮಟ್ಟದ ಗೆಡ್ಡೆಗಳು ಹಾಗು ಇಳುವರಿ ಪಡೆಯಬಹುದು.

ಬೀಟ್ರೂಟ್ ಬಿತ್ತನೆ ಕಾಲ : 
ಚಳಿಗಾಲದ ಬೆಳೆಯಾಗಿ ಅಕ್ಟೋಬರ್ - ನವೆಂಬರ್ ನಲ್ಲಿ ಹಾಗು ಮಳೆಗಾಲದ ಬೆಳೆಯಾಗಿ ಜೂನ್ - ಜುಲೈ ಅಲ್ಲಿ ಬಿತ್ತಬಹುದು.
ತಳಿಗಳು : ಕ್ರಮ್ಸನ್ ಗ್ಲೋಬ್.ಡೆಟ್ರಾಯಿಟ್ ಡಾರ್ಕ್ ರೆಡ್.ಹಾಗು ಮುಂತಾದವು.
ಬೀಟ್ರೂಟ್ ಬಿತ್ತನೆ : 
ಭೂಮಿಯನ್ನು ಚೆನ್ನಾಗಿ ಆಳವಾಗಿ ಉಳುಮೆ ಮಾಡಿ ಹೆಂಡೆ ಒಡೆದು ಸಣ್ಣ ಮಣ್ಣು ಮಾಡಿ ತಳಿಗಳಿಗೆ ಅನುಗುಣವಾಗಿ 30 ರಿಂದ 45 ಸೆಂ.ಮೀ ಅಂತರದ ಸಾಲು ಮಾಡಿ ಸಾಲಿನಲ್ಲಿ 20 ಟನ್ ಕೊಟ್ಟಿಗೆ ಗೊಬ್ಬರ ಚೆಲ್ಲಿ.ನಂತರ ಸಾರಜನಕ 75 ಕಿ.ಗ್ರಾಂ. ರಂಜಕ 100 ಕಿ.ಗ್ರಾಂ. ಪೊಟ್ಯಾಶ್ 50 ಕಿ.ಗ್ರಾಂ ಮಿಶ್ರಣ ಮಾಡಿದ ಗೊಬ್ಬರವನ್ನು ಮಣ್ಣಿನಲ್ಲಿ ಬೆರೆಸಿ ನೀರನ್ನು ಹಾಯಿಸಿ ನಂತರ ಸಾಲಿನ ಒಂದು ಬದುವಿನ ಮೇಲೆ 15 ರಿಂದ 20 ಸೆ.ಮೀ ಅಂತರದಲ್ಲಿ ಬೀಜವನು ಊರಿಸಬೇಕು.ಬಿತ್ತಿದ 4 ವಾರಗಳ ನಂತರ ಹೆಚ್ಚುವರಿ ಸಸಿಗಳನ್ನು ಕೀಳಿಸಿ ಜೊತೆಗೆ ಕಳೆ ನಿರ್ವಹಣೆ ಮಾಡಿ ಉಳಿದ ಶೇ 50 ಗೊಬ್ಬರವನ್ನು ಮೇಲುಗೊಬ್ಬರವಾಗಿ ಕೊಟ್ಟು ಸಸಿಗಳ ಬುಡಕ್ಕೆ ಮಣ್ಣು ಕೊಡಬೇಕು.
ನೀರಾವರಿ : ಮಣ್ಣು ಮತ್ತು ಸ್ಥಳಿಯ ಹವಾಗುಣಕ್ಕೆ ಅನುಗುಣವಾಗಿ 5 ರಿಂದ 6 ದಿನಕ್ಕೊಮ್ಮೆ ನೀರು ಬಿಡಬೇಕು.
ಬೀಟ್ರೂಟ್ ಬೆಳೆಯ ರೋಗಗಳು : 
ಹೇನು.ಜಿಗಿ ಹುಳು.ಎಲೆಚುಕ್ಕೆ ರೋಗ.ಗರಿ ತಿನ್ನುವ ಹುಳು.ರೋಗ ಲಕ್ಷಣಕ್ಕೆ ಅನುಗುಣವಾಗಿ ತಙ್ನರ ಸಲಹೆ ಮೇರೆಗೆ ರೋಗ ಹತೋಟಿ ಮಾಡಿದಲ್ಲಿ ಉತ್ತಮ ಇಳುವರಿ ಪಡೆಯಬಹುದು.
ಇಳುವರಿ : ಬಿತ್ತನೆ ಮಾಡಿದ 3 ತಿಂಗಳ ನಂತರ ಕಟಾವಿಗೆ ಬರುತ್ತದೆ.ಪ್ರತಿ ಹೆಕ್ಟೇರ್ ಗೆ 20 ರಿಂದ 30 ಟನ್ ಇಳುವರಿ ಪಡೆಯ ಬಹುದು.

ಶುಕ್ರವಾರ, ಜುಲೈ 2, 2021

ಸೇವಂತಿಗೆ ಹೂ ಬೆಳೆ ಮಾಹಿತಿ.


ಸೇವಂತಿಗೆ ಆಸ್ಟರೇಸಿಯಾ ಕುಟುಂಬದ ಕ್ರಿಸ್ಯಾಂಥಮಮ್ ಜಾತಿಯ  ಹೂವಿನ ಸಸ್ಯ. ಅವು ಏಷ್ಯಾ  ಮತ್ತು ಈಶಾನ್ಯ  ಯುರೋಪ್ ನ ಸ್ಥಳಿಯ ಸಸ್ಯ.ಮಾನವ ಕ್ರುಷಿ ಮಾಡಿದ ಮೊದಲ ಹೂ ಬೆಳೆ ಎಂದೇ ಖ್ಯಾತಿ ಪಡೆದ ಸೇವಂತಿಗೆ ಹೂ ಒಂದು ಪ್ರಮುಖ ವಾಣಿಜ್ಯ ಪುಷ್ಪ ಬೆಳೆ.ಈ ಹೂವನ್ನು ಮಾಲೆ.ಬಿಡಿ ಹೂ.ಅಲಂಕಾರಿಕ ವಸ್ತುವಾಗಿ ಪುಷ್ಪ ಗುಚ್ಚ ಮಾಡಲು.ವೇದಿಕೆ ಅಲಂಕಾರಕ್ಕೆ.ಧಾರ್ಮಿಕ ಕಾರ್ಯ.ಪೂಜೆ ಪುನಸ್ಕಾರಗಳಲ್ಲಿ ಹೇರಳವಾಗಿ ಬಳಸುತ್ತಾರೆ.
ಮಣ್ಣು ಮತ್ತು ಹವಾಗುಣ :ಭೂಮಿಯ ರಸಸಾರ 6 ರಿಂದ 7 ಇರುವ ಮರಳು ಮಣ್ಣು.ಮರಳು ಮಿಶ್ರಿತ ಗೋಡು ಮಣ್ಣು.ಚೆನ್ನಾಗಿ ನೀರು ಬಸಿದು ಹೋಗುವ ಮಣ್ಣು ಸೂಕ್ತ.ನೀರು ನಿಲ್ಲುವ ಜಾಗ ಈ ಬೆಳೆಗೆ ಯೋಗ್ಯವಲ್ಲ.ಈ ಬೆಳೆಗೆ ಗಿಡಗಳ ಬೆಳವಣಿಗೆಗೆ ಹಗಲು ದೊಡ್ಡದಿರುವ ಹಾಗು ಹೂ ಬಿಡಲು ರಾತ್ರಿ ದೊಡ್ಡದಿರುವ ಕಾಲ ಸೂಕ್ತ ಅಂದರೆ ಈ ಬೆಳೆಯನ್ನು ಮೇ - ಜೂನ್  ನಡುವೆ ಮಾಡುವದು ಸೂಕ್ತ.
ಸೇವಂತಿಗೆ ತಳಿಗಳು :
ಹಳದಿ .ಬಿಳಿ.ಕೆಂಪು.ಬಣ್ಣದ ತಳಿಗಳು ವಾಣಿಜ್ಯ ಮಟ್ಟದ ಕ್ರುಷಿಗೆ ಸೂಕ್ತ.ಆದರೂ ಇತ್ತೀಚೆಗೆ ಇತರೆ ಬಣ್ಣದ ತಳಿಗಳು ಹೆಚ್ಚು ಜನಪ್ರಿಯವಾಗುತ್ತಿವೆ.
ಹಳದಿ ತಳಿಗಳು : 
ಆರ್ಕಾ ಸ್ವರ್ಣ.ಎಲ್ಲೊ ಗೋಲ್ಢ್.ವಾಸಂತಿಕ.ಕರ್ನೂಲ್.ಜಯಂತಿ.ಇಂದಿರಾ.ಬಸಂತಿ.ಕಸ್ತೂರಿ.ಉಷಾಕಿರಣ.ರಾಣಿ.ಸಾರವಾಳ.ದುಂಡಿ.ಮುಂತಾದವು.

ಕೆಂಪು ತಳಿಗಳು :
ರವಿಕಿರಣ.ರೆಡ್ ಗೋಲ್ಢ್.ಮುಂತಾದವು.

ಬಿಳಿ ತಳಿಗಳು :
ಹಿಮಾನಿ.ರೀಟಾ.ಕೀರ್ತಿ.ಚಂದ್ರಿಕಾ.ರಾಜ.ಜೋತ್ಸ್ನ್.ಮೀರಾ. ಮುಂತಾದವು.
ಸೇವಂತಿಗೆ ಸಸ್ಯಾಭಿವ್ರುದ್ದಿ :
  • ಕಂದುಗಳು ಹಾಗು ಮ್ರುದುಕಾಂಡದ ತುಂಡುಗಳು ನಾಟಿಗೆ ಉಪಯೋಗಿಸುವದು ಉತ್ತಮ.ಕಡ್ಡಿಯ ತುಂಡುಗಳು ಬಳಸುವ ಮೊದಲು ಮೀಥಾಕ್ಸಿ ಈಥ್ಯೆಲ್ ಕ್ಲೋರೆಡ್ 2 ಗ್ರಾಂ  ಪ್ರತಿ ಲೀ ನೀರಿಗೆ ಬೆರೆಸಿ ನಾಟಿ ಮಾಡುವ ಕಡ್ಡಿಗಳ ತಳಬಾಗವನ್ನು ಅದರಲ್ಲಿ ಅದ್ದಿ ನಾಟಿಗೆ ಬಳಸುವದರಿಂದ ಸಸ್ಯಗಳ ಬೇರು ಬೆಳವಣಿಗೆಗೆ ಪ್ರಚೊದನೆಯಾಗುತ್ತದೆ
  • ಗ್ಲಾಡಿಯೋಲಸ್ ಪುಷ್ಪ ಕ್ರುಷಿ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಸೇವಂತಿಗೆ ನಾಟಿ ಪದ್ದತಿ :
ಮಣ್ಣನ್ನು ಚೆನ್ನಾಗಿ ಉಳುಮೆ ಮಾಡಿ 30 ಸೆಂ.ಮೀ ಅಂತರದ ಸಾಲುಗಳನ್ನು ಮಾಡಿ ಹೆಕ್ಟೆರ್ ಗೆ 25 ಟನ್ ಕೊಟ್ಟಿಗೆ ಗೊಬ್ಬರವನ್ನು ಸಾಲುಗಳಲ್ಲಿ ಚೆಲ್ಲಿ.ನಂತರ ಪ್ರತಿ ಹೆಕ್ಟೇರಿಗೆ ಸಾರಜನಕ 33 ಕಿ.ಗ್ರಾಂ.ರಂಜಕ 150 ಕಿ.ಗ್ರಾಂ.ಪೊಟ್ಯಾಶ್ 100 ಕಿ.ಗ್ರಾಂ ಮಿಶ್ರಣದ ಗೊಬ್ಬರವನ್ನು ಸಾಲುಗಳಲ್ಲಿ ಬಿತ್ತಿ ಮಣ್ಣಲ್ಲಿ ಬೆರೆಸಿ ನೀರು ಹಾಯಿಸಿ.ನಂತರ ಸಾಲುಗಳ ಒಂದು ಬದುವಿನ ಮೇಲೆ 30 ಸೆಂ.ಮೀ ಅಂತರದಲ್ಲಿ ಸಸಿಗಳನ್ನು ನಾಟಿ ಮಾಡಿ.
ಕಳೆ ಮತ್ತು ನೀರು ನಿರ್ವಹಣೆ :
ಮಣ್ಣು ಮತ್ತು ಸ್ಥಳಿಯ ಹವಾಗುಣಕ್ಕೆ ಅನುಗುಣವಾಗಿ ಪ್ರತಿ 4 -ರಿಂದ 5 ದಿನಕ್ಕೊಮ್ಮೆ ನೀರು ಬಿಡಬೇಕು.ನಂತರ ಅಂತರ ಬೇಸಾಯದಿಂದ ಕಳೆ ನಿರ್ವಹಣೆ ಮಾಡಿ.ಮೇಲುಗೊಬ್ಬರವಾಗಿ ನಾಟಿ ಮಾಡಿದ 30 ದಿನಕ್ಕೆ ಹೆಕ್ಟೇರಿಗೆ 45 ಕಿ.ಗ್ರಾಂ ಸಾರಜನಕವನ್ನು ನೀಡಬೇಕು.ಇದಾದ ಮತ್ತೊಂದು ತಿಂಗಳ ನಂತರ ಮತ್ತೊಮ್ಮೆ 45 ಕಿ.ಗ್ರಾಂ ಸಾರಜನಕ ನೀಡಬೇಕು.ನಾಟಿ ಮಾಡಿದ 30 ದಿನದ ನಂತರ ಸಸಿಗಳ ಕುಡಿ ಚಿವುಟಿ ಜಿಬ್ಬರ್ಲಿಕ್ ಓಷದವನ್ನು ಪ್ರತಿ 10 ಲೀ ನೀರಿಗೆ 1 ಗ್ರಾಂ ನಂತೆ ಬೆರೆಸಿ ಸಿಂಪಡಿಸುವದರಿಂದ ಸಸಿಗಳು ಹೆಚ್ಚು ಕವಲೊಡೆದು ಹೆಚ್ಚು ಹೂ ಬಿಡುವದಕ್ಕೆ ಸಹಕಾರಿಯಾಗುತ್ತದೆ.
ಸೇವಂತಿಗೆ ಬೆಳೆಗೆ ತಗುಲುವ ರೋಗಗಳು :
ಸಸಿ ಹೇನು.ಥ್ರಿಪ್ಸ್.ಮೊಗ್ಗು ಕೊರೆಯುವ ಹುಳು.ತುಕ್ಕು ರೋಗ.ಬೂದಿರೋಗ.ಬೇರುಕೊಳೆ ರೋಗ.ಹಳದಿ ನಂಜು.ಎಲೆ ಚುಕ್ಕೆ ರೋಗಗಳು ಕಂಡುಬಂದ ಸಂದರ್ಭದಲ್ಲಿ ತಙ್ನರ ಸಲಹೆ ಮೇರೆಗೆ ಅವುಗಳನ್ನು ನಿಯಂತ್ರಿಸುವದರಿಂದ ಹೆಚ್ಚಿನ ಇಳುವರಿ ಪಡೆಯ ಬಹುದು.
ಕೊಯ್ಲು ಮತ್ತು ಇಳುವರಿ :
ನಾಟಿ ಮಾಡಿದ 90 ದಿನಗಳಿಂದ ಹೂ ಬರಲು ಶುರುವಾಗಿ ಮುಂದೆ 45 ರಿಂದ 55 ದಿನದವರೆಗು ಹೂ ಕೊಡುತ್ತವೆ.ಪ್ರತಿ ಹೆಕ್ಟೆರ್ ಗೆ 10 ರಿಂದ 15 ಟನ್ ಇಳುವರಿ ಪಡೆಯಬಹುದು.

ಬಾಳೆ ಕ್ರುಷಿ

ಬಾಳೆ ಒಂದು ಬಹುಜನಪ್ರಿಯ ಹಣ್ಣಿನ ಬೆಳೆ ಮಾವಿನಹಣ್ಣಿನ ನಂತರದ ಸ್ಥಾನ ಬಾಳೆ ಹಣ್ಣಿಗೆ ಲಭಿಸುತ್ತದೆ.ಭಾರತದಲ್ಲಿ 50 ಕ್ಕೂ ಹೆಚ್ಚು ತಳಿಗಳಿದ್ದು ಅವು ವಿವಿಧ ಭಾಗದಲ್ಲಿ ಬೆಳೆ...