expr:class='"loading" + data:blog.mobileClass'>

ಬುಧವಾರ, ಜೂನ್ 30, 2021

ಕ್ಯಾಪ್ಸಿಕಂ.ದೊಣ್ಣೆಮೆಣಸಿನ ಮಾಹಿತಿ.

ದೊಣ್ಣೆ ಮೆಣಸಿನ ಮೂಲ ತವರು ಅಮೇರಿಕ.ನೂರಾರು ವರ್ಷಗಳಿಂದಲು ಅಮೆರಿಕದ ಸಮಶೀತೋಷ್ಣ ವಲಯದ ಪ್ರಧೇಶದಲ್ಲಿ ಹೆಚ್ಚಾಗಿ ಬೆಳೆಯುತ್ತಿದ್ದರು.ಇದನ್ನು ಸಿಹಿ ಮೆಣಸು ಎಂದು ಸಹ ಕರೆಯುತ್ತಾರೆ ಇತ್ತೀಚೆಗೆ ಇದನ್ನು ಎಲ್ಲಾ ಪ್ರಧೇಶಗಳಲ್ಲು ಯಶಸ್ವಿ ಬೆಳೆ ಬೆಳೆಯುತ್ತಿದ್ದಾರೆ.ಕ್ಯಾಪ್ಸಿಕಂ ಅನ್ನು ತರಕಾರಿಯಾಗಿ.ಮಸಾಲೆ ಪಧಾರ್ಥವಾಗಿ ಮತ್ತು ಕೆಲವೊಂದು ಓಷದ ತಯಾರಿಕೆಯಲ್ಲುಿ ಬಳಸುತ್ತಾರೆ.ಇದರಲ್ಲಿ ಮನುಷ್ಯನ ದೇಹಕ್ಕೆ ಅತ್ಯಾವಶ್ಯಕವಾದ ವಿಟಮಿನ್ 'ಎ" ಮತ್ತು 'ಸಿ" ಹೇರಳವಾಗಿ ದೊರೆಯುತ್ತದೆ.
ಮಣ್ಣು ಮತ್ತು ಬಿತ್ತನೆ ಕಾಲ :
ದೊಣ್ಣೆ ಮೆಣಸಿನ ಬೆಳೆಗೆ ಮಣ್ಣಿನ ರಸಸಾರ 5.4 ರಿಂದ 6.8 ಇರುವ ಚೆನ್ನಾಗಿ ನೀರು ಬಸಿದು ಹೋಗುವ ಕೆಂಪು ಗೋಡು ಮಣ್ಣು ಮತ್ತು ಮದ್ಯಮ ಕಪ್ಪು ಮಣ್ಣಿನಲ್ಲಿ ಚೆನ್ನಾಗಿ ಬೆಳೆಯ ಬಹುದು.ತೆಗ್ಗು.ಸವಳು ಮಣ್ಣು ಈ ಬೆಳೆಗೆ ಸೂಕ್ತವಲ್ಲ.ಈ ಬೆಳೆಯನ್ನು ಜುಲೈ - ಆಗಸ್ಟ್. ಮತ್ತು ಅಕ್ಟೋಬರ್ - ನವೆಂಬರ್ ನಾಟಿ ಮಾಡಲು ಸೂಕ್ತ ಕಾಲ.
 ದೊಣ್ಣೆ ಮೆಣಸಿನ ತಳಿಗಳು :
ಆರ್ಕಾ ಮೋಹಿನಿ.ಆರ್ಕಾ ಬಸಂತ್.ಆರ್ಕಾ ಗೊರವ್.ಯೆಲ್ಲೊ ವಂಡರ್.ದಾರವಾಡ ಲೋಕಲ್.ಡಿ ಎಂ ಸಿ - 14.ಅಪೂರ್ವ.ಕ್ಯಾಲಿಫೊರ್ನಿಯಾ ವಂಡರ್.ಮುಂತಾದವು.
ನಾಟಿ ವಿಧಾನ :
ಮೊದಲು ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಿ ನಂತರ 60 ಸೆಂ.ಮೀ.ಅಂತರದ ಸಾಲುಗಳು ಮಾಡಿ ಪ್ರತಿ ಹೆಕ್ಟೇರ್ ಗೆ 25 ಟನ್ ಕೊಟ್ಟಿಗೆ ಗೊಬ್ಬರವನ್ನು ಪ್ರತಿ ಸಾಲಿನಲ್ಲು ಚೆಲ್ಲಿ.ಸಾರಜನಕ 150 ಕಿ.ಗ್ರಾಂ. ರಂಜಕ 75 ಕಿ.ಗ್ರಾಂ. ಪೊಟ್ಯಾಶ್ 50 ಕಿ.ಗ್ರಾಂ ಮಿಶ್ರಣದ ಶೇ 50 ರಷ್ಟು ಗೊಬ್ಬರವನ್ನು ಸಾಲಿನಲ್ಲಿ ಚೆಲ್ಲಿ ಮಣ್ಣಿನಲ್ಲಿ ಬೆರೆಸಿ.ತೆಳುವಾಗಿ ನೀರು ಕೊಟ್ಟು.ಸಾಲಿನ ಹೊರ ಮಗ್ಗುಲಿನ ಎತ್ತರದ ದಿಣ್ಣೆಯ ಮೇಲೆ 45 ಸೆಂ.ಮೀ ಅಂತರದಲ್ಲಿ ಸಸಿ ನಾಟಿ ಮಾಡಬೇಕು.ಟ್ರೇ ಮತ್ತು ಕೊಕೊ ಪಿಟ್ ನಲ್ಲಿ ಬೆಳೆಸಿದ ಸಸಿಗಳು ನಾಟಿಗೆ ತುಂಬಾ ಸೂಕ್ತ.
ಅಂತರ ಬೇಸಾಯ ಮತ್ತು ನೀರಾವರಿ :
ಮಣ್ಣು ಮತ್ತು ಸ್ಥಳಿಯ ಹವಾಗುಣಕ್ಕೆ ಅನುಗುಣವಾಗಿ 3 ರಿಂದ 4 ದಿನಕ್ಕೊಮ್ಮೆ ನೀರು ಹಾಯಿಸ ಬೇಕು.ನಾಟಿ ಮಾಡಿದ 2 ವಾರದ ನಂತರ ಎಡೆಕುಂಟೆ ಹೊಡೆದು ಕಳೆ ನಿರ್ವಹಣೆ ಮಾಡಿ ಮೇಲೆ ತಿಳಿಸಿದ ಗೊಬ್ಬರದ ಉಳಿದ ಶೇ 50 ಗೊಬ್ಬರವನ್ನು ಕೊಟ್ಟು ಸಸಿಗಳ ಬುಡಕ್ಕೆ ಮಣ್ಣು ಏರಿಸಬೇಕು.3 ನೆ ವಾರದಿಂದ ನಾಲ್ಕನೆ ವಾರದಲ್ಲಿ ಬರುವ ಹೂವುಗಳನ್ನು ಚಿವುಟುವದರಿಂದ ಗಿಡಗಳ ಬೆಳವಣಿಗೆಗೆ ಸಹಕರಿಸ ಬೇಕು.ಇದರಿಂದ ಉತ್ತಮ ಗಾತ್ರದ ಗುಣಮಟ್ಟದ ಕಾಯಿಗಳನ್ನು ಮುಂದೆ ಪಡೆಯಲು ಸಹಕಾರಿಯಾಗುತ್ತದೆ.
ರೋಗಗಳು :
ಹೇನು.ಥ್ರಿಪ್ಸ್ ನುಸಿ.ಜೇಡ ನುಸಿ.ಹಣ್ಣು ಕೊರೆಯುವ ಹುಳು.ಸಸಿ ಸೊರಗು ರೋಗ.ಚಿಬ್ಬು ರೋಗ.ಬೂದಿರೋಗ.ಎಲೆ ಮುಟುರು ರೋಗ.ಎಲೆ ಚುಕ್ಕೆ ರೋಗ.ದುಂಡಾಣು ರೋಗ.ಈ ರೋಗ ಲಕ್ಷಣ ಸಮಯದಲ್ಲಿ ತಙ್ನರ ಸಲಹೆ ಮೇರೆಗೆ ರೋಗ ಹತೋಟಿ ಮಾಡಿದಲ್ಲಿ ಉತ್ತಮ ಇಳುವರಿ ಪಡೆಯಬಹುದು.
ಕೊಯ್ಲು ಮತ್ತು ಇಳುವರಿ :
  ದೊಣ್ಣೆ ಮೆಣಸು ನಾಟಿ ಮಾಡಿದ 50 ರಿಂದ 60 ದಿನಕ್ಕೆ ಕೊಯ್ಲು ಪ್ರಾರಂಭಿಸುತ್ತದೆ ಕಾಯಿಗಳು ಪೂರ್ಣ ಕೆಂಪು ಬಣ್ಣಕ್ಕೆ ತಿರುಗುವ ಮೊದಲೆ ಹಸಿರು ಬಣ್ಣದ ಬಲಿತ ಕಾಯಿ ಕೊಯ್ಲಿಗೆ ಸೂಕ್ತ.ಸಂಕರಣ ತಳಿಗಳಿಂದ ಪ್ರತಿ ಹೆಕ್ಟೆರ್ ಗೆ 25 ರಿಂದ 30 ಟನ್ ಇಳುವರಿ ಮತ್ತು ಇತರೆ ತಳಿಗಳಿಂದ ಪ್ರತಿ ಹೆಕ್ಟೆರ್ ಗೆ 10 ರಿಂದ 12 ಟನ್ ಇಳುವರಿ ಪಡೆಯಬಹುದು.

ಮಲ್ಲಿಗೆ ಹೂವಿನ ಕ್ರುಷಿ.

ಮಲ್ಲಿಗೆಯು 'ಒಲಿಯೇಸಿ" ಕುಟುಂಬದ ಜಾಸ್ಮಿನಂ ಉಪವರ್ಗಕ್ಕೆ ಸೇರಿದ ಬಳ್ಳಿ ಇಲ್ಲ ಪೊದೆ ಜಾತಿಗೆ ಸೇರಿದ ಸಸ್ಯ ನಮ್ಮ ದೇಶದಲ್ಲಿ 40 ಕ್ಕು ಹೆಚ್ಚು ಪ್ರಬೇದಗಳಿದ್ದರು ವಾಣಿಜ್ಯಿಕ ದ್ರುಷ್ಟಿಯಿಂದ ನಾಲ್ಕು ತಳಿಗಳು ಮಾತ್ರ ಮುಖ್ಯವಾದವು.ಹೂವುಗಳನ್ನ ಮುಡಿಯಲು.ಧಾರ್ಮಿಕ ಆಚರಣೆಗಳಿಗೆ.ಸಬಾಂಗಣ ಅಲಂಕಾರಕ್ಕೆ.ಜೊತೆಗೆ ಸುಗಂಧ ದ್ರವ್ಯ ತಯಾರಿಕೆಗೆ ಬಳಸಬಹುದು.
ಹವಾಗುಣ.ಮಣ್ಣು.ನಾಟಿಯ ಕಾಲ : 
ಮಲ್ಲಿಗೆ ಕ್ರುಷಿಗೆ ಶುಷ್ಕ ಆರ್ದ್ರತೆ ಇಂದ ಕೂಡಿದ ಚೆನ್ನಾಗಿ ನೀರು ಬಸಿದು ಹೋಗುವ ಮಣ್ಣಿನ ರಸಸಾರ 5.5 ರಿಂದ 6.5 ಇರುವ ಮರಳು ಮಿಶ್ರಿತ ಗೋಡು ಮಣ್ಣು ಸೂಕ್ತ.ಜೂನ್ - ಜುಲೈ ಮತ್ತು ಸೆಪ್ಟೆಂಬರ್ - ಅಕ್ಟೋಬರ್ ನಾಟಿಗೆ ಸೂಕ್ತ ಕಾಲ.
ತಳಿಗಳು :
ಆರ್ಕಾ ಸುರಭಿ.ಕಾಕಡಾ ಮಲ್ಲಿಗೆ.ಜಾಜಿ ಮಲ್ಲಿಗೆ.ದುಂಡು ಮಲ್ಲಿಗೆ.ಉಡುಪಿ ಮಲ್ಲಿಗೆ.ವಸಂತ ಮಲ್ಲಿಗೆ.ಮತ್ತು 'ಸಿ" 'ಓ"-1ಪಿಚ್ಚಿ.ಮುಂತಾದವು.
ನಾಟಿ ವಿಧಾನ :
ಭೂಮಿಯ ಆಳ ಉಳುಮೆಯ ನಂತರ.
ಕಾಕಡಾ ; 1.2*1.2 ಮೀ ಅಂತರ.6900 ಸಸಿ.
ದುಂಡು ಮಲ್ಲಿಗೆ ; 1.5*1.5 ಮೀ.4400 ಸಸಿ.
ಜಾಜಿ ಮಲ್ಲಿಗೆ ; 2 * 1.5 ಮೀ.3300 ಸಸಿ.
ಮೇಲ್ಕಂಡ ಅಳತೆಯಲ್ಲಿ ಗುಣಿಗಳನ್ನು ಮಾಡಿ ಅದರಲ್ಲಿ ಪ್ರತಿ ಗುಣಿಗೆ 20 ಕೆ ಜಿ ಕೊಟ್ಟಿಗೆ ಗೊಬ್ಬರ ಅಥವ 2 ರಿಂದ 5 ಕೆ ಜಿ ಎರೆಗೊಬ್ಬರದ ಜೊತೆ ಎಲೆಗೊಬ್ಬರ.ಬೇವಿನ ಹಿಂಡಿ.ಜೊತೆಗೆ ಮೇಲ್ಮಣ್ಣನ್ನು ಬೆರೆಸಿ ಎರಡು ವಾರ ಕೊಳೆಯಲು ಬಿಡಬೇಕು.ನಂತರ ಬಲಿತ ಬಳ್ಳಿ ಅಥವ ಗಿಡದಿಂದ ಸಸಿ ಮಡಿಯಲ್ಲಿ ಬೆಳೆಸಿದ ಬೇರಿನ ಕಡ್ಡಿಗಳನ್ನು ಪ್ರತಿ ಗುಣಿಯಲ್ಲು ನಾಟಿ ಮಾಡಿ ನೀರು ಬಿಡಬೇಕು.
ನಾಟಿ ಮಾಡಿದ ನಂತರ ಕಾಲ ಕಾಲಕ್ಕೊಮ್ಮೆ ಗುಣಿ ಸುತ್ತು ಮಾಡಿ ಕಳೆ ನಿರ್ಮೂಲನೆ ಮಾಡಬೇಕು.
ಗಿಡಗಳ ವಯಸ್ಸಿಗನುಗುಣವಾಗಿ ಪ್ರತಿ ಗಿಡಗಳಿಗೂ ಸಾರಜನಕ 120 ಗ್ರಾಂ.ರಂಜಕ 250 ಗ್ರಾಂ.ಪೊಟ್ಯಾಶ್ 250 ಗ್ರಾಂ ಮಿಶ್ರಣದ ಗೊಬ್ಬರವನ್ನು ನಾಲ್ಕು ಭಾಗದಲ್ಲಿ ವರ್ಷಕ್ಕೆ ನಾಲ್ಕು ಬಾರಿ ಗೊಬ್ಬರ ನೀಡಬೇಕು.
ಪ್ರೋನಿಂಗ್ ;
 ಕಾಕಡಾವನ್ನು ಮಾರ್ಚ್ - ಏಪ್ರಿಲ್ ನಡುವೆ.
ದುಂಡುಮಲ್ಲಗೆಯನ್ನು ಡಿಸೆಂಬರ್ - ಜನವರಿ ನಡುವೆ.
ಜಾಜಿ ಮಲ್ಲಗೆಯನ್ನು ಡಿಸೆಂಬರ್ - ಜನವರಿ ನಡುವೆ.
ಪ್ರೋನಿಂಗ್ ಮಾಡುವದರಿಂದ ಗಿಡಗಳ ಆಕಾರ.ಗಾತ್ರ.ರಚನೆಯನ್ನು ನಿರ್ವಹಿಸುವದರಿಂದ ಗಿಡಗಳು ಹೆಚ್ಚು ಚಿಗುರೊಡೆದು ಹೂ ಬಿಡಲು ಸಹಕಾರಿ ಆಗುತ್ತದೆ.
ರೋಗಗಳು :
ಮೊಗ್ಗು ಮತ್ತು ಕುಡಿ ಕೊರಕ.ಎಲೆ ತಿನ್ನುವ ಹುಳು.ಬಿಳಿ ನೊಣ.ಹಿಟ್ಟು ತಿಗಣೆ.ನುಸಿ.ಎಲೆ ಚುಕ್ಕೆ ರೋಗ.ಸರಗು ರೋಗ.ತುಕ್ಕು ರೋಗ.ಬೂದಿ ರೋಗ.ಬೇರು ಗಂಟು ರೋಗ.ಈ ರೋಗ ಲಕ್ಷಣ ಕಂಡು ಬಂದಲ್ಲಿ ತಙ್ನರ ಸಲಹೆ ಮೇರೆಗೆ ರೋಗ ನಿಯಂತ್ರಿಸುವದರಿಂದ ಉತ್ತಮ ಫಸಲು ದೊರಕುವದು.
ಕೊಯ್ಲು ಮತ್ತು ಇಳುವರಿ :
ನಾಟಿ ಮಾಡಿದ 6 ತಿಂಗಳ ನಂತರ ಹೂ ಬಿಡಲು ಪ್ರಾರಂಬಿಸುತ್ತವೆ.ಕಾಲ ಕಳೆದಂತೆ 3 ವರ್ಷದ ನಂತರ ಗರಿಷ್ಟ ಇಳುವರಿ ಶುರುವಾಗುತ್ತದೆ.12 ರಿಂದ 15 ವರ್ಷದ ವರೆಗೂ ಇಳುವರಿ ಪಡೆಯಬಹುದು.ಸಾಮಾನ್ಯವಾಗಿ ಹೆಕ್ಟೆರ್ ಗೆ 8 ರಿಂದ 10 ಟನ್ ಇಳುವರಿ ಪಡೆಯಬಹುದು.


ಗುಲಾಬಿ ಕ್ರುಷಿ.

ಗುಲಾಬಿ ಹೂವಿನ ಕ್ರುಷಿ ಒಂದು ಲಾಭದಾಯಕ ಹೂವಿನ ಬೆಳೆ.ಇಂದು ಗುಲಾಬಿ ಹೂವನ್ನು ಶುಭ ಸಮಾರಂಭ.ಧಾರ್ಮಿಕ ಕಾರ್ಯಕ್ರಮ.ಹಾಗೂ ಸೊಂದರ್ಯ ವರ್ದಕ ಸಾಧನಗಳಲ್ಲಿ.ಸುಗಂದ ದ್ರವ್ಯ ತಯಾರಿಕೆಯಲ್ಲಿ.ಯಥೇಚ್ಛವಾಗಿ ಬಳಸುತ್ತಾರೆ.ಇದನ್ನು ಆಹಾರ ಪಧಾರ್ಥಗಳಲ್ಲು ಬಳಸುವದುಂಟು ಪಾನಿಯಗಳು.ಪಾಕಗಳು.ಜಾಮ್ ತಯಾರಿಕೆಯಲ್ಲಿ.ಟೀ ಜೊತೆಗೂ ಸೇವಿಸ ಬಹುದು.ಇದರಲ್ಲಿ ಮನುಷ್ಯರ ದೇಹಕ್ಕೆ ಅಗತ್ಯವಿರುವ ವಿಟಮಿನ್ 'ಸಿ" ಹೇರಳವಾಗಿ ಲಭ್ಯವಿರುತ್ತದೆ.ಇದುವರೆಗು ಗುಲಾಬಿಯಲ್ಲಿ ನೂರಕ್ಕು ಅಧಿಕ ತಳಿಗಳು ಪತ್ತೆಯಾಗಿವೆ.
ಮಣ್ಣು ಮತ್ತು ಹವಾಗುಣ : 
ಗುಲಾಬಿ ಕ್ರುಷಿಗೆ ಮಣ್ಣಿನ ರಸ ಸಾರ 5.3 ರಿಂದ 5.6 ಉತ್ತಮ.ಚೆನ್ನಾಗಿ ನೀರು ಬಸಿದು ಹೋಗುವ ಮರಳು ಮಿಶ್ರಿತ ಕೆಂಪು ಗೋಡು ಮಣ್ಣು ಉತ್ತಮ.

ಗುಲಾಬಿ ನಾಟಿಯ ಕಾಲ : 
ಈ ಬೆಳೆಯು ಸಮಶೀತೋಷ್ಣ ವಲಯದಲ್ಲಿ ಚೆನ್ನಾಗಿ ಬರುವದರಿಂದ ಇದನ್ನು ಜೂನ್ ಹಾಗು ಅಕ್ಟೊಬರ್ ನಲ್ಲಿ ನಾಟಿ ಮಾಡುವದು ಉತ್ತಮ.ಅತಿಯಾದ ಬಿಸಿಲು ಈ ಬೆಳೆಗೆ ಸೂಕ್ತವಲ್ಲ.
ಗುಲಾಬಿ ತಳಿಗಳು :
ಕೆಂಪು : ಆರ್ಕಾ ಪರಿಮಳ.ಸಿಂದೂರ.ರಕ್ತಗಂದ.ಸೋಫಿಯಾ ಲಾರೆನ್ಸ.ಕ್ವಿನ್ ಎಲಿಜಬೆತ್.ಗ್ಲೆಡಿಯೆಟರ್.ಮಾಂಟೆಜುಮಾ.ಮುಂತಾದವು
ಹಳದಿ :ಪೂಸಾ ಸೋನಿಯಾ.ಗೋಲ್ಡನ್ ಟಯ್ಮ್ಸ.ಮುಂತಾದವು.
ಮಿಶ್ರಬಣ್ಣ : ಟಾಟಾ ಸೆಂಟಿನರಿ.ಡಬಲ್ ಡಿಲೆಟ್.ಅಮೆರಿಕನ್ ಹೆರಿಟೇಜ್.ಮುಂತಾದವು.
ಗುಲಾಬಿ ನಾಟಿ ವಿಧಾನ :
 ಜಮೀನನ್ನು ಚೆನ್ನಾಗಿ ಉಳುಮೆ ಮಾಡಿ ಮೊದಲು 45*45*45 (ಉದ್ದ.ಅಗಲ.ಆಳ) ಗುಣಿಗಳನ್ನ 60*60.ಅಥವ 75*75.ಅಥವ 90*90 ಸೆಂ.ಮೀ ಅಂತರದಲ್ಲಿ ಗುಣಿಗಳನ್ನ ತೆಗೆದು ಪ್ರತಿ ಗುಣಿಗೂ 2 ಕೆ ಜಿ ಕೊಟ್ಟಿಗೆ ಗೊಬ್ಬರ ಮೇಲ್ಮಣ್ಣು ಮತ್ತು ಬೇವಿನ ಹಿಂಡಿ ಅಥವ ಪ್ಯೂರೆಟ್ ಮಿಶ್ರಣ ಮಾಡಿ ಕಸಿ ಮಾಡಿದ ಗಿಡಗಳನ್ನು 5 ರಿಂದ 10 ಸೆಂ.ಮಿ.ಮೇಲ್ಮಣ್ಣಿಲ್ಲಿ ಇರುವಂತೆ ನಾಟಿ ಮಾಡಬೇಕು.ಪ್ರತಿ ಹೆಕ್ಟೆರ್ ಗೆ ಮೇಲೆ ತಿಳಿಸಿದ ಅಳತೆಗಳಿಗೆ ಅನುಗುಣವಾಗಿ 12 ಸಾವಿರದಿಂದ 25 ಸಾವಿರ ಸಸಿಗಳು ಬೇಕಾಗುತ್ತವೆ.ನಾಟಿ ಮಾಡಿದ ತಕ್ಷಣ ಸಸಿಗಳಿಗೆ ನೀರು ಕೊಟ್ಟು ಕಳೆ ನಿರ್ವಹಣೆ ಮಾಡುತ್ತಿರಬೇಕು.
ಗುಲಾಬಿಯ ಪ್ರೊನಿಂಗ್ ವಿಧಾನ : 
ಗುಲಾಬಿ ಗಿಡಗಳನ್ನು ವರ್ಷದಲ್ಲಿ ಎರಡು ಬಾರಿ ಪ್ರೋನಿಂಗ್ ಮಾಡುವದರಿಂದ ಅವು ಚೆನ್ನಾಗಿ ಹರೆ ಒಡೆಯುತ್ತವೆ ಇದರಿಂದ ಅವುಗಳ ಆಕಾರ ಮತ್ತು ಗಾತ್ರವನ್ನು ನಿಯಂತ್ರಿಸುವ ಜೊತೆಗೆ ಉತ್ತಮ ಇಳುವರಿ ಪಡೆಯಬಹುದು.ಪ್ರೋನಿಂಗ್ ಮಾಡುವ 15 ದಿನ ಮೊದಲು ನೀರನ್ನು ನಿಲ್ಲಿಸುವದು ತುಂಬಾ ಅವಶ್ಯಕ.ಮೆ-ಜೂನ್  ಮತ್ತು ಅಕ್ಟೋಬರ್ - ನವೆಂಬರ್ ಪ್ರೋನಿಂಗ್ ಮಾಡಲು ಸೂಕ್ತ ಸಮಯ.
ಪೋಶಕಾಂಶ ಮತ್ತ ನೀರಿನ ನಿರ್ವಹಣೆ :
ಪ್ರತಿ ವರ್ಷಕ್ಕೊಮ್ಮೆ ಪ್ರತಿ ಗಿಡಗಳಿಗೆ 2 ಕೆ ಜಿ ಕೊಟ್ಟಿಗೆ ಗೊಬ್ಬರದ ಜೊತೆ 10 ಗ್ರಾಂ.ಸಾರಜನಕ.10 ಗ್ರಾಂ ರಂಜಕ.15 ಗ್ರಾಂ ಪೊಟ್ಯಾಶ್ ಗೊಬ್ಬರವನ್ನು ಎರಡು ಕಂತಿನಲ್ಲಿ ಪ್ರೋನಿಂಗ್ ಮಾಡುವ ಮೊದಲು ಮತ್ತು ಪ್ರೋನಿಂಗ್ ಮಾಡಿದ 1½ ತಿಂಗಳ ನಂತರ ಕೊಡುವದು ಸೂಕ್ತ.ನೀರನ್ನು ಸ್ಥಳಿಯ ಹವಾಗುಣ ಮತ್ತು ಮಣ್ಣಿನ ಗುಣಗಳಿಗೆ ಅನುಗುಣವಾಗಿ ಪ್ರತಿ 4 ರಿಂದ 5 ದಿನಕ್ಕೊಮ್ಮೆ ನೀಡುವದು ಉತ್ತಮ.

ಗುಲಾಬಿ ಬೆಳೆಗೆ ತಗುಲುವ ರೋಗಗಳು :
ಗೆದ್ದಲು.ಥ್ರಿಪ್ಸ್.ಹೇನು.ಹೂ ತಿನ್ನುವ ಕೀಟ.ಜೇಡ.ಕಪ್ಪು ಎಲೆ ಚುಕ್ಕೆ ರೋಗ.ಬೂದಿ ರೋಗ.ಹರೆ ಒಣಗುವ ರೋಗ.ಈ ಎಲ್ಲಾ ರೋಗ ಲಕ್ಷಣಗಳು ಕಂಡು ಬಂದಾಗ ಕಾಲ ಕಾಲಕ್ಕೆ ತಙ್ನರ ಸಲಹೆ ಮೇರೆಗೆ ರೋಗ ನಿಯಂತ್ರಿಸುವದರಿಂದ ಹೆಚ್ಚಿನ ಇಳುವರಿ ಪಡೆಯಬಹುದು.
ಗುಲಾಬಿ ಕೊಯ್ಲು ಮತ್ತು ಇಳುವರಿ :
ಪ್ರೋನಿಂಗ್ ಮಾಡಿದ 50 ರಿಂದ 60 ದಿನಕ್ಕೆ ಕೊಯ್ಲು ಶುರುವಾಗುತ್ತದೆ.ಬೆಳಿಗ್ಗೆ ಅಥವ ಸಂಜೆಯ ಸಮಯದಲ್ಲಿ ಉದ್ದನೆಯ ಕಡ್ಡಿಯ ಜೊತೆ ಕೊಯ್ಲು ಮಾಡುವದು ಸೂಕ್ತ.ಉತ್ತಮ ಗುಣಮಟ್ಟದ ಹೂ ಪಡೆಯಲು ಹೆಚ್ಚಿನ ಮೊಗ್ಗು ಇದ್ದಲ್ಲಿ ಕೆಲವನ್ನು ಉಳಿಸಿ ಉಳಿದವನ್ನು ಚಿವುಟಿ ಹಾಕಬೇಕು.ಒಂದು ಹೆಕ್ಟೆರ್ ಪ್ರದೇಶದಿಂದ ಉತ್ತಮ ನಿರ್ವಹಣೆಯಲ್ಲಿ 2.5 ರಿಂದ 3.5 ಲಕ್ಷ ಹೂವುಗಳನ್ನು ಪಡೆಯಬಹುದು.

ಗುರುವಾರ, ಜೂನ್ 24, 2021

ಈರುಳ್ಳಿ ಬೆಳೆ ಮಾಹಿತಿ.

 ಈರುಳ್ಳಿ ಒಂದು ಬಹುಮುಖ್ಯವಾದ ತರಕಾರಿ ಬೆಳೆಯಾಗಿದ್ದು ಇದು ತನ್ನ ಖಾರವಾದ ವಿಶಿಷ್ಟ ರುಚಿಯ ಗುಣದಿಂದ ಇದನ್ನು ತರಕಾರಿಯಾಗಿ ಸಾಂಬಾರು ಪಧಾರ್ಥವಾಗಿ ಹಾಗು ಕೆಲವು ಚಿಕಿತ್ಸೆಗಳಿಗೆ ಓಷದವಾಗಿಯೂ ಸಹ ಬಳಸುತ್ತಾರೆ.ಈರುಳ್ಳಿಯಲ್ಲಿ ನಮ್ಮ ದೇಹಕ್ಕೆ ಬೇಕಾದ 'ಬಿ" ಮತ್ತು 'ಸಿ" ಪೋಷಕಾಂಶಗಳು ಹೇರಳವಾಗಿ ಲಭಿಸುತ್ತದೆ.
ಮಣ್ಣು ಹಾಗು ಹವಾಗುಣ : ಈರುಳ್ಳಿ ಬೆಳೆಗೆ ಮಣ್ಣಿನ ರಸಸಾರ 6 ರಿಂದ 8 ಉತ್ತಮ.ಇದನ್ನು ವರ್ಷದ ಎಲ್ಲಾ ಕಾಲದಲ್ಲೂ ಬೆಳೆಯ ಬಹುದಾದರು ಸಹ ಉತ್ತಮ ಗೆಡ್ಡೆಗಳು ಚಳಿಗಾಲದಲ್ಲಿ ಮಾತ್ರ ದೊರೆಯುತ್ತದೆ.ಜೊಗು ಪ್ರದೇಶ ನೀರು ನಿಲ್ಲುವ ಜಾಗ ಸೂಕ್ತವಲ್ಲ.ಮರಳು ಮಿಶ್ರಿತ ಗೋಡು ಮಣ್ಣು ತುಂಬಾ ಸೂಕ್ತ.ಜೂನ್ -ಜುಲೈ . ಸೆಪ್ಟೆಂಬರ್ - ಅಕ್ಟೋಬರ್. ಜನವರಿ - ಪೆಬ್ರವರಿ.ನಾಟಿ ಮಾಡಲು ಸೂಕ್ತವಾದ ಕಾಲಗಳಾಗಿರುತ್ತದೆ.
ತಳಿಗಳು : ಆರ್ಕಾ ನಿಕೇತನ್.ಆರ್ಕಾ ಕಲ್ಯಾಣ್.ಆರ್ಕಾ ಪಿತಾಂಬರ್.ಅಗ್ರಿ ಪೊಂಡ್ ರೆಡ್.ನಾಸಿಕ್ ರೆಡ್.ಬೀಮಾ ರೆಡ್.ಬಳ್ಳಾರಿ ರೆಡ್.ತೆಲಗಿ ಬಿಳಿ.ತೆಲಗಿ ಕೆಂಪು.ಕುಮಟಾ.ರಾಂಪುರ.ಸತಾರ ಲೋಕಲ್.ಆರ್ಕಾ ಲಾಲಿಮ.ಬೆಂಗಳೂರು ಗುಲಾಬಿ.ಅಗ್ರಿ ಫೊಂಡ್ ರೋಸ್ ಇನ್ನು ಮುಂತಾದವು.
ಬೇಸಾಯ ಕ್ರಮ : ಈ ಬೆಳೆಯನ್ನ 3 ವಿಧದಲ್ಲಿ ಬಿತ್ತಬಹುದು.1.ಸಸಿ ನಾಟಿ. 2. ಗೆಡ್ಡೆ ನಾಟಿ. 3. ಕೂರಿಗೆ ಬಿತ್ತನೆ ಮತ್ತು ಚೆಲ್ಲುವದು.ಮೊದಲೆರಡನೆಯ ಪದ್ದತಿ ಇಂದ ಉತ್ತಮ ಬೆಳೆ ನಿರೀಕ್ಷಿಸಬಹುದು.
ಬೇಸಾಯ ಕ್ರಮ : ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಿ.ನಂತರ 15 ಸೆಂ.ಮೀ ಅಂತರದ ಸಾಲುಗಳು ಮಾಡಿ ನಂತರ ಹೆಕ್ಟೆರ್ ಗೆ 30 ಟನ್ ಕೊಟ್ಟಿಗೆ ಗೊಬ್ಬರ ಮತ್ತು 125 ಕಿ.ಗ್ರಾಂ ಸಾರಜನಕ.75 ಕಿ.ಗ್ರಾಂ ರಂಜಕ.125 ಕಿ.ಗ್ರಾಂ ಪೊಟ್ಯಾಶ್ ಮಿಶ್ರಣದಲ್ಲಿ 50 ಶೇ ಗೊಬ್ಬರವನ್ನು ಸಾಲಿನಲ್ಲಿ ಚೆಲ್ಲಿ ಮಣ್ಣಿನಲ್ಲಿ ಬೆರೆಸಿ ನೀರನ್ನು ಹಾಯಿಸ ಬೇಕು.ನಂತರ ಸಾಲಿನ ಒಂದು ಬದುವಿನಲ್ಲಿ 10 ಸೆಂ.ಮೀ ನಂತೆ ಸಸಿ.ಅಥವ ಗೆಡ್ಡೆಗಳನ್ನು ನಾಟಿ ಮಾಡಬೇಕು.

ನಾಟಿ ಮಾಡಿದ 2 ವಾರಗಳ ನಂತರ ಅಂತರ ಬೇಸಾಯ ಮಾಡಿ ಕಳೆ ನಿರ್ಮೂಲನೆ ಮಾಡಿ ಉಳಿದ ಶೇ 50 ಗೊಬ್ಬರವನ್ನು ಕೊಟ್ಟು ಬುಡಕ್ಕೆ ಮಣ್ಣು ಕೊಡಬೇಕು.ಈರುಳ್ಳಿಯು ಮೇಲ್ಮಟ್ಟದ ಬೇರಿನ ಬೆಳೆಯಾದ್ದರಿಂದ ಕಳೆ ನಿರ್ಮೂಲನೆ ತುಂಬಾ ಅವಶ್ಯಕ.

ನೀರುನ ನಿರ್ವಹಣೆ : ಹವಾಮಾನ ಮತ್ತು ಮಣ್ಣಿನ ಗುಣಧರ್ಮಕ್ಕೆ ಅನುಗುಣವಾಗಿ 4 ರಿಂದ 5 ದಿನಕ್ಕೊಮ್ಮೆ ನೀರು ಕೊಡಬೇಕು.ಕೊಯ್ಲು ಮಾಡುವ 15 ದಿನ ಮೊದಲೆ ನೀರನ್ನು ನಿಲ್ಲಿಸುವದರಿಂದ ಗಡ್ಡೆಗಳನ್ನು ದೀರ್ಘಕಾಲ ಸಂಗ್ರಹಿಸಿ ಇಡಲು ಸಾದ್ಯವಾಗುತ್ತದೆ.

ರೋಗಗಳು : ಥ್ರಿಪ್ಸ ನುಸಿ.ಸಸಿ ಕತ್ತರಿಸುವ ಹುಳು.ಜಿಗಿಹುಳು.ಕಾಡಿಗೆ ರೋಗ.ಬ್ಯ್ಲೆಟ್ ರೋಗ.ಎಲೆ ಚುಕ್ಕೆ ರೋಗ.ಈ ರೋಗಗಳನ್ನು ಕಾಲ ಕಾಲಕ್ಕೆ ತಙ್ನರ ಸಲಹೆ ಮೇರೆಗೆ ನಿರ್ವಹಿಸಿದರೆ ಅಧಿಕ ಇಳುವರಿ ಸಾದ್ಯ.
ಕೊಯ್ಲು ಮತ್ತು ಇಳುವರಿ : ತಳಿಗಳಿಗೆ ಅನುಗುಣವಾಗಿ 90 ರಿಂದ 140 ದಿನಕ್ಕೆ ಕೊಯ್ಲಿಗೆ ಬರುತ್ತವೆ.ಕೊಯ್ಲಿಗೆ ಬಂದ ಗಿಡಗಳು ಹಳದಿ ಬಣ್ಣಕ್ಕೆ ತಿರುಗಿರುತ್ತವೆ.ನಂತರ ಅವನ್ನು ಅಗೆದು ಬಿಸಿಲಿನಲ್ಲಿ ಒಣಗಿಸುವದರಿಂದ ದೀರ್ಘಕಾಲ ಸಂಗ್ರಹಿಸಿಡಬಹುದು.ಇಳುವರಿ ತಳಿಗಳಿಗೆ ಅನುಗುಣವಾಗಿ ಪ್ರತಿ ಹೆಕ್ಟೆರ್ ಗೆ 20 ರಿಂದ 40 ಟನ್ ವರೆಗು ಇಳುವರಿ ಬರುತ್ತವೆ.








ಮಂಗಳವಾರ, ಜೂನ್ 22, 2021

ಬೆಂಡೆಕಾಯಿ ಬೆಳೆ ಮಾಹಿತಿ.

ಬೆಂಡೆಕಾಯಿ ನಮ್ಮ ರಾಜ್ಯದ ಪ್ರಮುಖ ತರಕಾರಿ ಬೆಳೆಗಳಲ್ಲಿ ಒಂದು.ಇದು ನಮ್ಮ ದೇಹಕ್ಕೆ ಬೇಕಾದ ವಿಟಮಿನ್ 'ಸಿ" ಜೀವಸತ್ವ ಮತ್ತು ಐಯೋಡಿನ್.ಹಾಗು ಕ್ಯಾಲ್ಸಿಯಂ ಗಳನ್ನು ಹೇರಳವಾಗಿ ಒದಗಿಸುತ್ತದೆ.
ಬೆಂಡೆಯ ಬೆಳೆಗೆ ಮಣ್ಣಿನ ರಸಸಾರ 6 ರಿಂದ 6.8 ಇರಬೇಕಾಗುತ್ತದೆ.ವಾರ್ಷಿಕ ಸರಾಸರಿ 450 ರಿಂದ 650 ಮಿ.ಮೀ ಮಳೆ ಬೀಳುವ ಪ್ರದೇಶ ಹಾಗೂ ಸರಾಗವಾಗಿ ನೀರು ಬಸಿದು ಹೋಗುವ ಎಲ್ಲಾ ಮಣ್ಣಿನಲ್ಲೂ ಬೆಳೆಯ ಬಹುದಾದರೂ ಎರೆ ಭೂಮಿ ಹಾಗೂ ಮರಳು ಮಿಶ್ರಿತ ಗೋಡು ಮಣ್ಣಿನಲ್ಲಿ ಉತ್ತಮ ಬೆಳೆಯನ್ನು ನಿರೀಕ್ಷಿಸಬಹುದು.
 ಬೆಂಡೆಕಾಯಿ ಬಿತ್ತನೆ ಕಾಲ : ಜೂನ್ ಮತ್ತು ಜುಲೈ .ಹಾಗು ಜನೆವರಿ ಮತ್ತು ಫೆಬ್ರವರಿ ಬಿತ್ತನೆಗೆ ಸೂಕ್ತವಾದ ಕಾಲ.ರಾತ್ರಿಯ ವಾತಾವರಣದಲ್ಲಿ ಉಷ್ಣಾಂಶವು 100 ಸೆ. ಗಿಂತ ಕಡಿಮೆಯಾದ ಸಂದರ್ಭದಲ್ಲಿ ಬೀಜ ಸರಿಯಾಗಿ ಮೊಳಕೆ ಹೊಡೆಯದೆ ಬೆಳೆಯ ಬೆಳವಣಿಗೆಯ ಮೇಲೆ ಅಡ್ಡ ಪರಿಣಾಮಗಳಾಗುತ್ತದೆ.
ಬೆಂಡೆಕಾಯಿ ತಳಿಗಳು : ಆರ್ಕಾ ಅಭಯ್.ಪೂಸಾ ಸವಾನಿ.ವಯ್ಟ್ ವೆಲ್ವೆಟ್ (ಹಾಲು ಬೆಂಡೆ).ಪರ್ಬಾನಿ ಕ್ರಾಂತಿ.ಆರ್ಕಾ ಅನಾಮಿಕ.ಮುಂತಾದವು.
ಬೆಂಡೆಕಾಯಿ ಬಿತ್ತನೆ : ಭೂಮಿಯನ್ನು ಉಳುಮೆ ಮಾಡಿ ಹೆಂಡೆ ಒಡೆದು ಸಣ್ಣ ಮಣ್ಣು ಮಾಡಿ 60 ಸೆಂ.ಮೀ ಅಂತರದ ಸಾಲುಗಳನ್ನು ಮಾಡಿ ಸಾಲಿನಲ್ಲಿ ಸಾವಯವ ಕೊಟ್ಟಿಗೆ ಗೊಬ್ಬರ ಬೆರೆಸಿ.ನಂತರ 150 ಕಿ. ಗ್ರಾಂ ಸಾರಜನಕ .75 ಕಿ.ಗ್ರಾಂ ರಂಜಕ.50 ಕಿ.ಗ್ರಾಂ ಪೊಟ್ಯಾಶ್ ಮಿಶ್ರಣ ಮಾಡಿದ ಗೊಬ್ಬರದ ಶೇ.50 ಗೊಬ್ಬರವನ್ನು ಸಾಲಿನಲ್ಲಿ ಮಣ್ಣಿಗೆ ಬೆರೆಸಿ.ನೀರು ಬಿಟ್ಟು ನಂತರ ಬೀಜದಿಂದ ಬೀಜಕ್ಕೆ 30 ಸೆಂ.ಮೀ ಅಂತರದಲ್ಲಿ ಬೀಜವನ್ನು ಊರಿಸಬೇಕು.ನಂತರ ಸ್ಥಳೀಯ ಮತ್ತು ಮಣ್ಣಿನ ವಾತಾರಣಕ್ಕೆ ಅನುಗುಣವಾಗಿ 3 ರಿಂದ 5 ದಿನಕ್ಕೊಮ್ಮೆ ನೀರು ಬಿಡಬೇಕು.ನಂತರ ಬಿತ್ತಿದ 20 ರಿಂದ 30 ದಿನದೊಳಗೆ ಅಂತರ ಬೇಸಾಯ.ಕಳೆನಿರ್ಮೂಲನೆ ಮಾಡಿ ಉಳಿದ ಶೇ 50 ಗೊಬ್ಬರವನ್ನು ಮೇಲು ಗೊಬ್ಬರವಾಗಿ ನೀಡಿ ಸಸಿಗಳ ಬುಡಕ್ಕೆ ಮಣ್ಣು ಹೇರಿ ಕೊಡಬೇಕು.
ಬೆಂಡೆಕಾಯಿ ಬೆಳೆಗೆ ತಗುಲುವ ರೋಗಗಳು : 
ಬಿಳಿ ನೊಣ.ಜಿಗಿ ಹುಳು.ಥ್ರಿಪ್ಸ್ ನುಸಿ.ಮಯ್ಟ್ ನುಸಿ.ರೆಂಬೆ ಕೊರೆಯುವ ಹುಳು.ಕಾಯಿ ಕೊರಕ ಹುಳು.ಹಳದಿ ನಂಜು.ಬೂದಿರೋಗ.ಎಲೆಚುಕ್ಕೆ.ಗಂಟುಬೇರು ರೋಗ.ಈ ಎಲ್ಲಾ ರೋಗ ಲಕ್ಷಣಗಳ ಕಂಡ ತಕ್ಷಣ ತಙ್ನರ ಸಲಹೆ ಮೇರೆಗೆ ರೋಗಗಳನ್ನ ಹತೋಟಿ ಮಾಡಿದರೆ ಉತ್ತಮ ಇಳುವರಿ ಲಭಿಸುತ್ತದೆ.
ಕೊಯ್ಲು ಮತ್ತು ಇಳುವರಿ : 
ಬಿತ್ತಿದ 45 ರಿಂದ 65 ನೇ ದಿನಕ್ಕೆ ಮೊದಲ ಬಾರಿ ಕೊಯ್ಲು ಬರುತ್ತದೆ.ನಂತರ ಪ್ರತಿ 2 ರಿಂದ 3 ದಿನಕ್ಕೊಮ್ಮೆ ಎಳೆ ಹಸಿರು ಕಾಯಿಗಳ ದೊರೆಯುತ್ತವೆ.ನಂತರ 4 ರಿಂದ 6 ವಾರಗಳ ವರೆಗೆ ನಿರಂತರ ಕೊಯ್ಲು ಮಾಡಬಹುದು.ಪ್ರತಿ ಹೆಕ್ಟೇರ್ ಗೆ ತಳಿಗಳಿಗೆ ಅನುಗುಣವಾಗಿ 15 ರಿಂದ 20 ಟನ್ ಇಳುವರಿ ಪಡೆಯಬಹುದು.

ಸೋಮವಾರ, ಜೂನ್ 21, 2021

ಬಟಾಣಿ ಬೆಳೆ.

ಬಟಾಣಿ ಬೆಳೆ ಒಂದು ದ್ವಿದಳ ಧಾನ್ಯ ಬೆಳೆಯಾಗಿದ್ದು.ಇದನ್ನು ಹಸಿ ತರಕಾರಿ ಹಾಗು ಒಣದಾನ್ಯವಾಗಿಯೂ ಬಳಸಬಹುದು.ಇದರಲ್ಲಿ ಮನುಷ್ಯನಿಗೆ ಅವಶ್ಯಕವಾದ ವಿಟಮಿನ್ 'ಎ" 'ಸಿ" 'ಬಿ" ಮತ್ತು ಕ್ಯಾರೊಟಿನ್.ಮ್ಯಾಂಗನೀಸ್.ರಂಜಕ.
ಪೊಟ್ಯಾಶ್.ಲೆಸಿನ.ಮತ್ತು ಅಮಿನೊ ಆಮ್ಮಗಳು ಹೇರಳವಾಗಿರುತ್ತದೆ.ಜೊತೆಗೆ ಇದೊಂದು ದ್ವಿದಳ ದಾನ್ಯವಾದ್ದರಿಂದ ಇದು ಭೂಮಿಯ ಫಲವತ್ತತೆಯನ್ನು ಹೆಚ್ಚಿಸುತ್ತದೆ

ಸಾಮಾನ್ಯವಾಗಿ ಬಟಾಣಿ  ಬೆಳೆಗೆ ಮಣ್ಣಿನ ರಸಸಾರ 5.5 ಇಂದ 7.5 ರ ವರೆಗಿನ ಮಣ್ಣಿನಲ್ಲಿ ಚೆನ್ನಾಗಿ ಬರುತ್ತದೆ.ಇದೊಂದು ಚಳಿಗಾಲದ ಬೆಳೆಯಾಗಿದ್ದು ಹೆಚ್ಚಿನ ಉಷ್ಣಾಂಶದಲ್ಲಿ ಇಳುವರಿ ಕಡಿಮೆಯಾಗುತ್ತದೆ.ಸಾಮಾನ್ಯವಾಗಿ ಎಲ್ಲಾ ವಿಧದ ಮಣ್ಣುಗಳಲ್ಲಿ ಬೆಳೆಯ ಬಹುದಾದರೂ ಮರಳು ಮಿಶ್ರಿತ ಕೆಂಪು.ಮರಳು ಮಿಶ್ರಿತ ಕಪ್ಪುಮಣ್ಣು ಸೂಕ್ತವಾದದ್ದು.
ಬಿತ್ತನೆ ಕಾಲ : 
ಮಳೆಗಾಲದ ಬೆಳೆಯಾಗಿ ಜೂನ್ - ಜುಲೈನಲ್ಲಿ. ಮತ್ತು ಚಳಿಗಾಲದ ಬೆಳೆಯಾಗಿ ಅಕ್ಟೋಬರ್ - ನವೆಂಬರ್ ನಲ್ಲಿ ಬಿತ್ತನೆ ಮಾಡಬಹುದು.
ಬಟಾಣಿ ತಳಿಗಳು : 
ಅರ್ಕಾ ಪ್ರಿಯಾ.ಬೆಂಗಳೂರು ಲೋಕಲ್.ಆರ್ಶೆಲ್.ಅರ್ಕಾ ಅಜಿತ್.ಅರ್ಕಾ ಸಂಪೂರ್ಣ.ಅರ್ಕಾ ಪ್ರಮೋದ್.ಅರ್ಲಿ ಬ್ಯಾಡ್ಜರ್.ಬೊನ್ನೆ ವಿಲ್ಲೆ.ಬಿ ಆರ್ 2. ಬಿ ಆರ್ 12. ಎನ್ ಪಿ 29.ಇನ್ನು ಮುಂತಾದವು.

ಬಟಾಣಿ ಬಿತ್ತನೆ ಪದ್ದತಿ : 
ಭೂಮಿಯನ್ನು ಹದಮಾಡಿದ ನಂತರ 60 ಸೆಂ ಮಿ ಅಂತರದಲ್ಲಿ ಎತ್ತರಕ್ಕೆ ಮಣ್ಣು ಬರುವಂತೆ ಸಾಲುಗಳನ್ನು ಮಾಡಿ ಕೊಟ್ಟಿಗೆ  ಗೊಬ್ಬರದ ಜೊತೆ 30 ಕೆ ಜಿ ಸಾರಜನಕ.50 ಕೆ ಜಿ ರಂಜಕ.50 ಕೆ ಜಿ ಪೊಟ್ಯಾಶ್ ಮಿಶ್ರಣದ ಗೊಬ್ಬರವನ್ನು ಸಾಲುಗಳಲ್ಲಿ ಚೆಲ್ಲಿ ಮಣ್ಣಿಗೆ ಬೆರೆಸ ಬೇಕು.ನಂತರ ತೆಳುವಾಗಿ ನೀರು ಕೊಟ್ಟು ಸಾಲಿನ ದಿಣ್ಣೆಯ ಮೇಲೆ ಬೀಜವನ್ನು ಊರಬೇಕು.ಪ್ರತಿ ಹೆಕ್ಟೇರ್ ಗೆ 35 ರಿಂದ 40 ಕೆ ಜಿ ಬೀಜಗಳು ಬೇಕಾಗುತ್ತದೆ.

ನಿರ್ವಹಣೆ : 
ಬಿತ್ತಿದ 2 ವಾರಗಳ ನಂತರ ಅಂತರ ಬೇಸಾಯ ಮಾಡಿ ಕಳೆ ನಿರ್ಮೂಲನೆ ಮಾಡಿ.4 ವಾರಗಳ ನಂತರ ಸಸಿಗಳ ಬುಡಕ್ಕೆ ಮಣ್ಣು ಕೊಡಬೇಕು.ಉತ್ತಮ ಗುಣಮಟ್ಟದ ಕಾಯಿ ಮತ್ತು ಇಳುವರಿಗೆ ಕೋಲು ಮತ್ತು ಹುರಿಯನ್ನು ಮಾಡಿ ಬಳ್ಳಿಗೆ ಆಸರೆ ಕೊಡುವದು ಉತ್ತಮ.
ಮಣ್ಣಿನ ಗುಣ ಲಕ್ಷಣ ಮತ್ತು ವಾತಾವರಣಕ್ಕೆ ಅನುಗುಣವಾಗಿ ವಾರಕ್ಕೊಮ್ಮೆ ನೀರು ಕೊಡಬೇಕು.

ರೋಗಗಳು : 
ಬೂದಿರೋಗ.ಕಾಯಿ ಕೊಳೆ.ತುಕ್ಕು ರೋಗ.ಕಾಂಡ ಕೊಳೆ.ಕಾಯಿ ಕೊರೆವ ಹುಳು.ಹೇನು.ಬೇರು ಕೊಳೆ .ತಙ್ನರ ಸಲಹೆ ಮೇರೆಗೆ ಕಾಲ ಕಾಲಕ್ಕೆ ತಗುಲುವ ರೋಗಗಳನ್ನ ನಿರ್ವಹಣೆ ಮಾಡುವದರಿಂದ ಉತ್ತಮ ಇಳುವರಿ ಸಾದ್ಯ.
ಕೊಯ್ಲು : 
ನಾಟಿ ಮಾಡಿದ 45 ರಿಂದ 55 ದಿನಕ್ಕೆ ಹೂವಿಗೆ ಬರುವ ಗಿಡಗಳು ನಂತರದ ಎರಡು ವಾರದಲ್ಲಿ ಕಾಯಿಗಳನ್ನು ಕೊಯ್ಲು ಮಾಡಬಹುದು.ತಳಿಗಳಿಗೆ ಅನುಗುಣವಾಗಿ 70 ರಿಂದ 100 ದಿನದ ಅವದಿಯಲ್ಲಿ ಕೊಯ್ಲು ಪೂರ್ಣವಾಗುತ್ತದೆ.

ಇಳುವರಿ : 
ಎಳೆ ಹಸಿರು ಕಾಯಿಯನ್ನು ತರಕಾರಿಯ ಸಲುವಾಗಿ ಕೀಳಬಹುದು.ಬಲಿತ ಕಾಯಿಗಳನ್ನು ಒಣಕಾಳುಗಳಾಗಿ ಕೀಳಬಹುದು.ತಳಿಗಳಿಗೆ ಅನುಗುಣವಾಗಿ ಪ್ರತಿ ಹೆಕ್ಟೇರ್ ಗೆ 60 ರಿಂದ 80 ಟನ್ ಇಳುವರಿ ಪಡೆಯಬಹುದು.

ಭಾನುವಾರ, ಜೂನ್ 20, 2021

ತರಕಾರಿಗಳ ರಾಜ ಟೊಮ್ಯಾಟೊ ಬೆಳೆ.

ಟೊಮ್ಯಾಟೊ ಬೆಳೆಯಲ್ಲಿ ಅತ್ಯದಿಕ ಇಳುವರಿ ನೀಡುವ ಸಂಕರಣ ತಳಿಗಳ ಆವಿಷ್ಕಾರದಿಂದ ಇತ್ತೀಚೆಗೆ ಟೊಮ್ಯಾಟೊ ಒಂದು ದುರಂತದ ಬೆಳೆ ಎನ್ನ ಬಹುದು.ಟೊಮ್ಯಾಟೊ ನಮ್ಮ ರಾಜ್ಯದ ಜನಪ್ರಿಯ ತರಕಾರಿಗಳಲ್ಲಿ ಒಂದು.ಇದು ನಮಗೆ ಎ.ಬಿ.ಮತ್ತು ಸಿ ಜೀವಸತ್ವಗಳನ್ನ ಒದಗಿಸುತ್ತದೆ.
ಈ ಬೆಳೆಯನ್ನು ನೀರು ನಿಲ್ಲುವ ಆಮ್ಲಯುಕ್ತ ಮಣ್ಣನ್ನು ಹೊರತು ಪಡಿಸಿ.ಎಲ್ಲಾ ರೀತಿಯ ಮಣ್ಣಿನಲ್ಲೂ ಬೆಳೆಯ ಬಹುದು.ಸಾಧಾರಣ ಕಪ್ಪು.ಮರಳು ಮಿಶ್ರಿತ ಕಪ್ಪು.ಮರಳು ಮಿಶ್ರಿತ ಕೆಂಪು ಮಣ್ಣು ಈ ಬೆಳೆಗೆ ಸೂಕ್ತ.ಮಣ್ಣಿನ ರಸಸಾರ 6 ರಿಂದ 7  ಇದ್ದರೆ ತುಂಬಾ ಉಪಯುಕ್ತ.
ವರ್ಷದ ಮೂರೂ ಕಾಲದಲ್ಲಿ ಈ ಬೆಳೆಯನ್ನು ಬೆಳೆಯಬಹುದಾದರು ವಾರ್ಷಿಕ 70 ರಿಂ 90 ಸೆಂ ಮೀ ಮಳೆ ಬೀಳುವ ಪ್ರಧೇಶದಲ್ಲಿ ಜುಲೈ ಇಂದ ಅಕ್ಟೋಬರ್ ವರೆಗೆ ಉತ್ತಮ ಬೆಳೆ ಮತ್ತು ಇಳುವರಿ ನಿರೀಕ್ಷಿಸಬಹುದು.
ತಳಿಗಳು:
ಡಿ.ಎಂ.ಟಿ.1.
ಡಿ.ಎಂ.ಟಿ.2.
ಡಿ.ಎಂ.ಟಿ.5.
ಆರ್ಕಾ: ರಕ್ಷಕ್.ಮೇಘಾಲಿ.ಅನನ್ಯ.ಆಶಿಶ್.ಸಾಮ್ರಾಟ್ .ಅಭಾ.ವಿಕಾಸ್.ಅಲೋಕ್.
ಸಂಕ್ರಾಂತಿ.ನಂದಿ.
ಇತ್ತೀಚಿನ ಇನ್ನೂ ಹೋಸ ಸಂಕರಣ ತಳಿಗಳು.
ಸಸಿಗಳನ್ನು ಸಸಿ ಮಡಿ ಮತ್ತು ಪ್ಲಾಸ್ಟಿಕ್ ಟ್ರೇ ಕೋಕೊಪಿಟ್ ಪದ್ದತಿಯಲ್ಲಿ ತಯಾರಿಸಿಕೊಳ್ಳಬಹುದು.ಆರೋಗ್ಯ ಮತ್ತು ಉತ್ತಮ ಬೆಳವಣಿಗೆಗಾಗಿ ಕೋಕೊ ಪಿಟ್ ಟ್ರೇ ಪದ್ದತಿಯಲ್ಲಿ ಸಸಿಗಳನ್ನ ಬೆಳೆಸಿಕೊಳ್ಳುವದೆ ಉತ್ತಮ.
  ಟೊಮ್ಯಾಟೊ  ನಾಟಿ ಪದ್ದತಿ :
 ಮೊದಲು ಭೂಮಿಯನ್ನು ಆಳವಾಗಿ ಉಳುಮೆ ಮಾಡಿ ಹೆಂಡೆಗಳನ್ನು ಒಡೆದು ಸಣ್ಣ ಮಣ್ಣಾಗಿ ಮಾಡಿ ಸಮತಟ್ಟು ಮಾಡಿಕೊಳ್ಳಬೇಕು.ನಂತರ 90 ಸೆಂ ಮೀ ಅಂತರದಲ್ಲಿ ಸಾಲುಗಳನ್ನು ಮಾಡಿ ಸಾಲಿನ ಮದ್ಯೆ ಹೆಕ್ಟೆರ್ ಗೆ 25 ರಿಂದ 30 ಟನ್ ಕೊಟ್ಟಿಗೆ ಗೊಬ್ಬರ ಚೆಲ್ಲಿ ಮಣ್ಣಲ್ಲಿ ಬೆರೆಸಬೇಕು.ನಂತರ ಹೆಕ್ಟೇರ್ ಗೆ 200 ಕಿ ಗ್ರಾಂ ಸಾರಜನಕ .200 ಕಿ ಗ್ರಾಂ ರಂಜಕ.200 ಕಿ ಗ್ರಾಂ ಪೊಟ್ಯಾಶ್ ಮಿಶ್ರಣ ಮಾಡಿದ ಗೊಬ್ಬರದ 40% ಗೊಬ್ಬರವನ್ನು ಮೊದಲ ಕಂತಿನಲ್ಲಿ ಮಣ್ಣಿಗೆ ಬೆರೆಸಿ ನೀರನ್ನು ಹಾಯಿಸ ಬೇಕು ಹನಿ ನೀರಾವರಿಯಾದರೆ ಇನ್ನೂ ಉತ್ತಮ.ನಂತರ  ಸಾಲಿನ ಒಂದು ಬದುವಿನ  ಮೇಲೆ  45 ಸೆ ಮೀ ಅಂತರದಲ್ಲಿ ಸಸಿಗಳನ್ನು ನಾಟಿ ಮಾಡಬೇಕು.
ಪ್ರತಿ ಹತ್ತು ಸಾಲಿನ ನಡುವೆ ಒಂದು ಸಾಲು ಚೆಂಡು ಹೂ.ಮೆಕ್ಕೆಜೋಳ.ಸಚ್ಚೆ.ಬಿಳಿಜೋಳಗಳನ್ನ ಬೆಳೆಯುವದರಿಂದ  ರೋಗಗಳ ಮೇಲೆ ನಿಯಂತ್ರಣ ಸಾಧಿಸಬಹದು.
 ಟೊಮ್ಯಾಟೊ ಬೆಳೆಯಲ್ಲಿ ನೀರಾವರಿ ಪದ್ದತಿ :
ಮಣ್ಣು ಮತ್ತು ಸ್ಥಳೀಯ ಪ್ರತಿಕೂಲ ಹವಾಮಾನಕ್ಕೆ ಅನುಗುಣವಾಗಿ ಪ್ರತಿ 4 ರಿಂದ 5 ದಿನಕ್ಕೊಮ್ಮೆ ನೀರು ಕೊಡಬೇಕು.ಅಂತರ ಬೇಸಾಯ ಮತ್ತು ಕಳೆ ನಿರ್ಮೂಲನೆಯ ನಂತರ ನಾಟಿ ಮಾಡಿದ ನಾಲ್ಕನೆ ವಾರದಲ್ಲಿ ಉಳಿದ 60% ಗೊಬ್ಬರವನ್ನು ಮೇಲುಗೊಬ್ಬರವಾಗಿ ನೀಡಬೇಕು.ನಂತರ 30 ಸೆಂ ಮೀ ಬೆಳೆದ ಗಿಡಗಳ ಕವಲು ಟೊಂಗೆಗಳನ್ನು ಕತ್ತರಿಸಿ 2 ರಿಂದ 2.5 ಮೀ ಉದ್ದನೆಯ ಕೋಲುಗಳನ್ನು ನೆಟ್ಟು ಗಿಡಗಳಿಗೆ ಆಸರೆಯನ್ನು ಒದಗಿಸಿ ಎತ್ತಿ ಕಟ್ಟಬೇಕು.ಹೀಗೆ ಮಾಡುವದರಿಂದ ಒಳ್ಳೆಯ ಗುಣಮಟ್ಟದ ಕಾಯಿ ಮತ್ತು ಇಳುವರಿಯನ್ನು ಹೆಚ್ಚಿಸಬಹುದು.
ಟೊಮ್ಯಾಟೊ ಬೆಳೆಗೆ ತಗಲುವ ರೋಗಗಳು : 
ಎಲೆ ತಿನ್ನುವ ಕೀಟ.ಎಲೆ ಸುರಂಗ ಕೀಟ.ಹಣ್ಣು ಕೊರೆಯುವ ಹುಳು.ಬಿಳಿನೊಣ.ಹೇನು.ಜಿಗಿಹುಳು.ದುಂಡಾಣು ಸೊರಗು ರೋಗ.ಕೊನೆ ಅಂಗಮಾರಿ ರೋಗ.ಎಲೆ ಚುಕ್ಕಿ.ಎಲೆ ಮುಟುರು.ಬೂದಿರೋಗ.ಗಂಟು ಬೇರು ರೋಗ.ಹೀಗೆ ಹಲವಾರು ಹಂತದ ಬೆಳೆಯಲ್ಲಿ ಕಾಲ ಕಾಲಕ್ಕೆ ಬರುವ ರೋಗಗಳನ್ನು ತಙ್ನರ ಸಲಹೆ ಮೇರೆಗೆ ರೋಗಗಳನ್ನ ನಿಯಂತ್ರಿಸುವ ಮೂಲಕ ಅಧಿಕ ಇಳುವರಿ ಪಡೆಯಬಹುದು.
ಕೊಯ್ಲು ಮತ್ತು ಇಳುವರಿ :
ನಾಟಿ ಮಾಡಿದ 60 ರಿಂದ 70 ದಿನಗಳಿಗೆ ಕೊಯ್ಲಿಗೆ ಬರುತ್ತದೆ ತಳಿ ಮತ್ತು ಕಾಲಕ್ಕನುಗುಣವಾಗಿ 6 ರಿಂದ 8 ವಾರಗಳವರೆಗೆ ಕೊಯ್ಲು ಮಾಡಬಹುದು.ತಳಿಗಳಿಗೆ ಅನುಗುಣವಾಗಿ  ಹೆಕ್ಟೆರ್  ಗೆ 30 ರಿಂದ 60 ಟನ್ ಇಳುವರಿಯನ್ನ ಪಡೆಯಬಹುದು.

ಬುಧವಾರ, ಜೂನ್ 16, 2021

ಕಲ್ಲಂಗಡಿ ಹಣ್ಣಿನ ಕ್ರುಷಿ.

ಕಲ್ಲಂಗಡಿಯನ್ನು ಕರ್ನಾಟಕದ ಬಹುತೇಕ ಎಲ್ಲಾ ಬಾಗದಲ್ಲಿ ಬೆಳೆಯಬಹುದು.ಕಾಯಿ ಹಣ್ಣಾಗುವ ಸಮಯದಲ್ಲಿ ಒಣ ಹವೆ ಇದ್ದರೆ ಸಕ್ಕರೆ ಅಂಶ ಹೆಚ್ಚಾಗಿರುತ್ತದೆ.

ಕಲ್ಲಂಗಡಿ ಬಳ್ಳಿ ಜಾತಿಯ ಬೆಳೆಯಾದ್ದರಿಂದ ನೀರು ಬಸಿದು ಹೋಗುವ ಮರಳು ಮಣ್ಣು.ಮರಳು ಮಿಶ್ರಿತ ಗೋಡು ಮಣ್ಣು.ನದಿ ತೀರದ ಪ್ರದೇಶದ ಭೂಮಿ ಸೂಕ್ತ.ಹೆಚ್ಚು ಹುಳಿ ಮತ್ತು ಕ್ಷಾರೀಯ ಗುಣದ ಮಣ್ಣು ಈ ಬೆಳೆಗೆ ಸೂಕ್ತವಲ್ಲ.  

ಕಲ್ಲಂಗಡಿ ತಳಿಗಳು:ಅರ್ಕಾ ಮಾಣಿಕ್.ಶುಗರ್ ಬೇಬಿ.ಆರ್ಕಾ ಮುತ್ತು.ಇನ್ನು ಮುಂತಾದವು.
ಎಕ್ಕರೆಗೆ 450 ಗ್ರಾಂ ನಿಂದ 600 ಗ್ರಾಂ ಬೀಜ ಬಿತ್ತನೆಗೆ ಬೇಕಾಗುತ್ತದೆ.

ಕಲ್ಲಂಗಡಿ ಬಿತ್ತನೆ ಪದ್ದತಿ : 
ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಿ ಪ್ರತಿ ಹೆಕ್ಟೇರ್  ಗೆ  25 ರಿಂದ 30 ಟನ್ ಕೊಟ್ಟಿಗೆ ಗೊಬ್ಬರವನ್ನು ಮಣ್ಣಿಗೆ ಬೆರೆಸಬೇಕು.ನಂತರ 50 ಕಿ ಗ್ರಾಂ ಸಾರಜನಕ.80 ಕಿ ಗ್ರಾಂ ರಂಜಕ.ಹಾಗೂ 100 ಕಿ ಗ್ರಾಂ ಪೊಟ್ಯಾಶ್ ಗೊಬ್ಬರವನ್ನು ಮಣ್ಣಿಗೆ ಬೆರೆಸಿ ಸಾಲಿನಿಂದ ಸಾಲಿಗೆ  3 ಮೀ ಬೀಜದಿಂದ ಬೀಜಕ್ಕೆ 1 ಮೀ ಅಂತರದಲ್ಲಿ ಪ್ರತಿ ಗುಣಿಯಲ್ಲಿ ಎರಡು ಬೀಜಗಳನ್ನ ಊರಬೇಕು.ಬಿತ್ತನೆ ಮಾಡಿದ 3 ವಾರಗಳ ನಂತರ ಕಳೆ ನಿರ್ಮೂಲನೆ ಮಾಡಿ 50 ಕಿ ಗ್ರಾಂ ಸಾರಜನಕ.25 ಕಿ ಗ್ರಾಂ ಪೊಟ್ಯಾಶ್ ಗೊಬ್ಬರವನ್ನು ಬಳ್ಳಿಯಿಂದ 15 ಸೆಂ ಮೀ ದೂರದಲ್ಲಿ ನೀಡಬೇಕು.ನೀರಾವರಿಯಲ್ಲಿ ಸಾಲು ನೀರಾವರಿ.ಹನಿ ನೀರಾವರಿ ಉತ್ತಮ ಸ್ಪಿಂಕ್ಲರ್ ನೀರಾವರಿ ಈ ಬೆಳೆಗೆ ಸೂಕ್ತವಲ್ಲ.

ಬೀಜ ಹಾಕಿದ  20 ದಿನಗಳ ನಂತರ ಬಳ್ಳಿಯ ಕುಡಿ ಮುರಿಯುವದರಿಂದ ಹೆಚ್ಚು ಹರೆಗಳು ಒಡೆಯುತ್ತದೆ.11 ನೇ ಗಣ್ಣಿಗಿಂತ ಮೊದಲು ಬರುವ ಹೂವುಗಳನ್ನ ಚಿವುಟುವದರಿಂದ ಬಳ್ಳಿಯ ಬೆಳವಣಿಗೆ ಸದ್ರುಡವಾಗುವುದು.ಬಳ್ಳಿಯಲ್ಲಿ ಅವಶ್ಯಕತೆಗಿಂತ ಹೆಚ್ಚಿಗೆ ಕಾಯಿಗಳಿದ್ದರೆ  2 ಅಥವ 3 ಕಾಯಿ ಉಳಿಸಿ ಉಳಿದ ಕಾಯಿಗಳನ್ನ ತೆಗುಯುವದರಿಂದ ಕಾಯಿಯ ಗಾತ್ರ ಹೆಚ್ಚುವದು.ಸಸ್ಯ ಪ್ರಚೋದಕವಾಗಿ ಗಿಬ್ಬರ್ಲಿಕ್  ಆಮ್ಲವನ್ನು ಬಳಸುವದರಿಂದ ಒಳ್ಳೆಯ ಗುಣಮಟ್ಟದ ಕಾಯಿ ಲಬಿಸುವದು.
ಕಲ್ಲಂಗಡಿ ಬೆಳೆಗೆ ತಗುಲುವ ರೋಗಗಳು:
ದುಂಬಿ.ಹೇನು.ನುಸಿ.ನೊಣ.ಎಲೆ ಸುರಂಗ ಕೀಟ.ಬೂದಿರೋಗ.ಸುಳಿನಂಜು.ಚಿಬ್ಬುರೋಗ.ಸೊರಗು ರೋಗ ಸಾಮಾನ್ಯ ರೋಗಗಳು.
ಕಾಲ ಕಾಲಕ್ಕೆ ರೋಗಕ್ಕೆ ಅನುಗುಣವಾಗಿ ತಙ್ನರ ಸಲಹೆ ಮೇರೆಗೆ ಓಷದಿ ಸಿಂಪಡಣೆ ಮಾಡುವದರಿಂದ ರೋಗಗಳ ಹತೋಟಿ ಮಡಬಹುದು.
ಕೊಯ್ಲು ಮತ್ತು ಇಳುವರಿ:
ಬಳ್ಳಿ ನಾಟಿ ಮಾಡಿದ ದಿನದಿಂದ 70 ರಿಂದ 80 ನೇ ದಿನಕ್ಕೆ ಕಟಾವಿಗೆ ಬರುತ್ತದೆ.ಕಟಾವಿಗೆ ಬಂದ ಕಾಯಿಯ ತೊಟ್ಟು ಒಣಗುವದರ ಜೊತೆ ಕಾಯಿಯ ತಳ ಬಾಗ ಹಳದಿ ಬಣ್ಣಕ್ಕೆ ತಿರುಗುತ್ತದೆ ಅಂತಹ ಕಾಯಿಗಳು ಕೊಯ್ಲು ಮಾಡಲು ಸೂಕ್ತ.ಪ್ರತಿ ಹೆಕ್ಟೆರ್ ಗೆ 50 ರಿಂದ 60 ಟನ್ ಇಳುವರಿ ಪಡೆಯಬಹುದು.

ನುಗ್ಗೆಕಾಯಿ ಕ್ರುಷಿ ಮಾಹಿತಿ.

ನುಗ್ಗೆಕಾಯಿ ಒಂದು ಬಹುವಾರ್ಷಿಕ ಬೆಳೆಯಾಗಿದ್ದು.ಇದರ ಕಾಯಿಗಳಲ್ಲದೆ ಹೂವು ಹಾಗೂ ಸೊಪ್ಪುಗಳನ್ನು ಸಹ ತರಕಾರಿಯಂತೆ ಉಪಯೋಗಿಸ ಬಹುದು.
ನುಗ್ಗೆ ಸೊಪ್ಪಿನಲ್ಲಿ ವಿಟಮಿನ್ 'ಸಿ" ಕ್ಯಾರೋಟಿನ್.ಐರನ್.ರಂಜಕ.ಕ್ಯಾಲ್ಸಿಯಂ .ಸಾಕಷ್ಟು ಪ್ರಮಾಣದಲ್ಲಿವೆ.ನುಗ್ಗೆಕಾಯಿಯೂ ಸಹ ರಂಜಕ ಮತ್ತು ಕ್ಯಾರೋಟಿನ್  ಒದಗಿಸುತ್ತದೆ.
ನುಗ್ಗೆಕಾಯಿಯನ್ನು ಮಣ್ಣಿನ ರಸ ಸಾರ  6 ರಿಂದ 6.7 ಇರುವಂತಹ ಸಾಧಾರಣವಾಗಿ ಎಲ್ಲಾ ಮಣ್ಣಿನಲ್ಲೂ ಬೆಳೆಯಬಹುದು.ಅತಿಯಾದ ಜಿಗುಟು ಮಣ್ಣು ಇದಕ್ಕೆ ಯೋಗ್ಯವಲ್ಲ.ಅಲ್ಪ ಮಳೆ ಬೀಳುವ ಒಣ ಪ್ರಧೇಶ ಬೆಳೆಯಾಗಿದ್ದು ನೀರಾವರಿ ಅನುಕೂಲವಿದ್ದಲ್ಲಿ ವರ್ಷದ ಎಲ್ಲಾ ಕಾಲದಲ್ಲೂ ಇದನ್ನು ನಾಟಿ ಮಾಡಬಹುದು.

ನುಗ್ಗೆಕಾಯಿ ತಳಿಗಳು: 
ಪಿ.ಕೆ.ಎಂ-1.  ಭಾಗ್ಯ (ಕೆ.ಡಿ.ಎಮ್-01).
ಧನರಾಜ (ಸೆಲೆಕ್ಷನ್ 6/4). ಜಿ.ಕೆ.ವಿ.ಕೆ.1.
ಜಿ.ಕೆ.ವಿ.ಕೆ.2.   ಜಿ.ಕೆ.ವಿ.ಕೆ 3.
ಸಸಿ ತಯಾರಿಸುವ ವಿಧಾನ.1kg ಮಣ್ಣಿನ ಪಾಲಿಥೀನ್ ಚೀಲದಲ್ಲಿ 2:1:1 ಅನುಪಾತದಲ್ಲಿ ಮಣ್ಣು.ಮರಳು.ಕೊಟ್ಟಿಗೆ ಗೊಬ್ಬರ ಬೆರೆಸಿ ತುಂಬಬೇಕು 2 ಸೆಂ.ಮೀ ಆಳದಲ್ಲಿ ಪ್ರತಿ ಚೀಲದಲ್ಲೂ 2 ಬೀಜ ಉರಬೇಕು.ಪ್ರತೀ ಚೀಲಕ್ಕೂ 5 ಗ್ರಾಂ ನಂತೆ ರಾಸಾಯನಿಕ ಗೊಬ್ಬರ ನೀಡಿ ದಿನಕ್ಕೊಮ್ಮೆ ನೀರು ಬಿಡಬೇಕು.7 ರಿಂದ 10 ದಿನದಲ್ಲಿ ಮೊಳಕೆ ಬರುತ್ತವೆ.4 ರಿಂದ 5 ನೇ ವಾರಕ್ಕೆ ನಾಟಿ ಮಾಡಲು ಸಿದ್ದವಾಗುತ್ತದೆ.
ನುಗ್ಗೆಕಾಯಿ ನಾಟಿ ಪದ್ದತಿ : 
60 ಘನ ಸೆಂ ಮೀ ಗುಣಿಗಳನ್ನ 5 ಮೀ ಅಂತರದಲ್ಲಿ ತೆಗೆದು ಮಣ್ಣು ಮತ್ತು ಕೊಟ್ಟಿಗೆ ಗೊಬ್ಬರ ತುಂಬಿ ಗಿಡಗಳನ್ನ ನೆಡಬೇಕು.ನಂತರ ಸಾರಜನಕ 50 ಕಿ ಗ್ರಾಂ.ರಂಜಕ 125 ಕಿ ಗ್ರಾಂ. ಪೊಟ್ಯಾಶ್ 30 ಕಿ ಗ್ರಾಂ ಮಿಶ್ರಣದ ಗೊಬ್ಬರವನ್ನು ಪ್ರತಿ ಹೆಕ್ಟೇರ್ ಗೆ ನೀಡಬೇಕು. ಸಸಿ ನಾಟಿ ಮಾಡಿದ 60 ರಿಂದ 70 ದಿನಕ್ಕೆ ಮುಖ್ಯ ಹರೆಯನ್ನು ಚಿವುಟ ಬೇಕು ನಂತರ 30 ರಿಂದ 40 ನಂತರ ಕವಲು ಹರೆಗಳನ್ನ ಚಿವುಟ ಬೇಕು.ಈ ರೀತಿ ಮಾಡುವದರಿಂದ ಕವಲುಗಳು ಹೆಚ್ಚು ಒಡೆದು ತಳಿಯು ಗಿಡ್ಡವಾಗಿ ಕಾಯಿ ಕೊಯ್ಲು ಮಾಡುವಾಗ ಅನುಕೂಲವಾಗುತ್ತದೆ.
ನುಗ್ಗೆಕಾಯಿ ಬೆಳೆಗೆ ತಗುಲುವ ರೋಗಗಳು:
 ಬೂದಿರೋಗ.ಎಲೆ ಚುಕ್ಕೆರೋಗ.ಹೇನು.ಹೂ ಮೊಗ್ಗಿನ ಕಾಯಿ ಕೊರಕ.ಕಪ್ಪು ಕಂಬಳಿ ಹುಳು.ಈ ರೋಗಗಳನ್ನು ಕಾಲ ಕಾಲಕ್ಕೆ ತಙ್ನರ ಸಲಹೆ ಮೇರೆಗೆ ನೀವಾರಿಸ ಬಹುದು.
ನಾಟಿ ಮಾಡಿದ 8 ರಿಂದ 9 ತಿಂಗಳಿಗೆ ಹೂವು ಕಾಯಿ ಶುರುವಾಗುತ್ತವೆ.ಪ್ರತಿ ಗಿಡದಿಂದ ಬಲಿತ 200 ರಿಂದ 250 ಕಾಯಿ ಪಡೆಯಬಹುದು.

ಭಾನುವಾರ, ಜೂನ್ 13, 2021

ಮೆಣಸಿನಕಾಯಿ ಬೆಳೆ ಮಾಹಿತಿ.

ಮೆಣಸಿನಕಾಯಿ ಮನುಷ್ಯನ ದೇಹಕ್ಕೆ ಬೇಕಾದ ' ಎ" ಮತ್ತು 'ಸಿ" ವಿಟಮಿನ್ ಅನ್ನು ಒದಗಿಸುವ ಒಂದು ಮುಖ್ಯವಾದ ತರಕಾರಿ.ಇದನ್ನು ಒಣ ಸಾಂಬಾರು ಪದಾರ್ಥಗಳನ್ನಾಗಿಯು ಬಳಸಬಹುದು.
ಮೆಣಸಿನಕಾಯಿ ಬೆಳೆಯನ್ನು.ಬೇಸಿಗೆ ಮತ್ತು ಮಳೆಗಾಲ ಮತ್ತು ಚಳಿಗಾಲ ಮೂರು ಹವಾಮಾನದಲ್ಲೂ ಬೆಳೆಯಬಹುದು.ಖುಷ್ಕಿ ಬೆಳೆಯಾಗಿ ಮೇ _ ಜೂನ್.ಅಲ್ಲಿ.ನೀರಾವರಿ ಬೆಳೆಯಾಗಿ ಅಕ್ಟೋಬರ್ _ ನವೆಂಬರ್ . ಮತ್ತು ಜನವರಿ _ ಫೆಬ್ರವರಿ  ತಿಂಗಳುಗಳು ಸೂಕ್ತವಾದ ಕಾಲ.
ಮೆಣಸಿನ ಕಾಯಿಯಲ್ಲಿ ಸ್ಥಳೀಯ ತಳಿಗಳು:
ಬ್ಯಾಡಗಿ ಕಡ್ಡಿ.ಬ್ಯಾಡಗಿ ಡಬ್ಬಿ.ಕೊಳ್ಳೆಗಾಲ.ದ್ಯಾವನೂರು.ಗುಂಟೂರು.ಗೊರಿಬಿದನೂರು.ಸಂಕೇಶ್ವರ.ಕಾದರೊಳಿ.ಚಿಂಚೊಳಿ.ಪೂಸಾ ಜ್ವಾಲ.ಬಾಗ್ಯಲಕ್ಷ್ಮಿ.ಆರ್ಕಾ ತಳಿಗಳು ಉತ್ತಮ.
ಮೆಣಸಿನಕಾಯಿ ನಾಟಿ ವಿಧಾನ:
ಆಳವಾಗಿ ಉಳುಮೆ ಮಾಡಿದ ಭೂಮಿಯನ್ನು ಸಿದ್ದಪಡಿಸಿಕೊಂಡು 75ಸೆಂ ಮೀ ಅಂತರದಲ್ಲಿ ಎತ್ತರಕ್ಕೆ ಮಣ್ಣು ಹೇರುವಂತೆ ಸಾಲು ಮಾಡಿ ಸಾಲಿನಲ್ಲಿ ಕೊಟ್ಟಿಗೆ ಗೊಬ್ಬರ ಹಾಕಿ ಶೇ.50 ಸಾರಜನಕ.ರಂಜಕ.ಪೊಟ್ಯಾಷ್ ಗೊಬ್ಬರವನ್ನು ಹಾಕಿ ನೀರು ಹಾಸಿ ನಂತರ ಗಿಡದಿಂದ ಗಿಡಕ್ಕೆ 45 ಸೆಂ.ಮೀ. ಅಂತರದಲ್ಲಿ ಸಾಲಿನ ಎತ್ತರದ ಮಣ್ಣಿನ ಮೇಲೆ ನಾಟಿ ಮಾಡಿ.

ನೀರಾವರಿ:
ಮಣ್ಣು ಹಾಗು ಹವಾಗುಣವನ್ನಾದರಿಸಿ ಕಪ್ಪು ಮಣ್ಣಿನಲ್ಲಿ 15 ದಿನಕ್ಕೊಮ್ಮೆ.ಕೆಂಪು ಮಣ್ಣಿನಲ್ಲಿ 5 ರಿಂದ 8 ದಿನಕ್ಕೊಮ್ಮೆ ನೀರು ಕೊಡಬಹುದು.
ನಂತರ ಕಳೆ ನಿರ್ವಹಣೆ ಮಾಡಿ ಮೇಲು ಗೊಬ್ಬರವಾಗಿ ಶೇ.50 ರಷ್ಟು ಸಾರಜನಕ.ರಂಜಕ .ಪೊಟ್ಯಾಷ್ ಗೊಬ್ಬರವನ್ನು ಕೊಟ್ಟು ಗಿಡಗಳ ಬುಡಕ್ಕೆ ಮಣ್ಣನ್ನು ಹೇರಬೇಕು.

ಕೀಟ ಮತ್ತು ರೋಗಗಳು:
ಥ್ರಿಪ್ಸ್.ನುಸಿ.ಹೇನು.ಜೇಡ.ಬಿಳಿನೊಣ.ಸಸಿ ಕತ್ತರಿಸುವ ಹುಳು.ಕಾಯಿ ಕೊರಕ.ಸಸಿ ಕೊಳೆ.ಎಲೆ ಚುಕ್ಕಿ.ಬೂದಿರೋಗ.ಹಣ್ಣುಕೊಳೆ ರೋಗ.ಎಲೆ ಮುಟುರು.ಚಿಬ್ಬುರೋಗ.ಹಲವಾರು ರೋಗಗಳಿದ್ದು ಕಾಲ ಕಾಲಕ್ಕೆ ಆ ರೋಗಗಳಿಗೆ ತಜ್ಞರ ಸಲಹೆಯಂತೆ ರೋಗ ನಿಯಂತ್ರಣ ಮಾಡಿದರೆ ಅಧಿಕ ಇಳುವರಿ ಪಡೆಯಬಹುದು.
ಮೆಣಸಿನಕಾಯಿ ಕೊಯ್ಲು:
ನಾಟಿ ಮಾಡಿದ 60 ರಿಂದ 70 ದಿನದಲ್ಲಿ ಹಸಿಕಾಯಿಗಳ ಕೊಯ್ಲು ಮಾಡಬಹುದು.ನಾಟಿ ಮಾಡಿದ 90 ರಿಂದ 110 ದಿನಗಳವರೆಗೆ ಒಣ ಕಾಯಿಗಳನ್ನ ಕೊಯ್ಲು ಮಾಡಬಹುದು.

ಶನಿವಾರ, ಜೂನ್ 12, 2021

ತೆಂಗು ಬೆಳೆ ಮಾಹಿತಿ.

ತೆಂಗು ಉಷ್ಣವಲಯದ ಬೆಳೆಯಾಗಿದೆ ಹೆಚ್ಚು ಪ್ರಕಾಶಮಾನವಾದ ಬೆಳಕನ್ನು ಬಯಸುತ್ತದೆ.ಇದನ್ನು ಸಮುದ್ರಮಟ್ಟದಿಂದ 1000 ಮೀ ಎತ್ತರದವರೆಗಿನ ತಾಪಮಾನದಲ್ಲೂ ಅಂದರೆ ಉಷ್ಣಾಂಶ 15ಡಿ ಇಂದ 35ಡಿ ಸೆ.ವರೆಗಿನ ಪ್ರದೇಶದಲ್ಲಿ ಉತ್ತಮ ಬೆಳೆ ಮಾಡಬಹುದು.ಉತ್ತಮ ಇಳುವರಿಗೆ ಬೇಸಿಗೆ ಕಾಲದಲ್ಲಿ ನೀರಾವರಿ ಅತ್ಯಗತ್ಯ.
ಕಲ್ಪವೃಕ್ಷ ಎಂದು ಕರೆಯುವ ತೆಂಗು ಕರ್ನಾಟಕ ರಾಜ್ಯದ ಮುಖ್ಯ ವಾಣಿಜ್ಯ ಬೆಳೆಗಳಲ್ಲಿ ಒಂದು.ಇದು ಹಸಿ ಕೊಬ್ಬರಿ.ಒಣಕೊಬ್ಬರಿ.ಎಣ್ಣೆ.ಪಾನೀಯ.ಮತ್ತು ಉರುವಲುಗಳನ್ನು ಒದಗಿಸುವದರ ಜೊತೆಗೆ ಕತ್ತಾ.ನಾರು.ಕೋಕೊ ಪಿಟ್.ನಂತಹ ಕಚ್ಚಾ ಪದಾರ್ಥಗಳನ್ನು ಒದಗಿಸುತ್ತದೆ.
1. ಎತ್ತರದ ತಳಿಗಳು:
ಅರಸಿಕೆರೆ ಟಾಲ್.
ಕಲ್ಪತರು.
ವೆಸ್ಟ್ ಕೋಸ್ಟ್ ಟಾಲ್.
 2.ಗಿಡ್ಡ ತಳಿಗಳು:
ಗಂಗ ಬೊಂಡಂ.7

ಕೇಸರಿ ಬಣ್ಣದ ಚೊಘಾಟ್ ಗಿಡ್ಡ.
ಹಸಿರು ಬಣ್ಣದ ಚೊಘಾಟ್ ಗಿಡ್ಡ.
ಕೇಸರಿ ಮಲಯನ್ ಗಿಡ್ಡ.
 3.ಸಂಕರಣ ತಳಿಗಳು:
  ಟಾಲ್ x ಡ್ವಾರ್ಫ್(ಟಿ x ಡಿ).
  ಡ್ವಾರ್ಫ್ x ಟಾಲ್ (ಡಿ x ಟಿ).
  ನ್ಯಾಚುರಲ್ ಕ್ರಾಸ್ ಡ್ವಾರ್ಫ್
    (ಎನ್.ಸಿ.ಡಿ)
 ಇವುಗಳ ಜೊತೆ ಕೆಂದ್ರೀಯ ಪ್ಲಾಂಟೇಷನ್ ಬೆಳೆ ಸಂಶೋಧನಾ ಸಂಸ್ಥೆ ಬಿಡುಗಡೆ ಗೊಳಿಸಿದ ಚಂದ್ರ ಸಂಕರ (ಡಿ x ಟಿ).ಕೇರ ಸಂಕರ (ಟಿ x ಡಿ).ಚಂದ್ರ ಲಕ್ಷ(ಟಿ x ಡಿ).ಕಲ್ಪ ಸಂಮ್ರುದ್ದಿ(ಡಿ x ಟಿ).ಕಲ್ಪಸಂಕರ (ಡಿ x ಟಿ) ಈ ಸಂಕರಣ ತಳಿಗಳು ಕರಾವಳಿ ಪ್ರಧೇಶಕ್ಕೆ ಸೂಕ್ತವಾಗಿದ್ದು ಉತ್ತಮ ಇಳುವರಿಯನ್ನ ನೀಡುತ್ತವೆ.
ತೆಂಗು ಬೆಳೆ ನಾಟಿಯ ಅಂತರ:
1.ಎತ್ತರ ತಳಿ.9ಮೀ x 9ಮೀ.1ಹೆಕ್ಟೆರ್ಗೆ 123 ಗಿಡ.
2.ಗಿಡ್ಡ ಸಂಕರ ತಳಿ 7.5ಮೀ x 7.5ಮೀ 178 ಗಿಡಗಳನ್ನು ಕಟ್ಟಬಹುದು.ಕೊಟ್ಟಿಗೆ.ಕಾಂಪೋಸ್ಟ್.ಗೊಬ್ಬರದ ಜೊತೆ ರಾಸಾಯನಿಕ ಗೊಬ್ಬರಗಳನ್ನು ಮಣ್ಣಿನ ಗುಣಗಳಿಗೆ ಅನುಸಾರ ಬಳಸಬೇಕು.ಪ್ರಾರಂಬಿಕ ಹಂತದಲ್ಲಿ ಗುಣಿ ಮಾದರಿಯಲ್ಲಿ ಪ್ರತಿ ಎರಡು ಮೂರು ದಿನಕ್ಕೊಮ್ಮೆ ನೀರು ಕೊಡಬೇಕು.ಬೇಸಿಗೆಯಲ್ಲಿ ಉತ್ತಮ ನೀರಿನ ನಿರ್ವಹಣೆ ಇಂದ ಅಧಿಕ ಇಳುವರಿ ಪಡೆಯ ಬಹುದು.
ತೆಂಗು ಬೆಳೆಗೆ ತಗುಲುವ  ಕೀಟಬಾದೆ:
1.ಸುಳಿಕೊರೆಯುವ ರೆನೋಸರಸ್ ದುಂಬಿ.
2.ಕೆಂಪು ಮೂತಿ.
3.ಹಿಟ್ಟು ತಿಗಣೆ.
4.ಗೆದ್ದಲು.
5.ಗೊಣ್ಣೆ ಹುಳು.
6.ನುಸಿ.
ರೋಗಬಾದೆ:
1.ಕಾಂಡ ಸೋರುವ ರೋಗ.
2.ಅಣಬೆ ರೋಗ.
3.ಸುಳಿಕೊಳೆ.(ಬಡ್ ರಾಟ್).
4.ಎಲೆ ಚುಕ್ಕೆ ರೋಗ.
ಈ ಎಲ್ಲಾ ಕೀಟ ಮತ್ತು ರೋಗಬಾದೆಗಳನ್ನು ಸಂಬಂದ ಪಟ್ಟ ಇಲಾಕೆಗಳು ನೀಡುವ ಮಾಹಿತಿಯನುಸಾರ ಯಶಸ್ವಿಯಾಗಿ ನಿಯಂತ್ರಿಸಿದಲ್ಲಿ ಉತ್ತಮ ಇಳುವರಿ ಪಡೆಯಬಹುದು.

ಕೊಯ್ಲು ಮತ್ತು ಇಳುವರಿ:
ಸಂಕರಣ ತಳಿಗಳಿಂದ: ಪ್ರತಿ ಗಿಡಕ್ಕೆ 100ರಿಂದ150 ಕಾಯಿ.
ಎತ್ತರದ ತಳಿಗಳಿಂದ: ಪ್ರತಿ ಗಿಡಕ್ಕೆ 80ರಿಂದ 100 ಕಾಯಿ.
ಗಿಡ್ಡ ತಳಿಗಳಿಂದ: ಪ್ರತಿ ಗಿಡಕ್ಕೆ 80 ರಿಂದ 100 ಕಾಯಿ ಪಡೆಯಬಹುದು.

ತೆಂಗು ಬೆಳೆ ಮಾರುಕಟ್ಟೆ:
ಹಸಿ ಕಾಯಿಗಳ ಮಾರಾಟ.
ಉಂಡೆ ಕೊಬ್ಬರಿ(ಗಿಟಗ) ವರ್ಷದವರೆಗೂ ಶೇಕರಣೆ ಮಾಡಬಹುದು.
ಹೋಳು ಕೊಬ್ಬರಿಯನ್ನು ಎಣ್ಣೆ ತೆಗೆಯಲ್ಲು ಬಳಸಬಹುದು.
ಎಳನೀರು.ಆರೋಗ್ಯವರ್ಧಕ ಪಾನೀಯಕ್ಕೆ ಬಳಸಬಹುದು

ರೈತರ ಆರ್ಥಿಕತೆ ಮತ್ತು ಕ್ರುಷಿ.

ಎರಡನೆ ಹಸಿರು ಕ್ರಾಂತಿಗೂ ಮೊದಲು ರೈತರು ಕ್ರುಷಿ ಜೀವನ ನೆಮ್ಮದಿಯಾಗಿತ್ತು ಕಾರಣ ಆಗ ಕ್ರುಷಿಯನ್ನ ರೈತರು ಕೇವಲ ತಮ್ಮ ಅವಶ್ಯಕತೆಗಾಗಿ ಮಾತ್ರ ಮಾಡುತ್ತಿದ್ದರು ಆಗ ಅವಿಭಕ್ತ ಕುಟುಂಬಗಳೆ ಹೆಚ್ಚು ಮನೆ ತುಂಬಾ ಜನ.ದನ.ಕರು.ಎಲ್ಲಾ ಕುಟುಂಬ ಸದಸ್ಯರು ಕ್ರುಷಿ ಚಟುವಟಿಕೆಗಳಲ್ಲಿ ಪಾಲುಗೊಳ್ಳುತ್ತಿದ್ದರು ತಮ್ಮ ಜೀವನಾವಶ್ಯಕ ದಾನ್ಯಗಳನ್ನ ತಾವೆ ಬೆಳೆದು ಕೊಳ್ಳುತ್ತಿದ್ದರು.ಅವರ ಅವಶ್ಯಕತೆಗಿಂತ ಹೆಚ್ಚಾಗಿ ಉಳಿದರೆ ಮಾತ್ರ ಮಾರಾಟ ಮಾಡುತ್ತಿದ್ದರು.ಅವರು ತಮ್ಮ ಕ್ರುಷಿಗೆ ಬೇಕಾದ ನಾಟಿ ತಳಿ ಬೀಜಗಳನ್ನ ತಾವೆ ಸಂಗ್ರಹಿಸಿ ಇಡುತ್ತಿದ್ದರು.ಮನೆಯ ದನ.ಕರುಗಳ ಸೆಗಣಿ ಗೊಬ್ಬರವನ್ನೆ ಬಳಸುತ್ತಿದ್ದರು.ಹಾಗಾಗಿ ಕ್ರುಷಿಗೆ ಮೂಲ ಬಂಡವಾಳವೆಂದು ಅವರು ಎಂದೂ ಸಾಲ ಮಾಡುತ್ತಿರಲಿಲ್ಲ.ಹಾಗೂ ಅವರ ಜೀವನಾವಶ್ಯಕತೆಗಳು ಕಡಿಮೆ ಇದ್ದವು.
ಕಾಲಾನಂತರ ಎರಡನೇ ಹಸಿರು ಕ್ರಾಂತಿಯ ನಂತರ ದೊಡ್ಡ ದೊಡ್ಡ ವಾಣಿಜ್ಯ ಕಂಪೆನಿಗಳು ರೈತನಿಗೆ ಅಬಿವ್ರುದ್ದಿ ತಳಿಗಳು.ರಾಸಾಯನಿಕ ಗೊಬ್ಬರಗಳು.ಓಷದಗಳು.ಯಂತ್ರಗಳನ್ನು ಪರಿಚಯಿಸುವದರ ಜೊತೆಗೆ ರೈತನಲ್ಲಿ ಅಧಿಕ ಬೆಳೆಯಿಂದ ಅಧಿಕ ಹಣಗಳಿಸಬಹುದೆಂಬ ಆಮೀಷಕ್ಕೆ ಕೆಡವಿದವು.ಕಾಲ ಮುಂದುವರಿದಂತೆ ರೈತನ ಮೂಲ ಜೀವನಾವಶ್ಯಕತೆಗಳು ಹೆಚ್ಚಾಗಿದ್ದವು.ಮೂಲ ಕ್ರುಷಿ ಪದ್ದತಿ ನಾಟಿ ತಳಿಗಳಿಂದ ಬರುವ ಇಳುವರಿಗಳಿಂದ ಅವನ ಜೀವನ ನಿರ್ವಹಣೆ ಕಷ್ಟವಾಗಿತ್ತು.ಹಾಗಾಗಿ ರೈತರು ಬಹು ಬೇಗ ಕಂಪೆನಿಗಳ ಅಧಿಕ ಇಳುವರಿ ತಳಿಗಳಿಗೆ ರೈತರು ಮಾರು ಹೋದರು.ಕಂಪೆನಿಗಳ ಉತ್ಪನ್ನಗಳ ಖರೀದಿ ಇಂದ ಕ್ರುಷಿಯ ಮೂಲ ಬಂಡವಾಳ ಹೆಚ್ಚಾಗುತ್ತಾ ಹೋಯಿತು.ಆ ಬಂಡವಾಳವನ್ನು ಒದಗಿಸಲು ಹತ್ತಾರು ಸರಕಾರಿ.ಮತ್ತು ಖಾಸಗಿ ಹಣಕಾಸು ಸಂಸ್ಥೆಗಳು ಹುಟ್ಟಿಕೊಂಡವು.
ಸರ್ಕಾರ  ಮತ್ತು ಖಾಸಗಿ ಭ್ಯಾಂಕುಗಳ ಸಾಲ ಪಡೆದ ರೈತ ಅದನ್ನು ಬಹುರಾಷ್ಟ್ರೀಯ ಕಂಪೆನಿಗಳ ಬೀಜ.ಗೊಬ್ಬರ.ಓಷದ.ಯಂತ್ರ.ಸಲಕರಣೆಗಳ ಖರೀದಿಸುವದರ ಜೊತೆಗೆ ಬಹುರಾಷ್ಟ್ರೀಯ ಕಂಪೆನಿಗಳನ್ನು ಬೆಳೆಸಿದನೆ ಹೊರತು ರೈತ ಮಾತ್ರ ಆರ್ಥಿಕವಾಗಿ ಬೆಳೆಯಲೆ ಇಲ್ಲ.ರೈತನ ಆದಾಯವನ್ನು ಸುಧಾರಿಸುವ ನಿಟ್ಟಿನಲ್ಲಿ ಸರ್ಕಾರಗಳು ಪಾತ್ರವಹಿಸಲಿಲ್ಲ ಬದಲಾಗಿ ಸರ್ಕಾರಗಳು ಆ ಬಹುರಾಷ್ಟ್ರೀಯ ಕಂಪೆನಿಗಳ ಬೆಳೆವಣಿಗೆಗೆ  ಉತ್ತೇಜನ ನೀಡಿದವು.
ಇನ್ನೊಂದು ಕಡೆ  ಕಾಲ ಕಾಲಕ್ಕೆ ಸರಿಯಾಗಿ ಆಗದ ಮಳೆ.ಒಂದು ಕಡೆ ನೆರೆ.ಇನ್ನೊಂದು ಕಡೆ ಬರ.ನೆರೆ ಬರ ಎಲ್ಲವನ್ನು ಎದುರಿಸಿ ಯಶಸ್ವಿ ಬೆಳೆ ಬೆಳೆದರು ದಲ್ಲಾಳಿಗಳ ಕಾಟ ಬೆಲೆ ಕುಸಿತ.ರೈತ ತನ್ನ ಜೀವನಾವಶ್ಯಕತೆಯ ಆರ್ಥಿಕ ಭದ್ರತೆಗೆಂದು  ಕಡಿಮೆ ಬಂಡವಾಳದ ಸಾಂಪ್ರಧಾಯಿಕ ಕ್ರುಷಿ ಇಂದ ವಿಮುಕನಾಗಿ ಹೆಚ್ಚು ಬಂಡವಾಳ ಬೇಡುವ  ಆಧುನಿಕ ಕ್ರುಷಿಯೆಡೆಗೆ ಬಂದು ಇತ್ತಾ ಆರ್ಥಿಕ ಭದ್ರತೆಯೂ ಇಲ್ಲದೆ  ಪುನಃ ಸಾಂಪ್ರದಾಯಿಕ ಕ್ರುಷಿಯೆಡೆಗೆ ಮರಳಲೂ ಆಗದೆ.ತನ್ನ ಜೀವಮಾನದ ದುಡಿಮೆಯೆಲ್ಲಾ ಬಹುರಾಷ್ಟ್ರೀಯ ಕಂಪೆನಿಗಳಿಗಾಗಿ ದುಡಿಯುವಂತಾಗಿರುವದು ದೊಡ್ಡ ವಿಪರ್ಯಾಸ.
ಮೂಲ ಕ್ರುಷಿ ಪದ್ದತಿಯನ್ನೆ ತಿಳಿಯದ ಇಂದಿನ ಯುವ ಕ್ರುಷಿಕರು ಅಧಿಕ ಸಂಪಾಧನೆ ಆಸೆಯಿಂದ ವಾಣಿಜ್ಯ ಬೆಳೆಗಳನ್ನ ಬೆಳೆಯುವ ತವಕದಲ್ಲಿ ಕಂಪೆನಿ ರಾಸಾಯನಿಕ ಗೊಬ್ಬರ.ಓಷದಗಳನ್ನ ಬಳಸುವದರ ಜೊತೆ ಹೆಚ್ಚು ಹೆಚ್ಚು ಸಾಲಗಾರರಾಗಿ ಅತ್ತ ಬೆಳೆಯೂ ಇಲ್ಲ ಇತ್ತ ಲಾಭವೂ ಇಲ್ಲ ಎನ್ನುವಂತಾಗಿ ಕ್ರುಷಿಯಿಂದ ವಿಮುಕರಾಗುತ್ತಿದ್ದಾರೆ.

ಶುಕ್ರವಾರ, ಜೂನ್ 11, 2021

ಆಧುನಿಕ ಕ್ರುಷಿಯಲ್ಲಿ ಪಶುಗಳ ಅವನತಿ.

ಆಗಿನ್ನು 70 -80 ರ ದಶಕದಲ್ಲಿ ಭಾರತದ ಕ್ರುಷಿಯಲ್ಲಿ ಯಂತ್ರಗಳ ಬಳಕೆ ಅಷ್ಟಾಗಿ ಚಲಾವಣೆ ಇರಲಿಲ್ಲ .ಗ್ರಾಮೀಣ ಭಾಗದ ಜನ ಕ್ರುಷಿಯಲ್ಲಿ ಹೆಚ್ಚಾಗಿ ಪಶುಗಳನ್ನೆ ಅವಲಂಬಿಸಿದ್ದ ಕಾಲ ಅದು.ಆಗ ಜನಸಂಖ್ಯೆಗಿಂತ ಧನಗಳ ಸಂಖ್ಯೆಯೆ ಹೆಚ್ಚಾಗಿದ್ದ ಕಾಲವದು ಗ್ರಾಮಿಣಭಾಗದ ಪ್ರತಿ ಮನೆ ಮನೆಯಲ್ಲೂ ಅವರ ಭೂ ಹಿಡುವಳಿ ಅನುಸಾರವಾಗಿ 5 ರಿಂದ 100 ರ ವರೆಗೂ ಪ್ರತಿ ಮನೆಯಲ್ಲೂ ಧನ ಕರುಗಳು ಯಥೇಚ್ಛವಾಗಿ ಇರುತ್ತಿದ್ದವು.ಕ್ರುಷಿ ಜಾಗತೀಕರಣಕ್ಕೂ ಮುಂಚೆ ಕ್ರುಷಿಯಲ್ಲಿ ಪಶು ಗೊಬ್ಬರ.ಸಾವಯವ ಗೊಬ್ಬರಗಳ ಬಳಕೆ ಯಥೇಚ್ಛವಾಗಿ ಬಳಸುತ್ತಿದ್ದರು.ಆಗ ಭೂಮಿಯೂ ಫಲತ್ತಾಗಿರುತ್ತಿತ್ತು ಆಹಾರ ಧಾನ್ಯಗಳು ಸಂಪೂರ್ಣ ಪೋಷಕಾಂಶಯುಕ್ತ ಆಗಿರುತ್ತಿತ್ತು.ಅದನ್ನು ಸೇವಿಸಿದ ಮನುಷ್ಯನ ಆರೋಗ್ಯವು ಚೆನ್ನಾಗಿರುತ್ತಿತ್ತು.
ಕಾಲ ಕಳೆದಂತೆ ಜನಸಂಖ್ಯೆ ವ್ರುದ್ದಿಯಾದಂತೆ ಆಹಾರ ಧಾನ್ಯಗಳ ಕೊರತೆ ಕಾಣಿಸಿಕೊಂಡಿತು.ಜನಸಂಖ್ಯೆಗೆ ಅನುಗುಣವಾಗಿ ಉತ್ಪಾದನೆ ಆಗುತ್ತಿರಲಿಲ್ಲ.ಆಹಾರ ಭದ್ರತೆಗೆ ವಿಧೇಶದಿಂದ ಆಮದು ಮಾಡಿಕೊಳ್ಳುವ ಪರಿಸ್ಥಿತಿ ಇತ್ತು.ಸಮಯಕ್ಕೆ ಸರಿಯಾಗಿ ಆಹಾರ ಧಾನ್ಯಗಳು ಆಮದಾಗದ ಕಾರಣ ಜನರಿಗೆ ಆಹಾರದ ಕೊರತೆ  ಉಂಟಾಗುತ್ತಿತ್ತು.ಇವೆಲ್ಲಕ್ಕು ಪರಿಹಾರ ನೀಡಿದ್ದು ದುಡಿಯುವ ಜನರಿಗೆ ವೇಗ ಮತ್ತು ಶಕ್ತಿಯನ್ನು ತುಂಬಿದ್ದೆ ಯಾಂತ್ರೀಕರಣ ಕ್ರುಷಿ ಮತ್ತು ಕ್ರುಷಿ ಜಾಗತೀಕರಣ.
ಕಾಲ ಕಾಲಕ್ಕೆ ಸರಿಯಾಗಿ ಮಳೆಯಾಗದ ಕಾರಣ ಪಶುಗಳ ಬೇಸಾಯದಿಂದ ಗರಿಷ್ಠ ಮಟ್ಟದ ಬಿತ್ತನೆ.ಉತ್ಪಾದನೆ ಸಾದ್ಯವಾಗುತ್ತಿರಲಿಲ್ಲ ಇದೆಲ್ಲದಕ್ಕೂ ಪರ್ಯಾಯವಾಗಿ ಬಂದ ಟ್ರಾಕ್ಟರ್.ಟಿಲ್ಲರ್.ಹಾಗೂ ಚಿಕ್ಕ ಚಿಕ್ಕ ಯಂತ್ರಗಳು ಕ್ರುಷಿಯ ವೇಗದ ಜೊತೆ ಉತ್ಪಾದನೆಯನ್ನು ಹೆಚ್ಚಿಸಿದವು 
ಕ್ರುಷಿಯಲ್ಲಿ ಯಂತ್ರಗಳ ಆಗಮನದ ನಂತರ ದುಡಿಯುವ ಪಶುಗಳು ರೈತನಿಗೆ ಅನುಪಯುಕ್ತವಾಗಿ ಕಾಣಲಾರಂಬಿಸಿದವು.ಜಾಗತಿಕರಣದ ನೆಪದಲ್ಲಿ ಬಹುರಾಷ್ಟ್ರೀಯ ಕಂಪೆನಿಗಳು ರೈತರಿಗೆ ರಾಸಾಯನಿಕ ಗೊಬ್ಬರಗಳ ಪರಿಚಯ ಮಾಡಿದ್ದರ ಪರಿಣಾಮ ರೈತರು ಅದರಿಂದ ಬರುವ ಅಧಿಕ ಉತ್ಪಾದನೆಯ ಆಸೆಗೆ ಬಿದ್ದು ಪಶು ಗೊಬ್ಬರ.ಸಾವಯವ ಗೊಬ್ಬರ ತೊರೆದು ಬಿಟ್ಟರು.ಇವೆಲ್ಲದರ ಪರಿಣಾಮ ದುಡಿಯುವ ಎತ್ತುಗಳು ರೈತನಿಗೆ ಅನುಪಯುಕ್ತವಾಗಿ ಕಾಣಲಾರಂಬಿಸಿದವು ಜೊತೆಗೆ ನಿರ್ವಹಣೆಯೂ ಹೊರೆ ಎನ್ನಿಸಲಾರಂಬಿಸಿತು.ಎತ್ತು ದನ ಕರುಗಳನ್ನ ಮಾರಿದ ರೈತರು ಇಂದು ಸಂಪೂರ್ಣ ಯಾಂತ್ರಿಕ ಕ್ರುಷಿಯ ಮೊರೆ ಹೋಗಿದ್ದಾರೆ ಪಶುಗಳ ಸಂತತಿಗಳು ಅವನತಿಯಾಗಿ ಹೋಗಿವೆ.ದುಡಿಯುವ ಎತ್ತುಗಳ ಜಾಗದಲ್ಲಿ ವಿಧೇಶಿಯ ಅಧಿಕ ಹಾಲು ಹಿಂಡುವ ತಳಿಗಳು ಬಂದು ಕುಳಿತಿವೆ.
ಅಧಿಕ ಉತ್ಪಾದನೆ  ಹಾಗು ಹಣದಾಸೆಗೆ ಬಿದ್ದ ರೈತರಿಂದು ತಮಗೆ ಅರಿವಿಲ್ಲದೆ ಬಹುರಾಷ್ಟ್ರೀಯ ಕಂಪೆನಿಗಳ ಕಪಿ ಮುಷ್ಟಿಗೆ ಸಿಲುಕಿ ಇಂದು ತಮ್ಮ ಕ್ರುಷಿಗೆ ಮೂಲವಸ್ತುಗಳಾದ ಬೀಜ.ಗೊಬ್ಬರ.ಓಷದಿ.ಯಂತ್ರ.ಸಲಕರಣೆ ಎಲ್ಲದಕ್ಕೂ ಬಹುರಾಷ್ಟ್ರೀಯ ಕಂಪೆನಿ ಉತ್ಪನ್ನಗಳನ್ನೆ ಅವಲಂಬಿಸಿದ್ದರಿಂದ ಕ್ರುಷಿಯ ಮೂಲ ಬಂಡವಾಳ ಹೆಚ್ಚಾಗಿ ಲಾಭಾಂಶ ಕಡಿಮೆ ಮಾಡಿಕೊಳ್ಳುವದರ ಜೊತೆಗೆ ಮೂಲ ಕ್ರುಷಿಯ ತಂತ್ರಗಾರಿಕೆ.ತಳಿಗಳು.ಎಲ್ಲವನ್ನು ಕಳೆದು ಕೊಳ್ಳುವದರ ಜೊತೆಗೆ ಕ್ರುಷಿ ಅವನತಿಯತ್ತ ಸಾಗುತ್ತಿದೆ.

ಬಾಳೆ ಕ್ರುಷಿ

ಬಾಳೆ ಒಂದು ಬಹುಜನಪ್ರಿಯ ಹಣ್ಣಿನ ಬೆಳೆ ಮಾವಿನಹಣ್ಣಿನ ನಂತರದ ಸ್ಥಾನ ಬಾಳೆ ಹಣ್ಣಿಗೆ ಲಭಿಸುತ್ತದೆ.ಭಾರತದಲ್ಲಿ 50 ಕ್ಕೂ ಹೆಚ್ಚು ತಳಿಗಳಿದ್ದು ಅವು ವಿವಿಧ ಭಾಗದಲ್ಲಿ ಬೆಳೆ...