expr:class='"loading" + data:blog.mobileClass'>
ಹಣ್ಣಿನ ಬೆಳೆಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಹಣ್ಣಿನ ಬೆಳೆಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಆಗಸ್ಟ್ 27, 2021

ಬಾಳೆ ಕ್ರುಷಿ

ಬಾಳೆ ಒಂದು ಬಹುಜನಪ್ರಿಯ ಹಣ್ಣಿನ ಬೆಳೆ ಮಾವಿನಹಣ್ಣಿನ ನಂತರದ ಸ್ಥಾನ ಬಾಳೆ ಹಣ್ಣಿಗೆ ಲಭಿಸುತ್ತದೆ.ಭಾರತದಲ್ಲಿ 50 ಕ್ಕೂ ಹೆಚ್ಚು ತಳಿಗಳಿದ್ದು ಅವು ವಿವಿಧ ಭಾಗದಲ್ಲಿ ಬೆಳೆಯಲಾಗುತ್ತಿದೆ.
ಬಾಳೆಹಣ್ಣಿನಲ್ಲಿ ಹೇರಳವಾದ ಶರ್ಕರಪಿಷ್ಟ ಮತ್ತು ಖನಿಜಾಂಶಗಳ ಜೊತೆ ಹೇಚ್ಚಿನ ಜೀವಸತ್ವಗಳನ್ನು ಒಳಗೊಂಡಿದ್ದು ಇದು ನಮ್ಮ ಜೀರ್ಣಾಂಗ ಸಮಸ್ಯೆಗಳ ನಿವಾರಣೆಗೆ ಸಹಕಾರಿಯಾಗಿದೆ.

ಬಾಳೆ ಕ್ರುಷಿಗೆ ಸೂಕ್ತ ಮಣ್ಣು ಮತ್ತು ಕಾಲ  :
ಬಾಳೆ ಬೆಳೆಗೆ ನೀರಾವರಿ ಅನುಕೂಲವಿರುವ ಎಲ್ಲಾ ಕಡೆ ಬೆಳೆಯಬಹುದಾದರೂ ಚೆನ್ನಾಗಿ ನೀರು ಬಸಿದು ಹೋಗುವ ಕೆಂಪುಗೋಡು.ಕಪ್ಪುಗೋಡು ಮಣ್ಣು ಸೂಕ್ತ ತೇವಾಂಶವನ್ನು ದೀರ್ಘಕಾಲ ಕಾಯ್ದಿಟ್ಟುಕೊಳ್ಳುವ ಸಾವಯವ ಅಂಶದಿಂದ ಸಂಪದ್ಬರಿತವಾದ ಮಣ್ಣು ಸೂಕ್ತ.
ಬಾಳೆಯನ್ನು ವರ್ಷದ ಯಾವುದೇ ಕಾಲದಲ್ಲಿ ನಾಟಿ ಮಾಡಬಹುದಾದರೂ ಜೂನ್ - ಜುಲೈ ತಿಂಗಳಿನಲ್ಲಿ ನಾಟಿ ಮಾಡುವದರಿಂದ ಸಿಗಟೋಕಾ ಎಲೆಚುಕ್ಕೆ ರೋಗ ನಿಯಂತ್ರಿಸಬಹುದು.ಇದರ ಹೊರತಾಗಿಯೂ ನವೆಂಬರ್ - ಡಿಸೆಂಬರ್ ತಿಂಗಳಿನಲ್ಲೂ ಸಹ ನಾಟಿ ಮಾಡುವದರಿಂದ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ನಿರೀಕ್ಷಿಸಬಹುದು.

ಬಾಳೆಯ ತಳಿಗಳು :
ರೋಬಸ್ಟ್.ರಸಬಾಳೆ.ಪಚ್ಚಬಾಳೆ.ಪೂವನ್.ಜಿ-9.ರಾಜಾಪುರಿ.ನೇಂದ್ರನ್.ಏಲಕ್ಕಿಬಾಳೆ.ಮಧುರಂಗ.ಮುಂತಾದವು.
ನಾಟಿ ಪದ್ದತಿಗಳು :
ಬಾಳೆ ಬೆಳೆಯನ್ನು ಅಂಗಾಂಶ ಬಾಳೆ ಪದ್ದತಿ ಮತ್ತು ಕಂದುಗಳ ಪದ್ದತಿಯಲ್ಲಿ ನಾಟಿ ಮಾಡಬಹುದು.ಕಂದುಗಳಲ್ಲಿ ಎರಡು ವಿಧ ಒಂದು ಕತ್ತಿ ಕಂದು.ಮತ್ತೊಂದು ನೀರುಕಂದು.ಕಂದುಗಳ ನಾಟಿಯಾದರೆ ಉತ್ತಮ ಗುಣಮಟ್ಟದ ಆರೋಗ್ಯವಂತ ಗಿಡಗಳಿಂದ ಕತ್ತಿ ಕಂದುಗಳನ್ನೆ ಬಳಸುವದು ಸೂಕ್ತ.ನೀರು ಕಂದುಗಳಾದರೆ ಬೆಳೆ ಸ್ಚಲ್ಪ ತಡವಾಗಿ ಬರುವದಲ್ಲದೆ ಉತ್ತಮ ದರ್ಜೆಯ ಗೊನೆಗಳು ಬರುವದಿಲ್ಲ.

ಬಾಳೆ ನಾಟಿಯ ಅಂತರ : 
1: ಪಚ್ಚಬಾಳೆ 1.8 ಮೀ * 1.8 ಮೀ.ಅಂತರದಲ್ಲಿ ಹೆಕ್ಟೆರ್ ಗೆ 3080 ಗುಣಿಗಳು.
2: ರೋಬಾಸ್ಟ್ 1.5 ಮೀ * 1.5 ಮೀ ಅಂತರದಲ್ಲಿ ಹೆಕ್ಟೆರ್ ಗೆ 4440 ಗುಣಿಗಳು.ಮತ್ತು 2.2 ಮೀ * 1.8  ಮೀ ಅಂತರದಲ್ಲಿ ಹೆಕ್ಟೆರ್ ಗೆ 2200 ಗುಣಿಗಳು.
3: ಇತರ ತಳಿಗಳು 2.1 ಮೀ * 2.1 ಮೀ ಅಂತರದಲ್ಲಿ ಹೆಕ್ಟೆರ್ ಗೆ 2250 ಗುಣಿಗಳು.

ಬಾಳೆ ನಾಟಿ ವಿಧಾನ :
ಚೆನ್ನಾಗಿ ಆಳವಾಗಿ ಉಳುಮೆ ಮಾಡಿ ಸಿದ್ದಪಡಿಸಿಕೊಂಡ ಭೂಮಿಯಲ್ಲಿ ಮೇಲೆ ತಿಳಿಸಿದ ಅಂತರಗಳಲ್ಲಿ 45 *45 *45 ಸೆಂ.ಮೀ ಅಳತೆಯ  ಸಿದ್ದಪಡಿಸಿಕೊಂಡ ಗುಣಿಗಳಿಗೆ ಪ್ರತಿ ಹೆಕ್ಟೆರ್ ಗೆ 40 ಟನ್ ಕೊಟ್ಟಿಗೆ ಗೊಬ್ಬರವನ್ನು ಪ್ರತಿ ಗುಣಿಗು ಸಮನಾಗಿ ಹಾಕಿ ಜೊತೆಗೆ ಕಾಂಪೋಸ್ಟ್.ಬೇವಿನ ಹಿಂಡಿ ಬಳಸಿದರೆ ಉತ್ತಮ ನಂತರ ಮೇಲ್ಮಣ್ಣು ಬೆರೆಸಿ ಗುಣಿಗಳನ್ನ ಸಿದ್ದಪಡಿಸಿಕೊಂಡು ನಾಟಿಗೆ ಅಂಗಾಂಶ ಸಸಿ ಹಾಗೂ ಕಂದುಗಳು ಯಾವುದಾದರೂ ಬಳಸಬಹುದು ಕಂದುಗಳನ್ನು ಬಳಸುವದಾದರೆ ಬಂಚೀಟಾಪ್.ನಂಜುರೋಗ ಮುಕ್ತ ತಾಯಿ ಗಿಡದಿಂದ ಆರಿಸಿದ ಗೆಡ್ಡೆಗಳನ್ನೆ ಬಳಸಿ ಆ ಗೆಡ್ಡೆಯ ಮೇಲ್ಬಾಗವನ್ನು ಸವರಿ ಮಣ್ಣು/ಸೆಗಣಿ ರಾಡಿಯಲ್ಲಿ ಅದ್ದಿ ತೆಗೆದು ಅವುಗಳ ಮೇಲೆ 40 ಗ್ರಾಂ.ಶೇ. 3ರ ಕಾರ್ಬೊಪ್ಯೂರಾನ್ ಹರಳು ಉದುರಿಸಿ ಗೆಡ್ಡೆಗಳನ್ನ ನೆರಳಿನಲ್ಲಿ ಒಣಗಿಸಿ ನಾಟಿ ಮಾಡುವದರಿಂದ ಸಸ್ಯಗಳ ಜಂತು ನಿರ್ವಹಣೆ ಮಾಡಬಹುದು.ನಾಟಿ ಮಾಡಿದ ನಂತರ ನೀರನ್ನು ಒದಗಿಸಿ.ನಾಟಿ ಮಾಡಿದ ಸಸ್ಯಗಳಿಂದ ಬಲಿತ ದೊಡ್ಡ ಗಿಡಗಳ ವರೆಗೆ ವಿವಿದ ಹಂತದಲ್ಲಿ ಮಣ್ಣು ಮತ್ತು ಸ್ಥಳಿಯ ಹವಾಗುಣಕ್ಕೆ ಅನುಗುಣವಾಗಿ ಪ್ರತಿ ಗುಣಿಗು 4 ಲೀ ನಿಂದ ಶುರುವಾಗಿ ಕೊನೆಯ ಹಂತದಲ್ಲಿ 25 ಲೀ ನೀರನ್ನು ಪ್ರತಿ ಗುಣಿಗು ಪ್ರತಿ ದಿನ ಒದಗಿಸಿ.

ಬಾಳೆ ನಾಟಿ ನಂತರದ ನಿರ್ವಹಣೆ :
ನಾಟಿ ಮಾಡಿದ ನಂತರ
ದಿನ     -    ಸಾರಜನಕ   - ರಂಜಕ  -    ಪೊಟ್ಯಾಷ್
30      -      20 ಗ್ರಾಂ    - 20 ಗ್ರಾಂ -    25ಗ್ರಾಂ
70      -      40           -  20        -    55
105    -      45            -  20        -    55
140    -      45            -  20        -    55
175    -      45            -  20        -    55
ಹೂ ಬಿಡುವ ಸಮಯ ಕೊನೆಯದಾಗಿ 
           -      45            -  20        -    55
ಈ ಪ್ರಮಾಣದ ಗೊಬ್ಬರಗಳನ್ನ ಮೇಲೆ ತಿಳಿಸಿರುವ ದಿನಗಳಲ್ಲಿ ಪ್ರತಿ ಗುಣಿಗಳಿಗೂ ಕೊಡುವದು ಸೂಕ್ತ.
ಮಣ್ಣಿನ ಗುಣಧರ್ಮದ ಆದಾರದ ಮೇಲೆ ಗೊಬ್ಬರಗಳ ಪ್ರಮಾಣವನ್ನು ಹೊಂದಿಸಿಕೊಳ್ಳಬಹುದು.
ತಾಯಿ ಗಿಡ ಹೂ ಬಿಡುವ ತನಕ ಪಕ್ಕದಲ್ಲಿ ಬರುವ ಎಲ್ಲಾ ಕಂದುಗಳನ್ನು ತೆಗೆದು ಹೂ ಬಿಟ್ಟ ನಂತರ ಮುಂದಿನ ಬೆಳೆಗಾಗಿ ಒಂದು ಕಂದನ್ನು ಮಾತ್ರ ಉಳಿಸಿಕೊಳ್ಳುವದರಿಂದ ಸಿಗಾಟೋಕಾ ಎಲೆ ಚುಕ್ಕೆ ರೋಗ ನಿಯಂತ್ರಣ ಮಾಡಬಹುದು.ಅಂತರಿಕ ಕಳೆ ನಿರ್ಮೂಲನೆಗಾಗಿ ಅಲಸಂದೆಯನ್ನು ಬಾಳೆಯ ಅಂತರದಲ್ಲಿ ಬಿತ್ತಿದ 45 ದಿನದ ನಂತರ ಮಣ್ಣಿಗೆ ಬೆರೆಸುವದರಿಂದ ಮಣ್ಣಿನಲ್ಲಿ ಸಾವಯವ ಪೋಷಕಾಂಶಗಳು ಬಾಳೆಗೆ ದೊರೆಯುವಂತೆ ಮಾಡುವದರ ಜೊತೆಗೆ ಕಳೆ ನಿರ್ಮೂಲನೆಯನ್ನು ಮಾಡಬಹುದು.

ಬಾಳೆ ಗೊನೆಗಳು ಬಲಿಷ್ಠವಾಗುವ ಹಂತದಲ್ಲಿ ಗೊನೆಗಳ ಬಾರಕ್ಕೆ ಆಸರೆಯಾಗಿ ಕೋಲುಗಳನ್ನು ಒದಗಿಸಿ ಕಟ್ಟಬೇಕು.ಬಾಳೆ ತೋಟದ ಸುತ್ತ ಗಾಳಿ ತಡೆಗಾಗಿ ಎರಡು ಸಾಲು ಚೊಗಚೆ.ನುಗ್ಗೆ.ಮುಂತಾದ ಬೆಳೆಗಳನ್ನು ಮಾಡುವದು ಸೂಕ್ತ.
ಗೊನೆಯ ಕೊನೆಯ ಕಯ್ಯಿ ಹೊರ ಬಂದಾಗ ಹೂವನ್ನು ಮುರಿಯುವದರ ಜೊತೆಗೆ 2.4 - ಡಿ 30 ಪಿ.ಪಿ.ಎಂ ಅನ್ನು 30 ಮಿ.ಗ್ರಾಂ ಪ್ರತಿ ಲೀ ನೀರಿಗೆ ಬೆರೆಸಿ ಪ್ರತಿ ಗೊನೆಗು 250 ಮಿ.ಲೀ.ಯಂತೆ ಸಿಂಪಡಿಸುವದರಿಂದ ಹಣ್ಣುಗಳ ಗಾತ್ರ ಮತ್ತು ತೂಕ ಹೆಚ್ಚಿಸಬಹುದು.

ಬಾಳೆ ಬೆಳೆಗೆ ತಗುಲುವ ರೋಗಗಳು :
ಎಲೆಸುರುಳಿ ರೋಗ.ಕಾಂಡಕೊರಕ ಹುಳು.ಸಸ್ಯ ಹೇನು.ಗೆಡ್ಡೆಕೊರಕ ಹುಳು.ಎಲೆಚುಕ್ಕೆ ರೋಗ.ಪನಾಮ ಸೊರಗು.ಬಂಚಿಟಾಪ್.ಮೊಸಾಯಿಕ್ ನಂಜುರೋಗ.ನೆಮಟೋಡ್ ಸಸ್ಯಜಂತು ರೋಗ.ಫ್ರೆಕಲ್ ಎಲೆಚುಕ್ಕೆ.ತುದಿಕೊಳೆ.ಚಿಬ್ಬುರೋಗ.ಇಂತಹ ಸಾಮಾನ್ಯ ರೋಗ ಲಕ್ಷಣಗಳು ಕಂಡುಬಂದಾಗ ತಙ್ನರ ಸಲಹೆ ಮೇರೆಗೆ ಕಾಲ ಕಾಲಕ್ಕೆ ತಗಲುವ ರೋಗ ಹತೋಟಿ ಮಾಡುವದರಿಂದ ಉತ್ತಮ ಇಳುವರಿ ಸಾದ್ಯ.

ಬಾಳೆ ಕೊಯ್ಲು ಮತ್ತು ಇಳುವರಿ :
ತಳಿಗಳಿಗೆ ಅನುಗುಣವಾಗಿ ನಾಟಿ ಮಾಡಿದ 12 - ರಿಂದ 14 ತಿಂಗಳಿಗೆ ಮೊದಲ ಕೊಯ್ಲು ಬಂದರೆ ಎರಡನೆ ಕೊಯ್ಲು 6 ರಿಂದ 8 ತಿಂಗಳಲ್ಲಿ ಬರುತ್ತದೆ.ಹಾಗೂ ತಳಿಗಳಿಗೆ ಅನುಗುಣವಾಗಿ ಪ್ರತಿ ಹೆಕ್ಟೆರ್ ಗೆ 20 ರಿಂದ 45 ಟನ್ ವರೆಗು ಇಳುವರಿ ಬರುತ್ತದೆ.


ಬಾಳೆ ಕ್ರುಷಿ

ಬಾಳೆ ಒಂದು ಬಹುಜನಪ್ರಿಯ ಹಣ್ಣಿನ ಬೆಳೆ ಮಾವಿನಹಣ್ಣಿನ ನಂತರದ ಸ್ಥಾನ ಬಾಳೆ ಹಣ್ಣಿಗೆ ಲಭಿಸುತ್ತದೆ.ಭಾರತದಲ್ಲಿ 50 ಕ್ಕೂ ಹೆಚ್ಚು ತಳಿಗಳಿದ್ದು ಅವು ವಿವಿಧ ಭಾಗದಲ್ಲಿ ಬೆಳೆ...