expr:class='"loading" + data:blog.mobileClass'>
ಪುಷ್ಪ ಕ್ರುಷಿ. ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಪುಷ್ಪ ಕ್ರುಷಿ. ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮಂಗಳವಾರ, ಜುಲೈ 6, 2021

ಗ್ಲಾಡಿಯೋಲಸ್ ಪುಷ್ಪ ಕ್ರುಷಿ.

ಗ್ಲಾಡಿಯೋಲಸ್ ಒಂದು ಅಲಂಕಾರಿಕ ಪುಷ್ಪ.ಮೂಲ ಇದು ಕಾಡು ಪುಷ್ಪವಾದರೂ ತಳಿ ಸಂವರ್ಧನೆಯ ನಂತರ ಇದನ್ನು ಕ್ರುಷಿ ಮಾಡಲಾಗುತ್ತಿದೆ.ಇದರ ಮೂಲ  ಇಂಡೋನೇಷಿಯಾದ ಕಾಡುಗಳು.ಇದರಲ್ಲಿ 260 ಕ್ಕೂ ಹೆಚ್ಚು ಪ್ರಭೇದಗಳು ಕಂಡು ಬಂದಿವೆ.ಇದೊಂದು ಅಲಂಕಾರಿಕ ಪುಷ್ಪ.ಸಭೆ.ಸಮಾರಂಭ.ವೇದಿಕೆ ಅಲಂಕಾರ.ಹೂ ಕುಂಡ.ಪುಷ್ಪಗುಚ್ಚ.ತೋಟಗಾರಿಕೆಯಲ್ಲಿ ಹೆಚ್ಚು ಬಳಸಲಾಗುತ್ತದೆ.

ಮಣ್ಣು ಮತ್ತು ಹವಾಗುಣ :
ಗ್ಲಾಡಿಯೋಲಸ್ ಬೆಳೆಗೆ ಮಣ್ಣಿನ ರಸಸಾರ 6 -7 ಇರುವದು ಸೂಕ್ತ.ಫಲವತ್ತಾದ ಕಪ್ಪು ಮತ್ತು ಕೆಂಪು ಗೋಡು ಮಣ್ಣು ಸೂಕ್ತ.ತೆಗ್ಗು ಮತ್ತು ನೀರು ನಿಲ್ಲುವ ಜಾಗ ಸೂಕ್ತವಲ್ಲ.ತಂಪಾದ ವಾತಾವರಣದಲ್ಲಿ ಸಾಧಾರಣ ಬಿಸಿಲು ಈ ಬೆಳೆಗೆ ಸೂಕ್ತ .ಅತಿ ಹೆಚ್ಚು ತಾಪಮಾನ ಈ ಬೆಳೆಗೆ ಹೊಂದುವದಿಲ್ಲ.ಈ ಬೆಳೆಯನ್ನು ಎಲ್ಲಾ ಕಾಲಮಾನದಲ್ಲಿ ಬೆಳೆಯಬಹುದಾದರು ಜೂನ್ ನಿಂದ ನವೆಂಬರ್ ವರೆಗಿನ ಕಾಲ ತುಂಬ ಸೂಕ್ತ.
ಗ್ಲಾಡಿಯೋಲಸ್ ತಳಿಗಳು :
ಗ್ಲಾಡಿಯೋಲಸ್ ಹೂವುಗಳಲ್ಲಿ ಅವುಗಳ ಗಾತ್ರ.ಬಣ್ಣ.ಆಕಾರಕ್ಕೆ ಹೊಂದುವಂತೆ ಬಹಳ ತಳಿಗಳಿವೆ ಆವುಗಳಲ್ಲಿ ಪ್ರಮುಖವಾದವು.
ವೆಡ್ಡಿಂಗ್ ಬೂಕೆ.ಅರ್ಕಾ ಗೋಲ್ಢ್.ಫ್ರೆಂಡ್ ಶಿಪ್.ಅರ್ಕಾ ನವೀನ್.ಅಮೇರಿಕನ್ ಬ್ಯೂಟಿ.ಅರ್ಕಾ ಆಯುಷ್.ಅರ್ಕಾ ಅಮರ.ಕ್ಯಾಂಡಿಮನ್.ಅರ್ಕಾ ಬಿಳಿ.ಅರ್ಕಾ ಫೆಸಿಫಿಕ್.ಅರ್ಕಾ ಧರ್ಶನ್.ಕಾಪರ್ ಕಿಂಗ್.ತ್ರಿಲೋಕ.ಮಯೂರ.ಅರ್ಜುನ.ಅರ್ಕಾ ಪೂನಮ್.ಮೆಲೋಡಿ.ಇನ್ನು ಹಲವಾರು.
ಗ್ಲಾಡಿಯೋಲಸ್ ಬೇಸಾಯ ಕ್ರಮ :
ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಿ 30 ಸೆಂ.ಮೀ ಅಂತರದ ಸಾಲುಗಳು ಮಾಡಿ ಹೆಕ್ಟೇರಿಗೆ 25 ಟನ್ ಕೊಟ್ಟಿಗೆ ಗೊಬ್ಬರ.ಸಾರಜನಕ 50 ಕಿ.ಗ್ರಾಂ.ರಂಜಕ 70 ಕಿ.ಗ್ರಾಂ.ಪೊಟ್ಯಾಶ್ 70 ಕಿ.ಗ್ರಾಂ ಮಿಶ್ರಣದ ಗೊಬ್ಬರವನ್ನು ಸಾಲುಗಳಲ್ಲಿ ಚೆಲ್ಲಿ ಮಣ್ಣಿನಲ್ಲಿ ಬೆರೆಸ ಬೇಕು.ಗಡ್ಡೆಗಳನ್ನು ಪ್ರತಿ ಸಾಲಿನ ಬದುವಿನ ಮೇಲೆ 20 ಸೆಂ.ಮೀ ಅಂತರದಲ್ಲಿ.4 ರಿಂದ 5 ಸೆಂ.ಮೀ ಆಳದಲ್ಲಿ ಊರಬೇಕು.ನಂತರ ಮಣ್ಣಿನ ಹವಾಗುಣಕ್ಕನುಗುಣವಾಗಿ ಪ್ರತಿ 4 -5 ದಿನಕ್ಕೊಮ್ಮೆ ನೀರು ಹಾಯಿಸ ಬೇಕು.ಅಂತರ ಬೇಸಾಯ ಮತ್ತು ಕಳೆ ನಿರ್ವಹಣೆ ನಂತರ ನಾಟಿ ಮಾಡಿದ 35 ನೇ ದಿನಕ್ಕೆ ಪ್ರತಿ ಹೆಕ್ಟೇರ್ ಗೆ 50 ಕಿ.ಗ್ರಾಂ ಸಾರಜನಕವನ್ನು ಕೊಟ್ಟು ಸಸಿಗಳ ಬುಡಕ್ಕೆ ಮಣ್ಣು ಏರಿಸಿ ಕೊಡಬೇಕು.ನಂತರ ಸಸಿಗಳಿಗೆ ಆಸರೆಯಾಗಿ ಕೋಲುಗಳನ್ನು ಕೊಟ್ಟು ಕಟ್ಟಬೇಕು.
                 https://www.facebook.com/share/nKaUeLo1k6XSuYZF/?mibextid=oFDknk
ಗ್ಲಾಡಿಯೋಲಸ್ ಬೆಳೆಗೆ ತಗಲುವ ರೋಗಗಳು :
ಸೊರಗು ರೋಗ.ನುಶಿ.ಕಂದು ಕೊಳೆರೋಗ.ಎಲೆ ತಿನ್ನುವ ಹುಳು.ಬೂದಿ ರೋಗ.ಮುಂತಾದವು.ರೋಗ ಲಕ್ಷಣಗಳು ಕಂಡು ಬಂದಾಗ ತಙ್ನರ ಸಲಹೆ ಮೇರೆಗೆ ರೋಗ ಹತೋಟಿ ಮಾಡುವದರಿಂದ ಉತ್ತಮ ಗುಣಮಟ್ಟದ ಹೂವುಗಳನ್ನು ಪಡೆಯಬಹುದು. 

ಕೊಯ್ಲು.ಇಳುವರಿ.ಮತ್ತು ಸಂಗ್ರಹಣೆ :
ನಾಟಿ ಮಾಡಿದ 70 ರಿಂದ 90 ದಿನಗಳಿಗೆ ಹೂ ಕೊಯ್ಲಿಗೆ ಸಿದ್ದವಾಗುತ್ತದೆ.ಒಂದು ಹೆಕ್ಟೇರ್ ಗೆ 2 ರಿಂದ 2½ ಲಕ್ಷ ಹೂವಿನ ದಂಟುಗಳು ಪಡೆಯಬಹುದು.ಜೊತೆಗೆ ಮುಂದಿನ ಬೆಳೆಗೆ  ಬೇಕಾದಂತಹ ಗಡ್ಡೆಗಳನ್ನು 2 ರಿಂದ 5 ಲಕ್ಷ ಗಡ್ಡೆ ಪಡೆಯಬಹುದು.ಹೂ ದಂಟಿನ ಉದ್ದ.ತೆನೆಯಲ್ಲಿಯ ಹೂಗಳ ಸಂಖ್ಯೆ ಆದಾರದಲ್ಲಿ ವಿಂಗಡಿಸಿ ಚಿಕ್ಕ ಚಿಕ್ಕ ಕಟ್ಟುಗಳನ್ನು ಮಾಡಿ ಸುಕ್ರೋಸ್ ಶೇ.15 ಮತ್ತು ಹೆಡ್ರಾಕ್ಸಿಕ್ವಿನೋಲಿನ್ ದ್ರಾವಣದಲ್ಲಿ ಕೊಠಡಿಯ ಶೀತ 1.7 ಡಿ.ಸೆ ಇಂದ 4.4 ಡಿ.ಸೆ ಅಲ್ಲಿ ಸಂಗ್ರಹಿಸಿ ನಂತರ ಮಾರುಕಟ್ಟೆ ಮಾಡಬಹುದು.

ಶುಕ್ರವಾರ, ಜುಲೈ 2, 2021

ಸೇವಂತಿಗೆ ಹೂ ಬೆಳೆ ಮಾಹಿತಿ.


ಸೇವಂತಿಗೆ ಆಸ್ಟರೇಸಿಯಾ ಕುಟುಂಬದ ಕ್ರಿಸ್ಯಾಂಥಮಮ್ ಜಾತಿಯ  ಹೂವಿನ ಸಸ್ಯ. ಅವು ಏಷ್ಯಾ  ಮತ್ತು ಈಶಾನ್ಯ  ಯುರೋಪ್ ನ ಸ್ಥಳಿಯ ಸಸ್ಯ.ಮಾನವ ಕ್ರುಷಿ ಮಾಡಿದ ಮೊದಲ ಹೂ ಬೆಳೆ ಎಂದೇ ಖ್ಯಾತಿ ಪಡೆದ ಸೇವಂತಿಗೆ ಹೂ ಒಂದು ಪ್ರಮುಖ ವಾಣಿಜ್ಯ ಪುಷ್ಪ ಬೆಳೆ.ಈ ಹೂವನ್ನು ಮಾಲೆ.ಬಿಡಿ ಹೂ.ಅಲಂಕಾರಿಕ ವಸ್ತುವಾಗಿ ಪುಷ್ಪ ಗುಚ್ಚ ಮಾಡಲು.ವೇದಿಕೆ ಅಲಂಕಾರಕ್ಕೆ.ಧಾರ್ಮಿಕ ಕಾರ್ಯ.ಪೂಜೆ ಪುನಸ್ಕಾರಗಳಲ್ಲಿ ಹೇರಳವಾಗಿ ಬಳಸುತ್ತಾರೆ.
ಮಣ್ಣು ಮತ್ತು ಹವಾಗುಣ :ಭೂಮಿಯ ರಸಸಾರ 6 ರಿಂದ 7 ಇರುವ ಮರಳು ಮಣ್ಣು.ಮರಳು ಮಿಶ್ರಿತ ಗೋಡು ಮಣ್ಣು.ಚೆನ್ನಾಗಿ ನೀರು ಬಸಿದು ಹೋಗುವ ಮಣ್ಣು ಸೂಕ್ತ.ನೀರು ನಿಲ್ಲುವ ಜಾಗ ಈ ಬೆಳೆಗೆ ಯೋಗ್ಯವಲ್ಲ.ಈ ಬೆಳೆಗೆ ಗಿಡಗಳ ಬೆಳವಣಿಗೆಗೆ ಹಗಲು ದೊಡ್ಡದಿರುವ ಹಾಗು ಹೂ ಬಿಡಲು ರಾತ್ರಿ ದೊಡ್ಡದಿರುವ ಕಾಲ ಸೂಕ್ತ ಅಂದರೆ ಈ ಬೆಳೆಯನ್ನು ಮೇ - ಜೂನ್  ನಡುವೆ ಮಾಡುವದು ಸೂಕ್ತ.
ಸೇವಂತಿಗೆ ತಳಿಗಳು :
ಹಳದಿ .ಬಿಳಿ.ಕೆಂಪು.ಬಣ್ಣದ ತಳಿಗಳು ವಾಣಿಜ್ಯ ಮಟ್ಟದ ಕ್ರುಷಿಗೆ ಸೂಕ್ತ.ಆದರೂ ಇತ್ತೀಚೆಗೆ ಇತರೆ ಬಣ್ಣದ ತಳಿಗಳು ಹೆಚ್ಚು ಜನಪ್ರಿಯವಾಗುತ್ತಿವೆ.
ಹಳದಿ ತಳಿಗಳು : 
ಆರ್ಕಾ ಸ್ವರ್ಣ.ಎಲ್ಲೊ ಗೋಲ್ಢ್.ವಾಸಂತಿಕ.ಕರ್ನೂಲ್.ಜಯಂತಿ.ಇಂದಿರಾ.ಬಸಂತಿ.ಕಸ್ತೂರಿ.ಉಷಾಕಿರಣ.ರಾಣಿ.ಸಾರವಾಳ.ದುಂಡಿ.ಮುಂತಾದವು.

ಕೆಂಪು ತಳಿಗಳು :
ರವಿಕಿರಣ.ರೆಡ್ ಗೋಲ್ಢ್.ಮುಂತಾದವು.

ಬಿಳಿ ತಳಿಗಳು :
ಹಿಮಾನಿ.ರೀಟಾ.ಕೀರ್ತಿ.ಚಂದ್ರಿಕಾ.ರಾಜ.ಜೋತ್ಸ್ನ್.ಮೀರಾ. ಮುಂತಾದವು.
ಸೇವಂತಿಗೆ ಸಸ್ಯಾಭಿವ್ರುದ್ದಿ :
  • ಕಂದುಗಳು ಹಾಗು ಮ್ರುದುಕಾಂಡದ ತುಂಡುಗಳು ನಾಟಿಗೆ ಉಪಯೋಗಿಸುವದು ಉತ್ತಮ.ಕಡ್ಡಿಯ ತುಂಡುಗಳು ಬಳಸುವ ಮೊದಲು ಮೀಥಾಕ್ಸಿ ಈಥ್ಯೆಲ್ ಕ್ಲೋರೆಡ್ 2 ಗ್ರಾಂ  ಪ್ರತಿ ಲೀ ನೀರಿಗೆ ಬೆರೆಸಿ ನಾಟಿ ಮಾಡುವ ಕಡ್ಡಿಗಳ ತಳಬಾಗವನ್ನು ಅದರಲ್ಲಿ ಅದ್ದಿ ನಾಟಿಗೆ ಬಳಸುವದರಿಂದ ಸಸ್ಯಗಳ ಬೇರು ಬೆಳವಣಿಗೆಗೆ ಪ್ರಚೊದನೆಯಾಗುತ್ತದೆ
  • ಗ್ಲಾಡಿಯೋಲಸ್ ಪುಷ್ಪ ಕ್ರುಷಿ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಸೇವಂತಿಗೆ ನಾಟಿ ಪದ್ದತಿ :
ಮಣ್ಣನ್ನು ಚೆನ್ನಾಗಿ ಉಳುಮೆ ಮಾಡಿ 30 ಸೆಂ.ಮೀ ಅಂತರದ ಸಾಲುಗಳನ್ನು ಮಾಡಿ ಹೆಕ್ಟೆರ್ ಗೆ 25 ಟನ್ ಕೊಟ್ಟಿಗೆ ಗೊಬ್ಬರವನ್ನು ಸಾಲುಗಳಲ್ಲಿ ಚೆಲ್ಲಿ.ನಂತರ ಪ್ರತಿ ಹೆಕ್ಟೇರಿಗೆ ಸಾರಜನಕ 33 ಕಿ.ಗ್ರಾಂ.ರಂಜಕ 150 ಕಿ.ಗ್ರಾಂ.ಪೊಟ್ಯಾಶ್ 100 ಕಿ.ಗ್ರಾಂ ಮಿಶ್ರಣದ ಗೊಬ್ಬರವನ್ನು ಸಾಲುಗಳಲ್ಲಿ ಬಿತ್ತಿ ಮಣ್ಣಲ್ಲಿ ಬೆರೆಸಿ ನೀರು ಹಾಯಿಸಿ.ನಂತರ ಸಾಲುಗಳ ಒಂದು ಬದುವಿನ ಮೇಲೆ 30 ಸೆಂ.ಮೀ ಅಂತರದಲ್ಲಿ ಸಸಿಗಳನ್ನು ನಾಟಿ ಮಾಡಿ.
ಕಳೆ ಮತ್ತು ನೀರು ನಿರ್ವಹಣೆ :
ಮಣ್ಣು ಮತ್ತು ಸ್ಥಳಿಯ ಹವಾಗುಣಕ್ಕೆ ಅನುಗುಣವಾಗಿ ಪ್ರತಿ 4 -ರಿಂದ 5 ದಿನಕ್ಕೊಮ್ಮೆ ನೀರು ಬಿಡಬೇಕು.ನಂತರ ಅಂತರ ಬೇಸಾಯದಿಂದ ಕಳೆ ನಿರ್ವಹಣೆ ಮಾಡಿ.ಮೇಲುಗೊಬ್ಬರವಾಗಿ ನಾಟಿ ಮಾಡಿದ 30 ದಿನಕ್ಕೆ ಹೆಕ್ಟೇರಿಗೆ 45 ಕಿ.ಗ್ರಾಂ ಸಾರಜನಕವನ್ನು ನೀಡಬೇಕು.ಇದಾದ ಮತ್ತೊಂದು ತಿಂಗಳ ನಂತರ ಮತ್ತೊಮ್ಮೆ 45 ಕಿ.ಗ್ರಾಂ ಸಾರಜನಕ ನೀಡಬೇಕು.ನಾಟಿ ಮಾಡಿದ 30 ದಿನದ ನಂತರ ಸಸಿಗಳ ಕುಡಿ ಚಿವುಟಿ ಜಿಬ್ಬರ್ಲಿಕ್ ಓಷದವನ್ನು ಪ್ರತಿ 10 ಲೀ ನೀರಿಗೆ 1 ಗ್ರಾಂ ನಂತೆ ಬೆರೆಸಿ ಸಿಂಪಡಿಸುವದರಿಂದ ಸಸಿಗಳು ಹೆಚ್ಚು ಕವಲೊಡೆದು ಹೆಚ್ಚು ಹೂ ಬಿಡುವದಕ್ಕೆ ಸಹಕಾರಿಯಾಗುತ್ತದೆ.
ಸೇವಂತಿಗೆ ಬೆಳೆಗೆ ತಗುಲುವ ರೋಗಗಳು :
ಸಸಿ ಹೇನು.ಥ್ರಿಪ್ಸ್.ಮೊಗ್ಗು ಕೊರೆಯುವ ಹುಳು.ತುಕ್ಕು ರೋಗ.ಬೂದಿರೋಗ.ಬೇರುಕೊಳೆ ರೋಗ.ಹಳದಿ ನಂಜು.ಎಲೆ ಚುಕ್ಕೆ ರೋಗಗಳು ಕಂಡುಬಂದ ಸಂದರ್ಭದಲ್ಲಿ ತಙ್ನರ ಸಲಹೆ ಮೇರೆಗೆ ಅವುಗಳನ್ನು ನಿಯಂತ್ರಿಸುವದರಿಂದ ಹೆಚ್ಚಿನ ಇಳುವರಿ ಪಡೆಯ ಬಹುದು.
ಕೊಯ್ಲು ಮತ್ತು ಇಳುವರಿ :
ನಾಟಿ ಮಾಡಿದ 90 ದಿನಗಳಿಂದ ಹೂ ಬರಲು ಶುರುವಾಗಿ ಮುಂದೆ 45 ರಿಂದ 55 ದಿನದವರೆಗು ಹೂ ಕೊಡುತ್ತವೆ.ಪ್ರತಿ ಹೆಕ್ಟೆರ್ ಗೆ 10 ರಿಂದ 15 ಟನ್ ಇಳುವರಿ ಪಡೆಯಬಹುದು.

ಬುಧವಾರ, ಜೂನ್ 30, 2021

ಮಲ್ಲಿಗೆ ಹೂವಿನ ಕ್ರುಷಿ.

ಮಲ್ಲಿಗೆಯು 'ಒಲಿಯೇಸಿ" ಕುಟುಂಬದ ಜಾಸ್ಮಿನಂ ಉಪವರ್ಗಕ್ಕೆ ಸೇರಿದ ಬಳ್ಳಿ ಇಲ್ಲ ಪೊದೆ ಜಾತಿಗೆ ಸೇರಿದ ಸಸ್ಯ ನಮ್ಮ ದೇಶದಲ್ಲಿ 40 ಕ್ಕು ಹೆಚ್ಚು ಪ್ರಬೇದಗಳಿದ್ದರು ವಾಣಿಜ್ಯಿಕ ದ್ರುಷ್ಟಿಯಿಂದ ನಾಲ್ಕು ತಳಿಗಳು ಮಾತ್ರ ಮುಖ್ಯವಾದವು.ಹೂವುಗಳನ್ನ ಮುಡಿಯಲು.ಧಾರ್ಮಿಕ ಆಚರಣೆಗಳಿಗೆ.ಸಬಾಂಗಣ ಅಲಂಕಾರಕ್ಕೆ.ಜೊತೆಗೆ ಸುಗಂಧ ದ್ರವ್ಯ ತಯಾರಿಕೆಗೆ ಬಳಸಬಹುದು.
ಹವಾಗುಣ.ಮಣ್ಣು.ನಾಟಿಯ ಕಾಲ : 
ಮಲ್ಲಿಗೆ ಕ್ರುಷಿಗೆ ಶುಷ್ಕ ಆರ್ದ್ರತೆ ಇಂದ ಕೂಡಿದ ಚೆನ್ನಾಗಿ ನೀರು ಬಸಿದು ಹೋಗುವ ಮಣ್ಣಿನ ರಸಸಾರ 5.5 ರಿಂದ 6.5 ಇರುವ ಮರಳು ಮಿಶ್ರಿತ ಗೋಡು ಮಣ್ಣು ಸೂಕ್ತ.ಜೂನ್ - ಜುಲೈ ಮತ್ತು ಸೆಪ್ಟೆಂಬರ್ - ಅಕ್ಟೋಬರ್ ನಾಟಿಗೆ ಸೂಕ್ತ ಕಾಲ.
ತಳಿಗಳು :
ಆರ್ಕಾ ಸುರಭಿ.ಕಾಕಡಾ ಮಲ್ಲಿಗೆ.ಜಾಜಿ ಮಲ್ಲಿಗೆ.ದುಂಡು ಮಲ್ಲಿಗೆ.ಉಡುಪಿ ಮಲ್ಲಿಗೆ.ವಸಂತ ಮಲ್ಲಿಗೆ.ಮತ್ತು 'ಸಿ" 'ಓ"-1ಪಿಚ್ಚಿ.ಮುಂತಾದವು.
ನಾಟಿ ವಿಧಾನ :
ಭೂಮಿಯ ಆಳ ಉಳುಮೆಯ ನಂತರ.
ಕಾಕಡಾ ; 1.2*1.2 ಮೀ ಅಂತರ.6900 ಸಸಿ.
ದುಂಡು ಮಲ್ಲಿಗೆ ; 1.5*1.5 ಮೀ.4400 ಸಸಿ.
ಜಾಜಿ ಮಲ್ಲಿಗೆ ; 2 * 1.5 ಮೀ.3300 ಸಸಿ.
ಮೇಲ್ಕಂಡ ಅಳತೆಯಲ್ಲಿ ಗುಣಿಗಳನ್ನು ಮಾಡಿ ಅದರಲ್ಲಿ ಪ್ರತಿ ಗುಣಿಗೆ 20 ಕೆ ಜಿ ಕೊಟ್ಟಿಗೆ ಗೊಬ್ಬರ ಅಥವ 2 ರಿಂದ 5 ಕೆ ಜಿ ಎರೆಗೊಬ್ಬರದ ಜೊತೆ ಎಲೆಗೊಬ್ಬರ.ಬೇವಿನ ಹಿಂಡಿ.ಜೊತೆಗೆ ಮೇಲ್ಮಣ್ಣನ್ನು ಬೆರೆಸಿ ಎರಡು ವಾರ ಕೊಳೆಯಲು ಬಿಡಬೇಕು.ನಂತರ ಬಲಿತ ಬಳ್ಳಿ ಅಥವ ಗಿಡದಿಂದ ಸಸಿ ಮಡಿಯಲ್ಲಿ ಬೆಳೆಸಿದ ಬೇರಿನ ಕಡ್ಡಿಗಳನ್ನು ಪ್ರತಿ ಗುಣಿಯಲ್ಲು ನಾಟಿ ಮಾಡಿ ನೀರು ಬಿಡಬೇಕು.
ನಾಟಿ ಮಾಡಿದ ನಂತರ ಕಾಲ ಕಾಲಕ್ಕೊಮ್ಮೆ ಗುಣಿ ಸುತ್ತು ಮಾಡಿ ಕಳೆ ನಿರ್ಮೂಲನೆ ಮಾಡಬೇಕು.
ಗಿಡಗಳ ವಯಸ್ಸಿಗನುಗುಣವಾಗಿ ಪ್ರತಿ ಗಿಡಗಳಿಗೂ ಸಾರಜನಕ 120 ಗ್ರಾಂ.ರಂಜಕ 250 ಗ್ರಾಂ.ಪೊಟ್ಯಾಶ್ 250 ಗ್ರಾಂ ಮಿಶ್ರಣದ ಗೊಬ್ಬರವನ್ನು ನಾಲ್ಕು ಭಾಗದಲ್ಲಿ ವರ್ಷಕ್ಕೆ ನಾಲ್ಕು ಬಾರಿ ಗೊಬ್ಬರ ನೀಡಬೇಕು.
ಪ್ರೋನಿಂಗ್ ;
 ಕಾಕಡಾವನ್ನು ಮಾರ್ಚ್ - ಏಪ್ರಿಲ್ ನಡುವೆ.
ದುಂಡುಮಲ್ಲಗೆಯನ್ನು ಡಿಸೆಂಬರ್ - ಜನವರಿ ನಡುವೆ.
ಜಾಜಿ ಮಲ್ಲಗೆಯನ್ನು ಡಿಸೆಂಬರ್ - ಜನವರಿ ನಡುವೆ.
ಪ್ರೋನಿಂಗ್ ಮಾಡುವದರಿಂದ ಗಿಡಗಳ ಆಕಾರ.ಗಾತ್ರ.ರಚನೆಯನ್ನು ನಿರ್ವಹಿಸುವದರಿಂದ ಗಿಡಗಳು ಹೆಚ್ಚು ಚಿಗುರೊಡೆದು ಹೂ ಬಿಡಲು ಸಹಕಾರಿ ಆಗುತ್ತದೆ.
ರೋಗಗಳು :
ಮೊಗ್ಗು ಮತ್ತು ಕುಡಿ ಕೊರಕ.ಎಲೆ ತಿನ್ನುವ ಹುಳು.ಬಿಳಿ ನೊಣ.ಹಿಟ್ಟು ತಿಗಣೆ.ನುಸಿ.ಎಲೆ ಚುಕ್ಕೆ ರೋಗ.ಸರಗು ರೋಗ.ತುಕ್ಕು ರೋಗ.ಬೂದಿ ರೋಗ.ಬೇರು ಗಂಟು ರೋಗ.ಈ ರೋಗ ಲಕ್ಷಣ ಕಂಡು ಬಂದಲ್ಲಿ ತಙ್ನರ ಸಲಹೆ ಮೇರೆಗೆ ರೋಗ ನಿಯಂತ್ರಿಸುವದರಿಂದ ಉತ್ತಮ ಫಸಲು ದೊರಕುವದು.
ಕೊಯ್ಲು ಮತ್ತು ಇಳುವರಿ :
ನಾಟಿ ಮಾಡಿದ 6 ತಿಂಗಳ ನಂತರ ಹೂ ಬಿಡಲು ಪ್ರಾರಂಬಿಸುತ್ತವೆ.ಕಾಲ ಕಳೆದಂತೆ 3 ವರ್ಷದ ನಂತರ ಗರಿಷ್ಟ ಇಳುವರಿ ಶುರುವಾಗುತ್ತದೆ.12 ರಿಂದ 15 ವರ್ಷದ ವರೆಗೂ ಇಳುವರಿ ಪಡೆಯಬಹುದು.ಸಾಮಾನ್ಯವಾಗಿ ಹೆಕ್ಟೆರ್ ಗೆ 8 ರಿಂದ 10 ಟನ್ ಇಳುವರಿ ಪಡೆಯಬಹುದು.


ಗುಲಾಬಿ ಕ್ರುಷಿ.

ಗುಲಾಬಿ ಹೂವಿನ ಕ್ರುಷಿ ಒಂದು ಲಾಭದಾಯಕ ಹೂವಿನ ಬೆಳೆ.ಇಂದು ಗುಲಾಬಿ ಹೂವನ್ನು ಶುಭ ಸಮಾರಂಭ.ಧಾರ್ಮಿಕ ಕಾರ್ಯಕ್ರಮ.ಹಾಗೂ ಸೊಂದರ್ಯ ವರ್ದಕ ಸಾಧನಗಳಲ್ಲಿ.ಸುಗಂದ ದ್ರವ್ಯ ತಯಾರಿಕೆಯಲ್ಲಿ.ಯಥೇಚ್ಛವಾಗಿ ಬಳಸುತ್ತಾರೆ.ಇದನ್ನು ಆಹಾರ ಪಧಾರ್ಥಗಳಲ್ಲು ಬಳಸುವದುಂಟು ಪಾನಿಯಗಳು.ಪಾಕಗಳು.ಜಾಮ್ ತಯಾರಿಕೆಯಲ್ಲಿ.ಟೀ ಜೊತೆಗೂ ಸೇವಿಸ ಬಹುದು.ಇದರಲ್ಲಿ ಮನುಷ್ಯರ ದೇಹಕ್ಕೆ ಅಗತ್ಯವಿರುವ ವಿಟಮಿನ್ 'ಸಿ" ಹೇರಳವಾಗಿ ಲಭ್ಯವಿರುತ್ತದೆ.ಇದುವರೆಗು ಗುಲಾಬಿಯಲ್ಲಿ ನೂರಕ್ಕು ಅಧಿಕ ತಳಿಗಳು ಪತ್ತೆಯಾಗಿವೆ.
ಮಣ್ಣು ಮತ್ತು ಹವಾಗುಣ : 
ಗುಲಾಬಿ ಕ್ರುಷಿಗೆ ಮಣ್ಣಿನ ರಸ ಸಾರ 5.3 ರಿಂದ 5.6 ಉತ್ತಮ.ಚೆನ್ನಾಗಿ ನೀರು ಬಸಿದು ಹೋಗುವ ಮರಳು ಮಿಶ್ರಿತ ಕೆಂಪು ಗೋಡು ಮಣ್ಣು ಉತ್ತಮ.

ಗುಲಾಬಿ ನಾಟಿಯ ಕಾಲ : 
ಈ ಬೆಳೆಯು ಸಮಶೀತೋಷ್ಣ ವಲಯದಲ್ಲಿ ಚೆನ್ನಾಗಿ ಬರುವದರಿಂದ ಇದನ್ನು ಜೂನ್ ಹಾಗು ಅಕ್ಟೊಬರ್ ನಲ್ಲಿ ನಾಟಿ ಮಾಡುವದು ಉತ್ತಮ.ಅತಿಯಾದ ಬಿಸಿಲು ಈ ಬೆಳೆಗೆ ಸೂಕ್ತವಲ್ಲ.
ಗುಲಾಬಿ ತಳಿಗಳು :
ಕೆಂಪು : ಆರ್ಕಾ ಪರಿಮಳ.ಸಿಂದೂರ.ರಕ್ತಗಂದ.ಸೋಫಿಯಾ ಲಾರೆನ್ಸ.ಕ್ವಿನ್ ಎಲಿಜಬೆತ್.ಗ್ಲೆಡಿಯೆಟರ್.ಮಾಂಟೆಜುಮಾ.ಮುಂತಾದವು
ಹಳದಿ :ಪೂಸಾ ಸೋನಿಯಾ.ಗೋಲ್ಡನ್ ಟಯ್ಮ್ಸ.ಮುಂತಾದವು.
ಮಿಶ್ರಬಣ್ಣ : ಟಾಟಾ ಸೆಂಟಿನರಿ.ಡಬಲ್ ಡಿಲೆಟ್.ಅಮೆರಿಕನ್ ಹೆರಿಟೇಜ್.ಮುಂತಾದವು.
ಗುಲಾಬಿ ನಾಟಿ ವಿಧಾನ :
 ಜಮೀನನ್ನು ಚೆನ್ನಾಗಿ ಉಳುಮೆ ಮಾಡಿ ಮೊದಲು 45*45*45 (ಉದ್ದ.ಅಗಲ.ಆಳ) ಗುಣಿಗಳನ್ನ 60*60.ಅಥವ 75*75.ಅಥವ 90*90 ಸೆಂ.ಮೀ ಅಂತರದಲ್ಲಿ ಗುಣಿಗಳನ್ನ ತೆಗೆದು ಪ್ರತಿ ಗುಣಿಗೂ 2 ಕೆ ಜಿ ಕೊಟ್ಟಿಗೆ ಗೊಬ್ಬರ ಮೇಲ್ಮಣ್ಣು ಮತ್ತು ಬೇವಿನ ಹಿಂಡಿ ಅಥವ ಪ್ಯೂರೆಟ್ ಮಿಶ್ರಣ ಮಾಡಿ ಕಸಿ ಮಾಡಿದ ಗಿಡಗಳನ್ನು 5 ರಿಂದ 10 ಸೆಂ.ಮಿ.ಮೇಲ್ಮಣ್ಣಿಲ್ಲಿ ಇರುವಂತೆ ನಾಟಿ ಮಾಡಬೇಕು.ಪ್ರತಿ ಹೆಕ್ಟೆರ್ ಗೆ ಮೇಲೆ ತಿಳಿಸಿದ ಅಳತೆಗಳಿಗೆ ಅನುಗುಣವಾಗಿ 12 ಸಾವಿರದಿಂದ 25 ಸಾವಿರ ಸಸಿಗಳು ಬೇಕಾಗುತ್ತವೆ.ನಾಟಿ ಮಾಡಿದ ತಕ್ಷಣ ಸಸಿಗಳಿಗೆ ನೀರು ಕೊಟ್ಟು ಕಳೆ ನಿರ್ವಹಣೆ ಮಾಡುತ್ತಿರಬೇಕು.
ಗುಲಾಬಿಯ ಪ್ರೊನಿಂಗ್ ವಿಧಾನ : 
ಗುಲಾಬಿ ಗಿಡಗಳನ್ನು ವರ್ಷದಲ್ಲಿ ಎರಡು ಬಾರಿ ಪ್ರೋನಿಂಗ್ ಮಾಡುವದರಿಂದ ಅವು ಚೆನ್ನಾಗಿ ಹರೆ ಒಡೆಯುತ್ತವೆ ಇದರಿಂದ ಅವುಗಳ ಆಕಾರ ಮತ್ತು ಗಾತ್ರವನ್ನು ನಿಯಂತ್ರಿಸುವ ಜೊತೆಗೆ ಉತ್ತಮ ಇಳುವರಿ ಪಡೆಯಬಹುದು.ಪ್ರೋನಿಂಗ್ ಮಾಡುವ 15 ದಿನ ಮೊದಲು ನೀರನ್ನು ನಿಲ್ಲಿಸುವದು ತುಂಬಾ ಅವಶ್ಯಕ.ಮೆ-ಜೂನ್  ಮತ್ತು ಅಕ್ಟೋಬರ್ - ನವೆಂಬರ್ ಪ್ರೋನಿಂಗ್ ಮಾಡಲು ಸೂಕ್ತ ಸಮಯ.
ಪೋಶಕಾಂಶ ಮತ್ತ ನೀರಿನ ನಿರ್ವಹಣೆ :
ಪ್ರತಿ ವರ್ಷಕ್ಕೊಮ್ಮೆ ಪ್ರತಿ ಗಿಡಗಳಿಗೆ 2 ಕೆ ಜಿ ಕೊಟ್ಟಿಗೆ ಗೊಬ್ಬರದ ಜೊತೆ 10 ಗ್ರಾಂ.ಸಾರಜನಕ.10 ಗ್ರಾಂ ರಂಜಕ.15 ಗ್ರಾಂ ಪೊಟ್ಯಾಶ್ ಗೊಬ್ಬರವನ್ನು ಎರಡು ಕಂತಿನಲ್ಲಿ ಪ್ರೋನಿಂಗ್ ಮಾಡುವ ಮೊದಲು ಮತ್ತು ಪ್ರೋನಿಂಗ್ ಮಾಡಿದ 1½ ತಿಂಗಳ ನಂತರ ಕೊಡುವದು ಸೂಕ್ತ.ನೀರನ್ನು ಸ್ಥಳಿಯ ಹವಾಗುಣ ಮತ್ತು ಮಣ್ಣಿನ ಗುಣಗಳಿಗೆ ಅನುಗುಣವಾಗಿ ಪ್ರತಿ 4 ರಿಂದ 5 ದಿನಕ್ಕೊಮ್ಮೆ ನೀಡುವದು ಉತ್ತಮ.

ಗುಲಾಬಿ ಬೆಳೆಗೆ ತಗುಲುವ ರೋಗಗಳು :
ಗೆದ್ದಲು.ಥ್ರಿಪ್ಸ್.ಹೇನು.ಹೂ ತಿನ್ನುವ ಕೀಟ.ಜೇಡ.ಕಪ್ಪು ಎಲೆ ಚುಕ್ಕೆ ರೋಗ.ಬೂದಿ ರೋಗ.ಹರೆ ಒಣಗುವ ರೋಗ.ಈ ಎಲ್ಲಾ ರೋಗ ಲಕ್ಷಣಗಳು ಕಂಡು ಬಂದಾಗ ಕಾಲ ಕಾಲಕ್ಕೆ ತಙ್ನರ ಸಲಹೆ ಮೇರೆಗೆ ರೋಗ ನಿಯಂತ್ರಿಸುವದರಿಂದ ಹೆಚ್ಚಿನ ಇಳುವರಿ ಪಡೆಯಬಹುದು.
ಗುಲಾಬಿ ಕೊಯ್ಲು ಮತ್ತು ಇಳುವರಿ :
ಪ್ರೋನಿಂಗ್ ಮಾಡಿದ 50 ರಿಂದ 60 ದಿನಕ್ಕೆ ಕೊಯ್ಲು ಶುರುವಾಗುತ್ತದೆ.ಬೆಳಿಗ್ಗೆ ಅಥವ ಸಂಜೆಯ ಸಮಯದಲ್ಲಿ ಉದ್ದನೆಯ ಕಡ್ಡಿಯ ಜೊತೆ ಕೊಯ್ಲು ಮಾಡುವದು ಸೂಕ್ತ.ಉತ್ತಮ ಗುಣಮಟ್ಟದ ಹೂ ಪಡೆಯಲು ಹೆಚ್ಚಿನ ಮೊಗ್ಗು ಇದ್ದಲ್ಲಿ ಕೆಲವನ್ನು ಉಳಿಸಿ ಉಳಿದವನ್ನು ಚಿವುಟಿ ಹಾಕಬೇಕು.ಒಂದು ಹೆಕ್ಟೆರ್ ಪ್ರದೇಶದಿಂದ ಉತ್ತಮ ನಿರ್ವಹಣೆಯಲ್ಲಿ 2.5 ರಿಂದ 3.5 ಲಕ್ಷ ಹೂವುಗಳನ್ನು ಪಡೆಯಬಹುದು.

ಬಾಳೆ ಕ್ರುಷಿ

ಬಾಳೆ ಒಂದು ಬಹುಜನಪ್ರಿಯ ಹಣ್ಣಿನ ಬೆಳೆ ಮಾವಿನಹಣ್ಣಿನ ನಂತರದ ಸ್ಥಾನ ಬಾಳೆ ಹಣ್ಣಿಗೆ ಲಭಿಸುತ್ತದೆ.ಭಾರತದಲ್ಲಿ 50 ಕ್ಕೂ ಹೆಚ್ಚು ತಳಿಗಳಿದ್ದು ಅವು ವಿವಿಧ ಭಾಗದಲ್ಲಿ ಬೆಳೆ...