expr:class='"loading" + data:blog.mobileClass'>

ಗುರುವಾರ, ಜೂನ್ 24, 2021

ಈರುಳ್ಳಿ ಬೆಳೆ ಮಾಹಿತಿ.

 ಈರುಳ್ಳಿ ಒಂದು ಬಹುಮುಖ್ಯವಾದ ತರಕಾರಿ ಬೆಳೆಯಾಗಿದ್ದು ಇದು ತನ್ನ ಖಾರವಾದ ವಿಶಿಷ್ಟ ರುಚಿಯ ಗುಣದಿಂದ ಇದನ್ನು ತರಕಾರಿಯಾಗಿ ಸಾಂಬಾರು ಪಧಾರ್ಥವಾಗಿ ಹಾಗು ಕೆಲವು ಚಿಕಿತ್ಸೆಗಳಿಗೆ ಓಷದವಾಗಿಯೂ ಸಹ ಬಳಸುತ್ತಾರೆ.ಈರುಳ್ಳಿಯಲ್ಲಿ ನಮ್ಮ ದೇಹಕ್ಕೆ ಬೇಕಾದ 'ಬಿ" ಮತ್ತು 'ಸಿ" ಪೋಷಕಾಂಶಗಳು ಹೇರಳವಾಗಿ ಲಭಿಸುತ್ತದೆ.
ಮಣ್ಣು ಹಾಗು ಹವಾಗುಣ : ಈರುಳ್ಳಿ ಬೆಳೆಗೆ ಮಣ್ಣಿನ ರಸಸಾರ 6 ರಿಂದ 8 ಉತ್ತಮ.ಇದನ್ನು ವರ್ಷದ ಎಲ್ಲಾ ಕಾಲದಲ್ಲೂ ಬೆಳೆಯ ಬಹುದಾದರು ಸಹ ಉತ್ತಮ ಗೆಡ್ಡೆಗಳು ಚಳಿಗಾಲದಲ್ಲಿ ಮಾತ್ರ ದೊರೆಯುತ್ತದೆ.ಜೊಗು ಪ್ರದೇಶ ನೀರು ನಿಲ್ಲುವ ಜಾಗ ಸೂಕ್ತವಲ್ಲ.ಮರಳು ಮಿಶ್ರಿತ ಗೋಡು ಮಣ್ಣು ತುಂಬಾ ಸೂಕ್ತ.ಜೂನ್ -ಜುಲೈ . ಸೆಪ್ಟೆಂಬರ್ - ಅಕ್ಟೋಬರ್. ಜನವರಿ - ಪೆಬ್ರವರಿ.ನಾಟಿ ಮಾಡಲು ಸೂಕ್ತವಾದ ಕಾಲಗಳಾಗಿರುತ್ತದೆ.
ತಳಿಗಳು : ಆರ್ಕಾ ನಿಕೇತನ್.ಆರ್ಕಾ ಕಲ್ಯಾಣ್.ಆರ್ಕಾ ಪಿತಾಂಬರ್.ಅಗ್ರಿ ಪೊಂಡ್ ರೆಡ್.ನಾಸಿಕ್ ರೆಡ್.ಬೀಮಾ ರೆಡ್.ಬಳ್ಳಾರಿ ರೆಡ್.ತೆಲಗಿ ಬಿಳಿ.ತೆಲಗಿ ಕೆಂಪು.ಕುಮಟಾ.ರಾಂಪುರ.ಸತಾರ ಲೋಕಲ್.ಆರ್ಕಾ ಲಾಲಿಮ.ಬೆಂಗಳೂರು ಗುಲಾಬಿ.ಅಗ್ರಿ ಫೊಂಡ್ ರೋಸ್ ಇನ್ನು ಮುಂತಾದವು.
ಬೇಸಾಯ ಕ್ರಮ : ಈ ಬೆಳೆಯನ್ನ 3 ವಿಧದಲ್ಲಿ ಬಿತ್ತಬಹುದು.1.ಸಸಿ ನಾಟಿ. 2. ಗೆಡ್ಡೆ ನಾಟಿ. 3. ಕೂರಿಗೆ ಬಿತ್ತನೆ ಮತ್ತು ಚೆಲ್ಲುವದು.ಮೊದಲೆರಡನೆಯ ಪದ್ದತಿ ಇಂದ ಉತ್ತಮ ಬೆಳೆ ನಿರೀಕ್ಷಿಸಬಹುದು.
ಬೇಸಾಯ ಕ್ರಮ : ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಿ.ನಂತರ 15 ಸೆಂ.ಮೀ ಅಂತರದ ಸಾಲುಗಳು ಮಾಡಿ ನಂತರ ಹೆಕ್ಟೆರ್ ಗೆ 30 ಟನ್ ಕೊಟ್ಟಿಗೆ ಗೊಬ್ಬರ ಮತ್ತು 125 ಕಿ.ಗ್ರಾಂ ಸಾರಜನಕ.75 ಕಿ.ಗ್ರಾಂ ರಂಜಕ.125 ಕಿ.ಗ್ರಾಂ ಪೊಟ್ಯಾಶ್ ಮಿಶ್ರಣದಲ್ಲಿ 50 ಶೇ ಗೊಬ್ಬರವನ್ನು ಸಾಲಿನಲ್ಲಿ ಚೆಲ್ಲಿ ಮಣ್ಣಿನಲ್ಲಿ ಬೆರೆಸಿ ನೀರನ್ನು ಹಾಯಿಸ ಬೇಕು.ನಂತರ ಸಾಲಿನ ಒಂದು ಬದುವಿನಲ್ಲಿ 10 ಸೆಂ.ಮೀ ನಂತೆ ಸಸಿ.ಅಥವ ಗೆಡ್ಡೆಗಳನ್ನು ನಾಟಿ ಮಾಡಬೇಕು.

ನಾಟಿ ಮಾಡಿದ 2 ವಾರಗಳ ನಂತರ ಅಂತರ ಬೇಸಾಯ ಮಾಡಿ ಕಳೆ ನಿರ್ಮೂಲನೆ ಮಾಡಿ ಉಳಿದ ಶೇ 50 ಗೊಬ್ಬರವನ್ನು ಕೊಟ್ಟು ಬುಡಕ್ಕೆ ಮಣ್ಣು ಕೊಡಬೇಕು.ಈರುಳ್ಳಿಯು ಮೇಲ್ಮಟ್ಟದ ಬೇರಿನ ಬೆಳೆಯಾದ್ದರಿಂದ ಕಳೆ ನಿರ್ಮೂಲನೆ ತುಂಬಾ ಅವಶ್ಯಕ.

ನೀರುನ ನಿರ್ವಹಣೆ : ಹವಾಮಾನ ಮತ್ತು ಮಣ್ಣಿನ ಗುಣಧರ್ಮಕ್ಕೆ ಅನುಗುಣವಾಗಿ 4 ರಿಂದ 5 ದಿನಕ್ಕೊಮ್ಮೆ ನೀರು ಕೊಡಬೇಕು.ಕೊಯ್ಲು ಮಾಡುವ 15 ದಿನ ಮೊದಲೆ ನೀರನ್ನು ನಿಲ್ಲಿಸುವದರಿಂದ ಗಡ್ಡೆಗಳನ್ನು ದೀರ್ಘಕಾಲ ಸಂಗ್ರಹಿಸಿ ಇಡಲು ಸಾದ್ಯವಾಗುತ್ತದೆ.

ರೋಗಗಳು : ಥ್ರಿಪ್ಸ ನುಸಿ.ಸಸಿ ಕತ್ತರಿಸುವ ಹುಳು.ಜಿಗಿಹುಳು.ಕಾಡಿಗೆ ರೋಗ.ಬ್ಯ್ಲೆಟ್ ರೋಗ.ಎಲೆ ಚುಕ್ಕೆ ರೋಗ.ಈ ರೋಗಗಳನ್ನು ಕಾಲ ಕಾಲಕ್ಕೆ ತಙ್ನರ ಸಲಹೆ ಮೇರೆಗೆ ನಿರ್ವಹಿಸಿದರೆ ಅಧಿಕ ಇಳುವರಿ ಸಾದ್ಯ.
ಕೊಯ್ಲು ಮತ್ತು ಇಳುವರಿ : ತಳಿಗಳಿಗೆ ಅನುಗುಣವಾಗಿ 90 ರಿಂದ 140 ದಿನಕ್ಕೆ ಕೊಯ್ಲಿಗೆ ಬರುತ್ತವೆ.ಕೊಯ್ಲಿಗೆ ಬಂದ ಗಿಡಗಳು ಹಳದಿ ಬಣ್ಣಕ್ಕೆ ತಿರುಗಿರುತ್ತವೆ.ನಂತರ ಅವನ್ನು ಅಗೆದು ಬಿಸಿಲಿನಲ್ಲಿ ಒಣಗಿಸುವದರಿಂದ ದೀರ್ಘಕಾಲ ಸಂಗ್ರಹಿಸಿಡಬಹುದು.ಇಳುವರಿ ತಳಿಗಳಿಗೆ ಅನುಗುಣವಾಗಿ ಪ್ರತಿ ಹೆಕ್ಟೆರ್ ಗೆ 20 ರಿಂದ 40 ಟನ್ ವರೆಗು ಇಳುವರಿ ಬರುತ್ತವೆ.








ಕಾಮೆಂಟ್‌ಗಳಿಲ್ಲ:

ಬಾಳೆ ಕ್ರುಷಿ

ಬಾಳೆ ಒಂದು ಬಹುಜನಪ್ರಿಯ ಹಣ್ಣಿನ ಬೆಳೆ ಮಾವಿನಹಣ್ಣಿನ ನಂತರದ ಸ್ಥಾನ ಬಾಳೆ ಹಣ್ಣಿಗೆ ಲಭಿಸುತ್ತದೆ.ಭಾರತದಲ್ಲಿ 50 ಕ್ಕೂ ಹೆಚ್ಚು ತಳಿಗಳಿದ್ದು ಅವು ವಿವಿಧ ಭಾಗದಲ್ಲಿ ಬೆಳೆ...