expr:class='"loading" + data:blog.mobileClass'>

ಶುಕ್ರವಾರ, ಆಗಸ್ಟ್ 27, 2021

ಬಾಳೆ ಕ್ರುಷಿ

ಬಾಳೆ ಒಂದು ಬಹುಜನಪ್ರಿಯ ಹಣ್ಣಿನ ಬೆಳೆ ಮಾವಿನಹಣ್ಣಿನ ನಂತರದ ಸ್ಥಾನ ಬಾಳೆ ಹಣ್ಣಿಗೆ ಲಭಿಸುತ್ತದೆ.ಭಾರತದಲ್ಲಿ 50 ಕ್ಕೂ ಹೆಚ್ಚು ತಳಿಗಳಿದ್ದು ಅವು ವಿವಿಧ ಭಾಗದಲ್ಲಿ ಬೆಳೆಯಲಾಗುತ್ತಿದೆ.
ಬಾಳೆಹಣ್ಣಿನಲ್ಲಿ ಹೇರಳವಾದ ಶರ್ಕರಪಿಷ್ಟ ಮತ್ತು ಖನಿಜಾಂಶಗಳ ಜೊತೆ ಹೇಚ್ಚಿನ ಜೀವಸತ್ವಗಳನ್ನು ಒಳಗೊಂಡಿದ್ದು ಇದು ನಮ್ಮ ಜೀರ್ಣಾಂಗ ಸಮಸ್ಯೆಗಳ ನಿವಾರಣೆಗೆ ಸಹಕಾರಿಯಾಗಿದೆ.

ಬಾಳೆ ಕ್ರುಷಿಗೆ ಸೂಕ್ತ ಮಣ್ಣು ಮತ್ತು ಕಾಲ  :
ಬಾಳೆ ಬೆಳೆಗೆ ನೀರಾವರಿ ಅನುಕೂಲವಿರುವ ಎಲ್ಲಾ ಕಡೆ ಬೆಳೆಯಬಹುದಾದರೂ ಚೆನ್ನಾಗಿ ನೀರು ಬಸಿದು ಹೋಗುವ ಕೆಂಪುಗೋಡು.ಕಪ್ಪುಗೋಡು ಮಣ್ಣು ಸೂಕ್ತ ತೇವಾಂಶವನ್ನು ದೀರ್ಘಕಾಲ ಕಾಯ್ದಿಟ್ಟುಕೊಳ್ಳುವ ಸಾವಯವ ಅಂಶದಿಂದ ಸಂಪದ್ಬರಿತವಾದ ಮಣ್ಣು ಸೂಕ್ತ.
ಬಾಳೆಯನ್ನು ವರ್ಷದ ಯಾವುದೇ ಕಾಲದಲ್ಲಿ ನಾಟಿ ಮಾಡಬಹುದಾದರೂ ಜೂನ್ - ಜುಲೈ ತಿಂಗಳಿನಲ್ಲಿ ನಾಟಿ ಮಾಡುವದರಿಂದ ಸಿಗಟೋಕಾ ಎಲೆಚುಕ್ಕೆ ರೋಗ ನಿಯಂತ್ರಿಸಬಹುದು.ಇದರ ಹೊರತಾಗಿಯೂ ನವೆಂಬರ್ - ಡಿಸೆಂಬರ್ ತಿಂಗಳಿನಲ್ಲೂ ಸಹ ನಾಟಿ ಮಾಡುವದರಿಂದ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ನಿರೀಕ್ಷಿಸಬಹುದು.

ಬಾಳೆಯ ತಳಿಗಳು :
ರೋಬಸ್ಟ್.ರಸಬಾಳೆ.ಪಚ್ಚಬಾಳೆ.ಪೂವನ್.ಜಿ-9.ರಾಜಾಪುರಿ.ನೇಂದ್ರನ್.ಏಲಕ್ಕಿಬಾಳೆ.ಮಧುರಂಗ.ಮುಂತಾದವು.
ನಾಟಿ ಪದ್ದತಿಗಳು :
ಬಾಳೆ ಬೆಳೆಯನ್ನು ಅಂಗಾಂಶ ಬಾಳೆ ಪದ್ದತಿ ಮತ್ತು ಕಂದುಗಳ ಪದ್ದತಿಯಲ್ಲಿ ನಾಟಿ ಮಾಡಬಹುದು.ಕಂದುಗಳಲ್ಲಿ ಎರಡು ವಿಧ ಒಂದು ಕತ್ತಿ ಕಂದು.ಮತ್ತೊಂದು ನೀರುಕಂದು.ಕಂದುಗಳ ನಾಟಿಯಾದರೆ ಉತ್ತಮ ಗುಣಮಟ್ಟದ ಆರೋಗ್ಯವಂತ ಗಿಡಗಳಿಂದ ಕತ್ತಿ ಕಂದುಗಳನ್ನೆ ಬಳಸುವದು ಸೂಕ್ತ.ನೀರು ಕಂದುಗಳಾದರೆ ಬೆಳೆ ಸ್ಚಲ್ಪ ತಡವಾಗಿ ಬರುವದಲ್ಲದೆ ಉತ್ತಮ ದರ್ಜೆಯ ಗೊನೆಗಳು ಬರುವದಿಲ್ಲ.

ಬಾಳೆ ನಾಟಿಯ ಅಂತರ : 
1: ಪಚ್ಚಬಾಳೆ 1.8 ಮೀ * 1.8 ಮೀ.ಅಂತರದಲ್ಲಿ ಹೆಕ್ಟೆರ್ ಗೆ 3080 ಗುಣಿಗಳು.
2: ರೋಬಾಸ್ಟ್ 1.5 ಮೀ * 1.5 ಮೀ ಅಂತರದಲ್ಲಿ ಹೆಕ್ಟೆರ್ ಗೆ 4440 ಗುಣಿಗಳು.ಮತ್ತು 2.2 ಮೀ * 1.8  ಮೀ ಅಂತರದಲ್ಲಿ ಹೆಕ್ಟೆರ್ ಗೆ 2200 ಗುಣಿಗಳು.
3: ಇತರ ತಳಿಗಳು 2.1 ಮೀ * 2.1 ಮೀ ಅಂತರದಲ್ಲಿ ಹೆಕ್ಟೆರ್ ಗೆ 2250 ಗುಣಿಗಳು.

ಬಾಳೆ ನಾಟಿ ವಿಧಾನ :
ಚೆನ್ನಾಗಿ ಆಳವಾಗಿ ಉಳುಮೆ ಮಾಡಿ ಸಿದ್ದಪಡಿಸಿಕೊಂಡ ಭೂಮಿಯಲ್ಲಿ ಮೇಲೆ ತಿಳಿಸಿದ ಅಂತರಗಳಲ್ಲಿ 45 *45 *45 ಸೆಂ.ಮೀ ಅಳತೆಯ  ಸಿದ್ದಪಡಿಸಿಕೊಂಡ ಗುಣಿಗಳಿಗೆ ಪ್ರತಿ ಹೆಕ್ಟೆರ್ ಗೆ 40 ಟನ್ ಕೊಟ್ಟಿಗೆ ಗೊಬ್ಬರವನ್ನು ಪ್ರತಿ ಗುಣಿಗು ಸಮನಾಗಿ ಹಾಕಿ ಜೊತೆಗೆ ಕಾಂಪೋಸ್ಟ್.ಬೇವಿನ ಹಿಂಡಿ ಬಳಸಿದರೆ ಉತ್ತಮ ನಂತರ ಮೇಲ್ಮಣ್ಣು ಬೆರೆಸಿ ಗುಣಿಗಳನ್ನ ಸಿದ್ದಪಡಿಸಿಕೊಂಡು ನಾಟಿಗೆ ಅಂಗಾಂಶ ಸಸಿ ಹಾಗೂ ಕಂದುಗಳು ಯಾವುದಾದರೂ ಬಳಸಬಹುದು ಕಂದುಗಳನ್ನು ಬಳಸುವದಾದರೆ ಬಂಚೀಟಾಪ್.ನಂಜುರೋಗ ಮುಕ್ತ ತಾಯಿ ಗಿಡದಿಂದ ಆರಿಸಿದ ಗೆಡ್ಡೆಗಳನ್ನೆ ಬಳಸಿ ಆ ಗೆಡ್ಡೆಯ ಮೇಲ್ಬಾಗವನ್ನು ಸವರಿ ಮಣ್ಣು/ಸೆಗಣಿ ರಾಡಿಯಲ್ಲಿ ಅದ್ದಿ ತೆಗೆದು ಅವುಗಳ ಮೇಲೆ 40 ಗ್ರಾಂ.ಶೇ. 3ರ ಕಾರ್ಬೊಪ್ಯೂರಾನ್ ಹರಳು ಉದುರಿಸಿ ಗೆಡ್ಡೆಗಳನ್ನ ನೆರಳಿನಲ್ಲಿ ಒಣಗಿಸಿ ನಾಟಿ ಮಾಡುವದರಿಂದ ಸಸ್ಯಗಳ ಜಂತು ನಿರ್ವಹಣೆ ಮಾಡಬಹುದು.ನಾಟಿ ಮಾಡಿದ ನಂತರ ನೀರನ್ನು ಒದಗಿಸಿ.ನಾಟಿ ಮಾಡಿದ ಸಸ್ಯಗಳಿಂದ ಬಲಿತ ದೊಡ್ಡ ಗಿಡಗಳ ವರೆಗೆ ವಿವಿದ ಹಂತದಲ್ಲಿ ಮಣ್ಣು ಮತ್ತು ಸ್ಥಳಿಯ ಹವಾಗುಣಕ್ಕೆ ಅನುಗುಣವಾಗಿ ಪ್ರತಿ ಗುಣಿಗು 4 ಲೀ ನಿಂದ ಶುರುವಾಗಿ ಕೊನೆಯ ಹಂತದಲ್ಲಿ 25 ಲೀ ನೀರನ್ನು ಪ್ರತಿ ಗುಣಿಗು ಪ್ರತಿ ದಿನ ಒದಗಿಸಿ.

ಬಾಳೆ ನಾಟಿ ನಂತರದ ನಿರ್ವಹಣೆ :
ನಾಟಿ ಮಾಡಿದ ನಂತರ
ದಿನ     -    ಸಾರಜನಕ   - ರಂಜಕ  -    ಪೊಟ್ಯಾಷ್
30      -      20 ಗ್ರಾಂ    - 20 ಗ್ರಾಂ -    25ಗ್ರಾಂ
70      -      40           -  20        -    55
105    -      45            -  20        -    55
140    -      45            -  20        -    55
175    -      45            -  20        -    55
ಹೂ ಬಿಡುವ ಸಮಯ ಕೊನೆಯದಾಗಿ 
           -      45            -  20        -    55
ಈ ಪ್ರಮಾಣದ ಗೊಬ್ಬರಗಳನ್ನ ಮೇಲೆ ತಿಳಿಸಿರುವ ದಿನಗಳಲ್ಲಿ ಪ್ರತಿ ಗುಣಿಗಳಿಗೂ ಕೊಡುವದು ಸೂಕ್ತ.
ಮಣ್ಣಿನ ಗುಣಧರ್ಮದ ಆದಾರದ ಮೇಲೆ ಗೊಬ್ಬರಗಳ ಪ್ರಮಾಣವನ್ನು ಹೊಂದಿಸಿಕೊಳ್ಳಬಹುದು.
ತಾಯಿ ಗಿಡ ಹೂ ಬಿಡುವ ತನಕ ಪಕ್ಕದಲ್ಲಿ ಬರುವ ಎಲ್ಲಾ ಕಂದುಗಳನ್ನು ತೆಗೆದು ಹೂ ಬಿಟ್ಟ ನಂತರ ಮುಂದಿನ ಬೆಳೆಗಾಗಿ ಒಂದು ಕಂದನ್ನು ಮಾತ್ರ ಉಳಿಸಿಕೊಳ್ಳುವದರಿಂದ ಸಿಗಾಟೋಕಾ ಎಲೆ ಚುಕ್ಕೆ ರೋಗ ನಿಯಂತ್ರಣ ಮಾಡಬಹುದು.ಅಂತರಿಕ ಕಳೆ ನಿರ್ಮೂಲನೆಗಾಗಿ ಅಲಸಂದೆಯನ್ನು ಬಾಳೆಯ ಅಂತರದಲ್ಲಿ ಬಿತ್ತಿದ 45 ದಿನದ ನಂತರ ಮಣ್ಣಿಗೆ ಬೆರೆಸುವದರಿಂದ ಮಣ್ಣಿನಲ್ಲಿ ಸಾವಯವ ಪೋಷಕಾಂಶಗಳು ಬಾಳೆಗೆ ದೊರೆಯುವಂತೆ ಮಾಡುವದರ ಜೊತೆಗೆ ಕಳೆ ನಿರ್ಮೂಲನೆಯನ್ನು ಮಾಡಬಹುದು.

ಬಾಳೆ ಗೊನೆಗಳು ಬಲಿಷ್ಠವಾಗುವ ಹಂತದಲ್ಲಿ ಗೊನೆಗಳ ಬಾರಕ್ಕೆ ಆಸರೆಯಾಗಿ ಕೋಲುಗಳನ್ನು ಒದಗಿಸಿ ಕಟ್ಟಬೇಕು.ಬಾಳೆ ತೋಟದ ಸುತ್ತ ಗಾಳಿ ತಡೆಗಾಗಿ ಎರಡು ಸಾಲು ಚೊಗಚೆ.ನುಗ್ಗೆ.ಮುಂತಾದ ಬೆಳೆಗಳನ್ನು ಮಾಡುವದು ಸೂಕ್ತ.
ಗೊನೆಯ ಕೊನೆಯ ಕಯ್ಯಿ ಹೊರ ಬಂದಾಗ ಹೂವನ್ನು ಮುರಿಯುವದರ ಜೊತೆಗೆ 2.4 - ಡಿ 30 ಪಿ.ಪಿ.ಎಂ ಅನ್ನು 30 ಮಿ.ಗ್ರಾಂ ಪ್ರತಿ ಲೀ ನೀರಿಗೆ ಬೆರೆಸಿ ಪ್ರತಿ ಗೊನೆಗು 250 ಮಿ.ಲೀ.ಯಂತೆ ಸಿಂಪಡಿಸುವದರಿಂದ ಹಣ್ಣುಗಳ ಗಾತ್ರ ಮತ್ತು ತೂಕ ಹೆಚ್ಚಿಸಬಹುದು.

ಬಾಳೆ ಬೆಳೆಗೆ ತಗುಲುವ ರೋಗಗಳು :
ಎಲೆಸುರುಳಿ ರೋಗ.ಕಾಂಡಕೊರಕ ಹುಳು.ಸಸ್ಯ ಹೇನು.ಗೆಡ್ಡೆಕೊರಕ ಹುಳು.ಎಲೆಚುಕ್ಕೆ ರೋಗ.ಪನಾಮ ಸೊರಗು.ಬಂಚಿಟಾಪ್.ಮೊಸಾಯಿಕ್ ನಂಜುರೋಗ.ನೆಮಟೋಡ್ ಸಸ್ಯಜಂತು ರೋಗ.ಫ್ರೆಕಲ್ ಎಲೆಚುಕ್ಕೆ.ತುದಿಕೊಳೆ.ಚಿಬ್ಬುರೋಗ.ಇಂತಹ ಸಾಮಾನ್ಯ ರೋಗ ಲಕ್ಷಣಗಳು ಕಂಡುಬಂದಾಗ ತಙ್ನರ ಸಲಹೆ ಮೇರೆಗೆ ಕಾಲ ಕಾಲಕ್ಕೆ ತಗಲುವ ರೋಗ ಹತೋಟಿ ಮಾಡುವದರಿಂದ ಉತ್ತಮ ಇಳುವರಿ ಸಾದ್ಯ.

ಬಾಳೆ ಕೊಯ್ಲು ಮತ್ತು ಇಳುವರಿ :
ತಳಿಗಳಿಗೆ ಅನುಗುಣವಾಗಿ ನಾಟಿ ಮಾಡಿದ 12 - ರಿಂದ 14 ತಿಂಗಳಿಗೆ ಮೊದಲ ಕೊಯ್ಲು ಬಂದರೆ ಎರಡನೆ ಕೊಯ್ಲು 6 ರಿಂದ 8 ತಿಂಗಳಲ್ಲಿ ಬರುತ್ತದೆ.ಹಾಗೂ ತಳಿಗಳಿಗೆ ಅನುಗುಣವಾಗಿ ಪ್ರತಿ ಹೆಕ್ಟೆರ್ ಗೆ 20 ರಿಂದ 45 ಟನ್ ವರೆಗು ಇಳುವರಿ ಬರುತ್ತದೆ.


ಶುಕ್ರವಾರ, ಆಗಸ್ಟ್ 20, 2021

ಕ್ಯಾರೆಟ್ ಬೆಳೆ ಮಾಹಿತಿ.

ಕ್ಯಾರೆಟ್ ಒಂದು ಬಹು ಜನಪ್ರಿಯ ಗಡ್ಡೆ ತರಕಾರಿ.ಕ್ಯಾರೆಟ್ ಅನ್ನುವ ಪದ ಆಗ್ಲಬಾಷೆಯಿಂದ ಬಂದದ್ದು ಕನ್ನಡದಲ್ಲಿ ಇದನ್ನು 'ಗಜ್ಜರಿ" ಎಂದು ಕರೆಯುತ್ತಾರೆ. ಇದು ತನ್ನ ವಿಷೇಶವಾದ ಸಿಹಿ ಗುಣದಿಂದ ಬಹು ಜನಪ್ರಿಯ ತರಕಾರಿಯಾಗಿದೆ.ಕ್ಯಾರೆಟನ್ನು ಹಸಿ ತರಕಾರಿಯಾಗಿ ಮತ್ತು ಸಿಹಿ ಪಧಾರ್ಥಗಳ ತಯಾರಿಕೆ ಮತ್ತು ಸಾಂಬಾರ್ ಮತ್ತು ಪಲ್ಯ.ಸಲಾಡ್ಗಳಲ್ಲೂ ಬಳಸ ಬಹುದು ಜೊತೆಗೆ ಸೊಂದರ್ಯ ವರ್ದಕಗಳಲ್ಲೂ ಬಳಸಬಹುದು.ಪಾನೀಯವಾಗಿ ಕ್ಯಾರೆಟ್ ಜ್ಯೂಸ್ ಸಹ ತಯಾರಿಸಬಹುದು.
ಕ್ಯಾರೆಟ್ ಮೂಲ ತವರು ಮದ್ಯ ಏಷ್ಯಾ.ಭಾರತದಲ್ಲೂ ಸಹ ಇದನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ.ಕ್ಯಾರೇಟ್ ಅಲ್ಲಿ ಹೇರಳವಾದ ವಿಟಮಿನ್ 'ಎ" ಮತ್ತು 'ಬಿ" ಜೊತೆಗೆ ಖನಿಜಾಂಶಗಳ ಆಗರವಾಗಿದೆ.ದ್ರುಷ್ಟಿದೋಶ.ಮತ್ತು ಚರ್ಮ ಸಂರಕ್ಷಣೆಯಲ್ಲಿ ಕ್ಯಾರೆಟ್ ಅಲ್ಲಿರುವ ವಿಟಮಿನ್ಗಳು ಖನಿಜಾಂಶಗಳು ಬಹುಮುಖ್ಯ ಪಾತ್ರವಹಿಸುತ್ತವೆ.

ಕ್ಯಾರೆಟ್ ತಳಿಗಳು :
ಕುರೋಡ್.ಪೂಸಾ ಯಮದಗ್ನಿ.ಏಷಿಯಾಟಿಕ್ ಲೋಕಲ್.ಡ್ಯಾನವರ್ಸ.ಜೆಯಂಟ್ ಚಾಂಟೆನಿ.ಅರ್ಕಾ ಸೂರಜ್.ಪೂಸಾ ಮೇಘಾಲಿ.ನ್ಯಾಂಟೀಸ್.ಪೂಸಾ ಕೇಸರ್.ಮತ್ತು ಇನ್ನು ಹಲವು.

ಮಣ್ಣು ಮತ್ತು ಹವಾಗುಣ :
ಕ್ಯಾರೆಟ್ ಬೆಳೆಗೆ ಮಣ್ಣಿನ ರಸಸಾರ 4 ರಿಂದ 6 ಬಹು ಮುಖ್ಯ.ಚೆನ್ನಾಗಿ ನೀರು ಬಸಿದು ಹೋಗುವ ಮರಳು ಮಿಶ್ರಿತ ಗೋಡು ಮಣ್ಣು ಉತ್ತಮ ಫಸಲಿಗೆ ಸೂಕ್ತ.
ಕ್ಯಾರೆಟ್ ಬೆಳೆಯನ್ನು ವರ್ಷದ ಮೂರು ಕಾಲಮಾನದಲ್ಲೂ ಬೆಳೆಯಬಹುದಾದರೂ ಸಹ ಉತ್ತಮ ಇಳುವರಿಗೆ ಅಕ್ಟೋಬರ್ - ನವೆಂಬರ್ ಸೂಕ್ತ ಕಾಲಮಾನ.ಇದರ ಹೊರತಾಗಿಯೂ ಜನವರಿ - ಫೆಬ್ರವರಿ ಮತ್ತು ಜೂನ್ -ಜುಲೈ ತಿಂಗಳುಗಳಲ್ಲಿಯೂ ಸಹ ಬೆಳೆಯಬಹುದು.

ಕ್ಯಾರೆಟ್ ಬೇಸಾಯ ಕ್ರಮ :
ಚೆನ್ನಾಗಿ ಆಳವಾಗಿ ಉಳುಮೆ ಮಾಡಿ ಸಣ್ಣ ಮಣ್ಣು ಮಾಡಿ ಸಿದ್ದಪಡಿಸಿದ ಭೂಮಿಯಲ್ಲಿ 1.2 * 1.2 ಮೀ ಅಗಲದ ಮಡಿಯನ್ನು ತಯಾರಿಸಿಕೊಂಡು ಹೆಕ್ಟೇರ್ ಗೆ 25 ಟನ್ ಕೊಟ್ಟಿಗೆ ಗೊಬ್ಬರ ಮತ್ತು 50 * 50 * 50 ಸಾರಜನಕ.ರಂಜಕ.ಪೊಟ್ಯಾಶ್ ಮಿಶ್ರಣ ಗೊಬ್ಬರವನ್ನು ಮಣ್ಣಿಗೆ ಬೆರೆಸಬೇಕು.ನಂತರ 20.5 ಸೆಂ.ಮೀ ಅಂತರದ ಸಾಲುಗಳಲ್ಲಿ ಹೆಕ್ಟೇರ್ ಗೆ 5 ಕೆ ಜಿ ಬೀಜದಂತೆ ಬಿತ್ತಬೇಕು.ಬೀಜಗಳು ಮೊಳಕೆಯೊಡೆದ ಮೇಲೆ 10 ಸೆಂ.ಮೀ ಒಂದರಂತೆ ಒಳ್ಳೆಯ ಆರೋಗ್ಯವಂತ ಸಸಿಗಳನ್ನು ಉಳಿಸಿಕೊಂಡು ಉಳಿದ ಸಸಿಗಳನ್ನ ಕಿತ್ತು ತೆಗೆಯಬೇಕು.
ಕ್ಯಾರೆಟ್ ಬೀಜಗಳು ಅತಿ ಕಡಿಮೆ ನೀರು ಬೇಡುವದರಿಂದ ಬೀಜಗಳು ಮೊಳಕೆಯೊಡೆಯುವ ವರೆಗೂ ತೆಳುವಾಗಿ ನೀರು ಕೊಡುವದು ಸೂಕ್ತ.ಮಣ್ಣು ಮತ್ತು ಹವಾಗುಣಕ್ಕೆ ಅನುಗುಣವಾಗಿ 4 ರಿಂದ 5 ದಿನಕ್ಕೊಮ್ಮೆ ನೀರು ಒದಗಿಸುವದು ಸೂಕ್ತ.ಕ್ಯಾರೆಟ್ ಬೀಜಗಳು ಹೆಚ್ಚಿನ ಸಂದರ್ಭದಲ್ಲಿ ಮೊಳಕೆ ಒಡೆಯುವಲ್ಲಿ ವಿಫಲವಾಗುವದು ಹೆಚ್ಚು ಹಾಗಾಗಿ ನೀರಿನ ನಿರ್ವಹಣೆಯನ್ನು ಮಣ್ಣಿನ ಗುಣಕ್ಕನುಸಾರವಾಗಿ ಜಾಗ್ರತೆ ಇಂದ ಅನುಸರಿಸುವದು  ಸೂಕ್ತ.

ಕ್ಯಾರೆಟ್ ಬೆಳೆಯಲ್ಲಿ ಕಳೆ ನಿಯಂತ್ರಣ :
ಬೀಜ ಬಿತ್ತಿದ ದಿನದಿಂದ 48 ಗಂಟೆಯ ಒಳಗಾಗಿ ಭೂಮಿಯಲ್ಲಿ ತೇವಾಂಶ ಇರುವಂತೆ ನೋಡಿಕೊಂಡು 2.5 ಲೀ.ಪೆಂಡಿಮಿಥಾಲಿನ್ 30 ಇ.ಸಿ ಅಥವ 1.5 ಲೀ ಅಲಾಕ್ಲೋರ್ 50 ಇ.ಸಿ ಯಾವುದಾದರೂ ಒಂದನ್ನು ಭೂಮಿಯ ಮೇಲೆ ಸಿಂಪಡಣೆ ಮಾಡಬಹುದು.ಸಿಂಪಡಣೆಯ ನಂತರ ಭೂಮಿಯನ್ನು ತುಳಿಯಬಾರದು.ನಂತರದಲ್ಲೂ ಬರುವ ಕಳೆಗಳನ್ನು ಆಗಾಗ ಪ್ರತಿ 20 ದಿನಗಳಿಗೊಮ್ಮೆ ನಿಯಂತ್ರಿಸುವದು ಸೂಕ್ತ.ಕಳೆ ನಿಯಂತ್ರಣದ ನಂತರ ಮೇಲುಗೊಬ್ಬರವಾಗಿ ಸಾರಜನಕ 25 ಕಿ.ಗ್ರಾಂ ಕೊಡುವದು ಸೂಕ್ತ.

ಕ್ಯಾರೆಟ್ ಬೆಳೆಗೆ ತಗಲುವ ರೋಗಗಳು :
ಸಹಜವಾಗಿ ಕ್ಯಾರೆಟ್ ಬೆಳೆಗೆ ಮೂತಿ ಹುಳು.ಹೇನು.ಜಿಗಿಹುಳು.ಎಲೆಚುಕ್ಕೆ ರೋಗ.ಬೂದಿರೋಗ.ಎಲೆಸುಡುರೋಗಗಳನ್ನು ಗುರುತಿಸಲಾಗಿದೆ.ಕಾಲ ಕಾಲಕ್ಕೆ ತಗಲುವ ರೋಗಲಕ್ಷಣಕ್ಕೆ ಅನುಗುಣವಾಗಿ ತಙ್ನರ ಸಲಹೆ ಮೇರೆಗೆ ರೋಗ ನಿಯಂತ್ರಿಸಿದಲ್ಲಿ ಉತ್ತಮ ಫಸಲು ಇಳುವರಿ ಪಡೆಯಬಹುದು.

ಕ್ಯಾರೆಟ್ ಕೊಯ್ಲು ಮತ್ತು ಇಳುವರಿ :
ಕ್ಯಾರೆಟ್ ಬಿತ್ತಿದ ತಳಿಗಳಿಗೆ ಅನುಗುಣವಾಗಿ 3 ರಿಂದ 4 ತಿಂಗಳ ನಂತರ ಕೊಯ್ಲಿಗೆ ಬರುತ್ತವೆ.ಉತ್ತಮ ನಿರ್ವಹಣೆ ಮತ್ತು ಮಣ್ಣಿನ ಗುಣ ಧರ್ಮಕ್ಕನುಗುಣವಾಗಿ ಪ್ರತಿ ಹೆಕ್ಟೇರ್ ಗೆ 20 ಟನ್ ಕ್ಯಾರೆಟ್ ಇಳುವರಿಯನ್ನ ಪಡೆಯಬಹುದು.



ಬುಧವಾರ, ಆಗಸ್ಟ್ 11, 2021

ರೈತ ವಿರೋದಿ ವಿದ್ಯುತ್ ತಿದ್ದುಪಡಿ ಮಸೂದೆ 2021

  ಇತ್ತೀಚೆಗೆ ಕೆಂದ್ರ ಸರ್ಕಾರ ಅವಿರೋದವಾಗಿ ರೈತ ಮಸೂದೆ ಮಂಡನೆ ಮಾಡಿ ರೈತರ ಕೆಂಗಣ್ಣಿಗೆ ಗುರಿಯಾಗಿ ಬಾರಿ ಪ್ರತಿಭಟನೆ ನಂತರ ಸು ಕೋರ್ಟ್ ಮದ್ಯ ಪ್ರವೇಶದಿಂದ ತಾತ್ಕಾಲಿಕವಾಗಿ ಕ್ರುಷಿ ಮಸೂದೆಯನ್ನು ತಡೆ ಹಿಡಿಯಲು ಆದೇಶಿಸಿದ ನಂತರ ಕೆಂದ್ರ ಸರ್ಕಾರ ಮತ್ತೊಂದು ರೈತ ವಿರೋದಿ ವಿದ್ಯುತ್ ಮಸೂದೆ ಮಂಡನೆ ಮಾಡಲು ನಿರ್ದರಿಸಿದೆ. ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಮೀಟರ್‌ ಅಳವಡಿಕೆ ಮಾಡಿ ಶುಲ್ಕ ವಸೂಲಿ ಮಾಡುವುದು, ಬಳಿಕ ನಿಧಾನವಾಗಿ ಸರ್ಕಾರದಿಂದ ರೈತರಿಗೆ ಮರುಪಾವತಿ ಮಾಡುವುದು ಸೇರಿ ಹಲವು ವಿವಾದಿತ ನಿಯಮವನ್ನು ಒಳಗೊಂಡ ‘ವಿದ್ಯುತ್‌ ತಿದ್ದುಪಡಿ ಮಸೂದೆ-2021’ ವಿರುದ್ಧ ಬೀದಿಗಿಳಿಯಲು ರೈತ ಸಂಘಟನೆಗಳು ನಿರ್ದರಿಸಿವೆ.
 ಪ್ರಸಕ್ತ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಂಡನೆಯಾಗಲಿರುವ ರೈತ ವಿರೋದಿ ವಿದ್ಯುತ್‌ ಮಸೂದೆ-2021 ಪ್ರಕಾರ, ಕೃಷಿ ಪಂಪ್‌ಸೆಟ್‌ಗಳಿಗೂ ವಿದ್ಯುತ್‌ ಮೀಟರ್‌ ಅಳವಡಿಕೆಯಾಗಲಿದೆ. ಅಷ್ಟೇ ಅಲ್ಲ, ಈವರೆಗೆ 10 ಎಚ್‌ಪಿ ಪಂಪ್‌ಸೆಟ್‌ವರೆಗೆ ಉಚಿತ ವಿದ್ಯುತ್‌ ಪಡೆಯುತ್ತಿದ್ದ ರೈತರೂ ಸೇರಿದಂತೆ ಎಲ್ಲರೂ ವಿದ್ಯುತ್‌ ಶುಲ್ಕ ಪಾವತಿಸಬೇಕು. ಶುಲ್ಕ ಪಾವತಿಯ ನಂತರ ಸರ್ಕಾರದಿಂದ ಸಬ್ಸಿಡಿ ಪಡೆಯಬಹುದು.
ರೈತ ವಿರೋದಿ ವಿದ್ಯುತ್  ಮಸೂದೆಯ ಕರಡು ನಿಯಮಗಳಲ್ಲಿರುವ ಈ ಪ್ರಸ್ತಾಪವು ರೈತರ ಕೆಂಗಣ್ಣಿಗೆ ಗುರಿಯಾಗಿದೆ. ಮಸೂದೆ ಜಾರಿಯಾದರೆ ವಿದ್ಯುತ್‌ ಸರಬರಾಜು ನಿಗಮಗಳು ಖಾಸಗಿ ಕಂಪನಿಗಳ ಕೈ ಸೇರಲಿವೆ. ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಕೆಯಾದರೆ ಖಾಸಗಿ ಕಂಪನಿಗಳು ರೈತರ ಶೋಷಣೆ ಮಾಡಲಿವೆ. ಇದರಿಂದ ಕೃಷಿ ಚಟುವಟಿಕೆಗಳನ್ನೇ ಮಾಡಲಾಗದ ಸ್ಥಿತಿ ನಿರ್ಮಾಣವಾಗಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಅಲ್ಲದೆ, ವಿದ್ಯುತ್‌ ಪೂರೈಕೆ ಖಾಸಗೀಕರಣಕ್ಕೆ ಅಂಕಿತ ದೊರೆತರೆ ಬಡ ರೈತರು, ಕೂಲಿ ಕಾರ್ಮಿಕರಿಗೆ ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಕೃಷಿ ಪಂಪ್‌ಸೆಟ್‌, ಬೀದಿ ದೀಪ, ನೀರು ಸರಬರಾಜಿಗೆ ನೇರವಾಗಿ ನೀಡುತ್ತಿರುವ ಉಚಿತ ವಿದ್ಯುತ್‌ ಬಂದ್‌ ಆಗಲಿದೆ. ಗ್ರಾಹಕರು ಮೊದಲು ವಿದ್ಯುತ್‌ ಶುಲ್ಕ ಪಾವತಿಸಿ ಬಳಿಕ ಸರ್ಕಾರ ಸಬ್ಸಿಡಿ ಕಾರ್ಯಕ್ರಮದಡಿ ಪರಿಹಾರ ನೀಡಿದರೆ ಪಡೆಯಬೇಕಾಗುತ್ತದೆ. ಪ್ರಿಪೇಯ್ಡ್‌ ಮೀಟರ್‌ ಅಳವಡಿಕೆ ಮಾಡಿದರಂತೂ ಕೃಷಿಕರೂ ಸಹ ಮೊದಲು ಹಣ ಪಾವತಿಸಿ ಬಳಿಕ ಕೃಷಿ ಪಂಪ್‌ಸೆಟ್‌ಗೆ ವಿದ್ಯುತ್‌ ಬಳಕೆ ಮಾಡಿಕೊಳ್ಳುವಂತಹ ಅನಿವಾರ್ಯತೆ ಎದುರಾಗಲಿದೆ.
ರೈತ ವಿರೋದಿಯಾದ ವಿದ್ಯುತ್ ಮಸೂದೆ 2021 ರ ವಿರುದ್ದ ಹೋರಾಟಕ್ಕೆ ರೈತ ಸಂಘಗಳು ನಿರ್ಧರಿಸಿವೆ ಇವೆಲ್ಲಾ ನಿಯಮಗಳಿಂದಾಗಿ ಮಸೂದೆಯು ಕೃಷಿಕರಿಗೆ ಮರಣಶಾಸನ ವಾಗಲಿದೆ ಎಂದು ಆರೋಪಿಸಿ ರೈತ ಸಂಘಟನೆಗಳು ಹೋರಾಟ ಹಮ್ಮಿಕೊಳ್ಳಲು ಸಿದ್ಧತೆ ನಡೆಸಿವೆ. ಕೋಡಿಹಳ್ಳಿ ಚಂದ್ರಶೇಖರ್‌ ನೇತೃತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ಆಗಸ್ಟ್‌ 10 ರಂದು ರಾಜ್ಯಾದ್ಯಂತ ಹೋರಾಟ ಹಮ್ಮಿಕೊಂಡಿವೆ. ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮದ ನೌಕರರ ಸಂಘ ಮತ್ತು ಅಧಿಕಾರಿಗಳ ಅಸೋಸಿಯೇಷನ್‌ಗಳ ಒಕ್ಕೂಟದ ಜತೆ ಈಗಾಗಲೇ ಮಾತುಕತೆ ನಡೆಸಿದೆ.ವಿದ್ಯುತ್   ಖಾಸಗೀಕರಣ ಪ್ರಸ್ತಾವನೆಯಿಂದ ಕೇಂದ್ರವು ಹಿಂದೆ ಸರಿಯದಿದ್ದರೆ ರಾಜ್ಯಾದ್ಯಂತ ರೈತರು ಬೀದಿಗಿಳಿದು ಹೋರಾಟ ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಕೋಡಿಹಳ್ಳಿ ಚಂದ್ರಶೇಖರ್‌, ಹಿಂದೆ ಎಸ್‌.ಎಂ. ಕೃಷ್ಣ ಅವಧಿಯಲ್ಲೂ ರಾಜ್ಯದಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಕೆಗೆ ಸರ್ಕಾರ ಮುಂದಾಗಿತ್ತು. ಮೀಟರ್‌ ಅಳವಡಿಕೆ ಮಾಡಿ ಖಾಸಗಿಯವರಿಗೆ ಹಸ್ತಾಂತರಿಸಲು ಯತ್ನಿಸಿದ್ದರು. ಆಗ ರಾಜ್ಯಾದ್ಯಂತ ಹೋರಾಟ ಸಂಘಟಿಸಿ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯುವಂತೆ ರೈತರು ಮಾಡಿದ್ದರು ಇದೀಗ ಕೇಂದ್ರ ಸರ್ಕಾರವು 2019ರಿಂದಲೂ ವಿದ್ಯುತ್‌ ಪೂರೈಕೆಯನ್ನು ಖಾಸಗಿಯವರಿಗೆ ವಹಿಸಲು ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್‌ ಒಂದೂವರೆ ವರ್ಷಗಳ ಕಾಲ ರೈತರಿಗೆ ಸಂಬಂಧಿಸಿದ ಯಾವುದೇ ಕಾಯಿದೆ ತಿದ್ದುಪಡಿ ತರದಂತೆ ತಡೆಯಾಜ್ಞೆ ನೀಡಿದೆ. ಇದೀಗ ಕೇಂದ್ರವು ನ್ಯಾಯಾಲಯದ ಗಡುವು ಮುಗಿದ ತಕ್ಷಣವೇ ರೈತರ ಮೇಲೆ ಗದಾಪ್ರಹಾರಕ್ಕೆ ಮುಂದಾಗಿದೆ. ಕೇಂದ್ರ ಸರ್ಕಾರವು 2020ರ ವಿದ್ಯುತ್‌ ಕಾಯಿದೆಯನ್ನು ಅನುಷ್ಠಾನಗೊಳಿಸಲು 2021ರ ವಿದ್ಯುತ್‌ ತಿದ್ದುಪಡಿ ಕಾಯಿದೆ ಮಂಡಿಸಲು ಸಿದ್ಧವಾಗಿದೆ. ಈ ಬಗ್ಗೆ ಅನಿವಾರ್ಯವಾಗಿ ಹೋರಾಟ ಹಮ್ಮಿಕೊಳ್ಳಲಿದ್ದೇವೆ. ಈ ಕುರಿತು ವಿದ್ಯುತ್‌ ಪ್ರಸರಣ ನಿಗಮಗಳ ಸಂಘಗಳೂ ನಮ್ಮನ್ನು ಸಂಪರ್ಕಿಸಿವೆ. ಈ ಬಗ್ಗೆ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
.

ಬಾಳೆ ಕ್ರುಷಿ

ಬಾಳೆ ಒಂದು ಬಹುಜನಪ್ರಿಯ ಹಣ್ಣಿನ ಬೆಳೆ ಮಾವಿನಹಣ್ಣಿನ ನಂತರದ ಸ್ಥಾನ ಬಾಳೆ ಹಣ್ಣಿಗೆ ಲಭಿಸುತ್ತದೆ.ಭಾರತದಲ್ಲಿ 50 ಕ್ಕೂ ಹೆಚ್ಚು ತಳಿಗಳಿದ್ದು ಅವು ವಿವಿಧ ಭಾಗದಲ್ಲಿ ಬೆಳೆ...