ಕ್ಯಾರೆಟ್ ಮೂಲ ತವರು ಮದ್ಯ ಏಷ್ಯಾ.ಭಾರತದಲ್ಲೂ ಸಹ ಇದನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ.ಕ್ಯಾರೇಟ್ ಅಲ್ಲಿ ಹೇರಳವಾದ ವಿಟಮಿನ್ 'ಎ" ಮತ್ತು 'ಬಿ" ಜೊತೆಗೆ ಖನಿಜಾಂಶಗಳ ಆಗರವಾಗಿದೆ.ದ್ರುಷ್ಟಿದೋಶ.ಮತ್ತು ಚರ್ಮ ಸಂರಕ್ಷಣೆಯಲ್ಲಿ ಕ್ಯಾರೆಟ್ ಅಲ್ಲಿರುವ ವಿಟಮಿನ್ಗಳು ಖನಿಜಾಂಶಗಳು ಬಹುಮುಖ್ಯ ಪಾತ್ರವಹಿಸುತ್ತವೆ.
ಕ್ಯಾರೆಟ್ ತಳಿಗಳು :
ಕುರೋಡ್.ಪೂಸಾ ಯಮದಗ್ನಿ.ಏಷಿಯಾಟಿಕ್ ಲೋಕಲ್.ಡ್ಯಾನವರ್ಸ.ಜೆಯಂಟ್ ಚಾಂಟೆನಿ.ಅರ್ಕಾ ಸೂರಜ್.ಪೂಸಾ ಮೇಘಾಲಿ.ನ್ಯಾಂಟೀಸ್.ಪೂಸಾ ಕೇಸರ್.ಮತ್ತು ಇನ್ನು ಹಲವು.
ಮಣ್ಣು ಮತ್ತು ಹವಾಗುಣ :
ಕ್ಯಾರೆಟ್ ಬೆಳೆಗೆ ಮಣ್ಣಿನ ರಸಸಾರ 4 ರಿಂದ 6 ಬಹು ಮುಖ್ಯ.ಚೆನ್ನಾಗಿ ನೀರು ಬಸಿದು ಹೋಗುವ ಮರಳು ಮಿಶ್ರಿತ ಗೋಡು ಮಣ್ಣು ಉತ್ತಮ ಫಸಲಿಗೆ ಸೂಕ್ತ.
ಕ್ಯಾರೆಟ್ ಬೆಳೆಯನ್ನು ವರ್ಷದ ಮೂರು ಕಾಲಮಾನದಲ್ಲೂ ಬೆಳೆಯಬಹುದಾದರೂ ಸಹ ಉತ್ತಮ ಇಳುವರಿಗೆ ಅಕ್ಟೋಬರ್ - ನವೆಂಬರ್ ಸೂಕ್ತ ಕಾಲಮಾನ.ಇದರ ಹೊರತಾಗಿಯೂ ಜನವರಿ - ಫೆಬ್ರವರಿ ಮತ್ತು ಜೂನ್ -ಜುಲೈ ತಿಂಗಳುಗಳಲ್ಲಿಯೂ ಸಹ ಬೆಳೆಯಬಹುದು.
ಕ್ಯಾರೆಟ್ ಬೇಸಾಯ ಕ್ರಮ :
ಚೆನ್ನಾಗಿ ಆಳವಾಗಿ ಉಳುಮೆ ಮಾಡಿ ಸಣ್ಣ ಮಣ್ಣು ಮಾಡಿ ಸಿದ್ದಪಡಿಸಿದ ಭೂಮಿಯಲ್ಲಿ 1.2 * 1.2 ಮೀ ಅಗಲದ ಮಡಿಯನ್ನು ತಯಾರಿಸಿಕೊಂಡು ಹೆಕ್ಟೇರ್ ಗೆ 25 ಟನ್ ಕೊಟ್ಟಿಗೆ ಗೊಬ್ಬರ ಮತ್ತು 50 * 50 * 50 ಸಾರಜನಕ.ರಂಜಕ.ಪೊಟ್ಯಾಶ್ ಮಿಶ್ರಣ ಗೊಬ್ಬರವನ್ನು ಮಣ್ಣಿಗೆ ಬೆರೆಸಬೇಕು.ನಂತರ 20.5 ಸೆಂ.ಮೀ ಅಂತರದ ಸಾಲುಗಳಲ್ಲಿ ಹೆಕ್ಟೇರ್ ಗೆ 5 ಕೆ ಜಿ ಬೀಜದಂತೆ ಬಿತ್ತಬೇಕು.ಬೀಜಗಳು ಮೊಳಕೆಯೊಡೆದ ಮೇಲೆ 10 ಸೆಂ.ಮೀ ಒಂದರಂತೆ ಒಳ್ಳೆಯ ಆರೋಗ್ಯವಂತ ಸಸಿಗಳನ್ನು ಉಳಿಸಿಕೊಂಡು ಉಳಿದ ಸಸಿಗಳನ್ನ ಕಿತ್ತು ತೆಗೆಯಬೇಕು.
ಕ್ಯಾರೆಟ್ ಬೀಜಗಳು ಅತಿ ಕಡಿಮೆ ನೀರು ಬೇಡುವದರಿಂದ ಬೀಜಗಳು ಮೊಳಕೆಯೊಡೆಯುವ ವರೆಗೂ ತೆಳುವಾಗಿ ನೀರು ಕೊಡುವದು ಸೂಕ್ತ.ಮಣ್ಣು ಮತ್ತು ಹವಾಗುಣಕ್ಕೆ ಅನುಗುಣವಾಗಿ 4 ರಿಂದ 5 ದಿನಕ್ಕೊಮ್ಮೆ ನೀರು ಒದಗಿಸುವದು ಸೂಕ್ತ.ಕ್ಯಾರೆಟ್ ಬೀಜಗಳು ಹೆಚ್ಚಿನ ಸಂದರ್ಭದಲ್ಲಿ ಮೊಳಕೆ ಒಡೆಯುವಲ್ಲಿ ವಿಫಲವಾಗುವದು ಹೆಚ್ಚು ಹಾಗಾಗಿ ನೀರಿನ ನಿರ್ವಹಣೆಯನ್ನು ಮಣ್ಣಿನ ಗುಣಕ್ಕನುಸಾರವಾಗಿ ಜಾಗ್ರತೆ ಇಂದ ಅನುಸರಿಸುವದು ಸೂಕ್ತ.
ಕ್ಯಾರೆಟ್ ಬೆಳೆಯಲ್ಲಿ ಕಳೆ ನಿಯಂತ್ರಣ :
ಬೀಜ ಬಿತ್ತಿದ ದಿನದಿಂದ 48 ಗಂಟೆಯ ಒಳಗಾಗಿ ಭೂಮಿಯಲ್ಲಿ ತೇವಾಂಶ ಇರುವಂತೆ ನೋಡಿಕೊಂಡು 2.5 ಲೀ.ಪೆಂಡಿಮಿಥಾಲಿನ್ 30 ಇ.ಸಿ ಅಥವ 1.5 ಲೀ ಅಲಾಕ್ಲೋರ್ 50 ಇ.ಸಿ ಯಾವುದಾದರೂ ಒಂದನ್ನು ಭೂಮಿಯ ಮೇಲೆ ಸಿಂಪಡಣೆ ಮಾಡಬಹುದು.ಸಿಂಪಡಣೆಯ ನಂತರ ಭೂಮಿಯನ್ನು ತುಳಿಯಬಾರದು.ನಂತರದಲ್ಲೂ ಬರುವ ಕಳೆಗಳನ್ನು ಆಗಾಗ ಪ್ರತಿ 20 ದಿನಗಳಿಗೊಮ್ಮೆ ನಿಯಂತ್ರಿಸುವದು ಸೂಕ್ತ.ಕಳೆ ನಿಯಂತ್ರಣದ ನಂತರ ಮೇಲುಗೊಬ್ಬರವಾಗಿ ಸಾರಜನಕ 25 ಕಿ.ಗ್ರಾಂ ಕೊಡುವದು ಸೂಕ್ತ.
ಕ್ಯಾರೆಟ್ ಬೆಳೆಗೆ ತಗಲುವ ರೋಗಗಳು :
ಸಹಜವಾಗಿ ಕ್ಯಾರೆಟ್ ಬೆಳೆಗೆ ಮೂತಿ ಹುಳು.ಹೇನು.ಜಿಗಿಹುಳು.ಎಲೆಚುಕ್ಕೆ ರೋಗ.ಬೂದಿರೋಗ.ಎಲೆಸುಡುರೋಗಗಳನ್ನು ಗುರುತಿಸಲಾಗಿದೆ.ಕಾಲ ಕಾಲಕ್ಕೆ ತಗಲುವ ರೋಗಲಕ್ಷಣಕ್ಕೆ ಅನುಗುಣವಾಗಿ ತಙ್ನರ ಸಲಹೆ ಮೇರೆಗೆ ರೋಗ ನಿಯಂತ್ರಿಸಿದಲ್ಲಿ ಉತ್ತಮ ಫಸಲು ಇಳುವರಿ ಪಡೆಯಬಹುದು.
ಕ್ಯಾರೆಟ್ ಕೊಯ್ಲು ಮತ್ತು ಇಳುವರಿ :
ಕ್ಯಾರೆಟ್ ಬಿತ್ತಿದ ತಳಿಗಳಿಗೆ ಅನುಗುಣವಾಗಿ 3 ರಿಂದ 4 ತಿಂಗಳ ನಂತರ ಕೊಯ್ಲಿಗೆ ಬರುತ್ತವೆ.ಉತ್ತಮ ನಿರ್ವಹಣೆ ಮತ್ತು ಮಣ್ಣಿನ ಗುಣ ಧರ್ಮಕ್ಕನುಗುಣವಾಗಿ ಪ್ರತಿ ಹೆಕ್ಟೇರ್ ಗೆ 20 ಟನ್ ಕ್ಯಾರೆಟ್ ಇಳುವರಿಯನ್ನ ಪಡೆಯಬಹುದು.