expr:class='"loading" + data:blog.mobileClass'>
ಹಣ್ಣಿನ ಬೆಳೆಗಳು. ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಹಣ್ಣಿನ ಬೆಳೆಗಳು. ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಜುಲೈ 25, 2021

ಮಾವು ಬೆಳೆ.

ಭಾರತದ ಪ್ರಮುಖ ಹಣ್ಣಿನ ಬೆಳೆಗಳಲ್ಲಿ ಮಾವಿನ ಹಣ್ಣಿಗೆ ಮೊದಲ ಸ್ಥಾನ ಹಣ್ಣುಗಳು ತಮ್ಮ ವಿಶಿಷ್ಟವಾದ ವಿಶೇಷ ರುಚಿಯಿಂದಾಗಿ ಎಂತವರ ಮನಸ್ಸನ್ನು ಆಕರ್ಶಿಸುತ್ತವೆ.ಮಾವಿನ ಹಣ್ಣಿನಲ್ಲಿ ವಿಟಮಿನ್ 'ಎ" ಮತ್ತು 'ಸಿ" ಜೀವಸತ್ವಗಳು ಹೇರಳವಾಗಿದ್ದು ಮನುಷ್ಯನ ಜೀರ್ಣಕ್ರಿಯೆಗೆ ಹೆಚ್ಚು ಸಹಕರಿಸುತ್ತವೆ.ಮಾವಿನ ಹಣ್ಣನ್ನು ತಾಜಾಹಣ್ಣುಗಳಾಗಿ ಮತ್ತು ಸಂಸ್ಕರಿಸಿದ ಪಧಾರ್ಥಗಳಾಗಿಯೂ ಉಪಯೋಗಿಸ ಬಹುದು.ಭಾರತದ ಮಾವಿನ ಹಣ್ಣುಗಳಿಗೆ ವಿಧೇಶಗಳಲ್ಲಿ ಹೆಚ್ಚು ಬೇಡಿಕೆ ಇರುವದರಿಂದ ಹಣ್ಣು ಮತ್ತು ಸಂಸ್ಕರಿಸಿದ ಪಧಾರ್ಥಗಳನ್ನು ವಿಧೇಶಗಳಿಗೆ ರಫ್ತು ಮಾಡಲಾಗುತ್ತದೆ.


ಮಾವಿನ ಹಣ್ಣಿನ ತಳಿಗಳು:
ಬಾದಾಮಿ.ರಸಪೂರಿ.ತೋತಾಪುರಿ.ಐಶ್ವರ್ಯ.ಬೆನೆಶಾನ್.ನೀಲಂ.ಮಲಗೋವಾ.ಮಲ್ಲಿಕಾ.ದಶಹರಿ.ಕೇಸರ್.ಖಾದರ್.ನೀಲ್ಗೋವ.ರತ್ನ.ಆಮ್ರಪಾಲಿ.ನೀಲೇಶಾನ್.ಮುಂಡಪ್ಪ.ಕರಇಶಾಡ್.ಬೆನೆಟ್.

ಉಪ್ಪಿನಕಾಯಿ ತಳಿಗಳು:
ಅಪ್ಪೆಮಿಡಿ.ಆಮ್ಲೆಟ್.ಜೀರಿಗೆ.ಕೊಸಜಿಪಟೇಲ.

ಮಾವಿನ ಸಸಿಗಳ ನಾಟಿಯ ಅಂತರ :
ಇತ್ತೀಚೆಗೆ ಮಾವನ್ನು ಅಧಿಕ ಸಾಂದ್ರತೆಯಲ್ಲಿ ಕಡಿಮೆ ಅಂತರ ಕೊಟ್ಟು ಬೆಳೆಸುವದು ಜನಪ್ರಿಯವಾಗುತ್ತಿದೆ.ಇದರ ಅನುಕೂಲವೇನೆಂದರೆ ಪ್ರತಿ ಹೆಕ್ಟೆರ್ ಗೆ ನಾಟಿ ಮಾಡುವ ಸಸಿಗಳ ಸಂಕ್ಯೆ ಹೆಚ್ಚಿಸುವದು ಮತ್ತು ಇಳುವರಿ ಹೆಚ್ಚಿಸುವದು.ವಿಶೇಷವಾಗಿ ಎಲ್ಲಾ ತಳಿಗಳು ಅಧಿಕ ಸಾಂದ್ರತೆಗೆ ಒಗ್ಗುವದಿಲ್ಲ.ಕಡಿಮೆ ಸಾಂದ್ರತೆಗೆ ಹೊಂದುವಂತಹ ಗಿಡ್ಡ ತಳಿಗಳನ್ನೆ ಆರಿಸುವದು ಸೂಕ್ತ.
ಅಂತರ : 5 ಮೀ x 5 ಮೀ = 400 ಗಿಡ ಹೆಕ್ಟೇರ್ ಗೆ.
              8 ಮೀ x 8 ಮೀ = 156 ಗಿಡ ಹೆಕ್ಟೇರ್ ಗೆ.
              9 ಮೀ x 9 ಮೀ = 123 ಗಿಡ ಹೆಕ್ಟೇರು ಗೆ.
          10 ಮೀ x 10 ಮೀ = 100 ಗಿಡ ಹೆಕ್ಟೇರು ಗೆ.
          12 ಮೀ x 12 ಮೀ = 70 ಗಿಡ ಹೆಕ್ಟೇರು ಗೆ.
ಮಾವು ಸಸಿ ಬೇಸಾಯ ಕ್ರಮ :
ಭೂಮಿಯನ್ನು ಉಳುಮೆ ಮಾಡಿ ಸಿದ್ದಪಡಿಸಿಕೊಂಡು. 90 x 90 x 90 ಸೆಂ.ಮೀ ಗಾತ್ರದ ಗುಣಿಗಳನ್ನು ತೆಗೆದು ಪ್ರತಿ ಗುಣಿಗಳಿಗೂ 25 ಕಿ.ಗ್ರಾಂ ಕೊಟ್ಟಿಗೆ ಗೊಬ್ಬರ.2 ಕಿ.ಗ್ರಾಂ ಬೇವಿನ ಹಿಂಡಿ.ಮತ್ತು ಸಮ ಪ್ರಮಾಣದ ಮೇಲ್ಮಣ್ಣನ್ನು ಮಿಶ್ರಣ ಮಾಡಿದ ನಂತರ ಆರೋಗ್ಯಯುತ ಒಂದು ವರ್ಷ ಪ್ರಾಯದ ಉತ್ತಮವಾಗಿ ಕಸಿ ಕಣ್ಣು ಬೆಸೆದು ಕೊಂಡಂತಹ ಸಸಿಗಳನ್ನು ಗುಣಿಯ ಮದ್ಯಬಾಗದಲ್ಲಿ ಕಸಿ ಮಾಡಿದ ಬಾಗ ಭೂಮಿಯ ಮೇಲೆ ಇರುವಂತೆ ನಾಟಿ ಮಾಡಬೇಕು.ನಂತರ ಆಸರೆಗೆ ಕೋಲುಗಳನ್ನು ಕೊಟ್ಟು ಗಿಡಗಳನ್ನು ಕಟ್ಟಬೇಕು.ನಂತರ ನೀರನ್ನು ಒದಗಿಸಬೇಕು.

ಮಾವು ನಾಟಿಯ ನಂತರದ ನಿರ್ವಹಣೆ :
ನಾಟಿಯ ನಂತರ ಅಂತರ ಬೇಸಾಯದ ಜೊತೆ ಮಾವಿನ ತೋಟದಲ್ಲಿ ಉಪಬೆಳೆಗಾದ ತರಕಾರಿ.ಶೆಂಗಾ.ಹಲಸಂದೆ.ಈ ರೀತಿಯ ಮಾವಿನ ಗಿಡಗಳಿಗಿಂತ ಎತ್ತರ ಬೆಳೆಯದಂತಹ ಉಪ ಬೆಳೆಗಳನ್ನು ಬೆಳೆಯುವದರ ಜೊತೆಗೆ ಲಾಭವನ್ನು ಹೊಂದಬಹುದು.ಇದರಿಂದ ಕಳೆ ನಿರ್ಮೂಲನೆಯ ಜೊತೆ ಮಣ್ಣಿನ ಫಲವತ್ತತೆಗೂ ಸಹಕಾರಿಯಾಗುತ್ತದೆ.ಬೇಸಿಗೆಯಲ್ಲಿ ಗಿಡಗಳ ಸುತ್ತ ವ್ರುತ್ತಾಕಾರದಲ್ಲಿ ಪಾತಿಗಳನ್ನು ಮಾಡಿ ಕೊಟ್ಟಿಗೆ ಗೊಬ್ಬರ ಹಾಕಿ ಮಣ್ಣು ಮತ್ತು ಕ್ರುಷಿ ತ್ಯಾಜ್ಯ ಪದಾರ್ಥಗಳಿಂದ ಪಾತಿಯನ್ನು ಮುಚ್ಚಬೇಕು.ಕೊಟ್ಟಿಗೆ ಗೊಬ್ಬರ ಕೊಡುವದಕ್ಕು ಮೊದಲು ಅಥವ ತಿಂಗಳ ನಂತರ ಸಾರಜನಕ 75 ಕಿ.ಗ್ರಾಂ.ರಂಜಕ 20 ಕಿ.ಗ್ರಾಂ.70 ಕಿ.ಗ್ರಾಂ.ಮಿಶ್ರಣದ ಗೊಬ್ಬರವನ್ನು ಮೊದಲ ವರ್ಷದಲ್ಲಿ ಗಿಡಗಳ ಬುಡದಿಂದ ಒಂದು ಅಡಿ ದೂರದಲ್ಲಿ ನೀಡಬೇಕು.ಮೊದಲೆರಡು ವರ್ಷದಲ್ಲಿ ಬೇಸಿಗೆಯಲ್ಲಿ ಗಿಡಗಳಿಗೆ ನೀರನ್ನು ಅತ್ಯಾವಶ್ಯಕವಾಗಿ ಒದಗಿಸಬೇಕು.
 ಮಾವು ಇಳುವರಿ ಸುಧಾರಣ ಸೂತ್ರಗಳು:
ಮಾವಿನ ರೆಂಬೆಗಳು ಒತ್ತೊತ್ತಾಗಿ ಬೆಳೆದಾಗ ಕೆಲವೊಂದು ರೆಂಬೆಗಳನ್ನು ಕತ್ತರಿಸುವದರಿಂದ ಗಿಡಗಳ ಒಳಬಾಗಕ್ಕೆ ಗಾಳಿ ಬೆಳಕು ಹೇರಳವಾಗಿ ದೊರೆತು ರೋಗಗಳ ಬಾದೆ ಕಮ್ಮಿಯಾಗಿರುತ್ತದೆ.ಜೊತೆಗೆ ಉತ್ತಮ  ಗುಣಮಟ್ಟದ ಕಾಯಿಗಳು ದೊರೆಯುತ್ತವೆ.5 ರಿಂದ 6 ವರ್ಷವಾದಾಗ ಮದ್ಯದ ಒಂದೊಂದು ರೆಂಬೆಗಳನ್ನು ಕತ್ತರಿಸಿ ಗಾಳಿ ಬೆಳಕಿಗೆ ಅನುವು ಮಾಡಿಕೊಡಬೇಕು.ಕತ್ತರಿಸಿದ ರೆಂಬೆಗಳಿಗೆ ಶಿಲೀಂದ್ರನಾಶಕ ಮತ್ತು ಕೀಟನಾಶಕದ ಮುಲಾಮನ್ನು ಲೇಪಿಸುವದು ಅತ್ಯಾವಶ್ಯಕ.ಜೂನ್ ಮತ್ತು ಜುಲೈ ತಿಂಗಳು ಈ ಕೆಲಸಕ್ಕೆ ಸೂಕ್ತ ಕಾಲ.
ಕೆಲವು ಮಾವಿನ ತಳಿಗಳು ಎರಡು ವರ್ಷಕ್ಕೊಮ್ಮೆ ಹೆಚ್ಚು ಇಳುವರಿ ಕೊಟ್ಟು ಮದ್ಯ ವರ್ಷದಲ್ಲಿಜ ಇಳುವರಿ ಬಹಳ ಕಡಿಮೆ ಇರುತ್ತವೆ.ಇದು ಪ್ರಕ್ರುತಿದತ್ತ ನಿಯಮ ಇದನ್ನು ತಡೆಯಲು ಮಾವು ಹೂ ಬಿಡುವ ನೂರು ದಿನ ಮುಂಚೆ 5 ಮಿಲಿ 'ಪ್ಯಾಕ್ಲೋಬುಟ್ರಜಾಲ್ " ಸಂಯುಕ್ತ ವಸ್ತು ಹತ್ತು ಲೀಟರ್ ನೀರಿಗೆ ಬೆರೆಸಿ ಗಿಡಗಳ ಪಾತಿಯಲ್ಲಿ ಕಾಂಡದಿಂದ 90 ಸೆಂ.ಮೀ ದೂರದಲ್ಲಿ ಸುರಿಯುವದರಿಂದ ಪ್ರತಿ ವರ್ಷವೂ ಗಿಡಗಳು ಹೂ ಹಣ್ಣು ಬಿಡುವಂತೆ ಮಾಡಬಹುದು.ಸಾಮಾನ್ಯವಾಗಿ ಸೆಪ್ಟೆಂಬರ್ ಅಕ್ಟೋಬರ್ ಅಲ್ಲಿ ಈ ಕ್ರಿಯೆ ಅನುಸರಿಸುವದು ಸೂಕ್ತ. 

ಮಾವುನ ಬೆಳೆಗೆ ತಗುಲುವ ರೋಗಗಳು:
ಮಾವಿನ ಬೆಳೆಯಲ್ಲಿ ಸಾಮಾನ್ಯವಾಗಿ ಜಿಗಿಹುಳು.ಹಿಟ್ಟು ತಿಗಣೆ.ಎಲೆಗಂಟು.ರೆಂಬೆಕುಡಿ ಕೊರಕ.ಓಟೆಕೊರಕ.ಹಣ್ಣಿನ ನೊಣ.ಎಲೆ ತಿನ್ನುವ ಹುಳು.ಶಲ್ಕ ಕೀಟ.ಕಾಂಡಕೊರಕ.ನುಸಿ.ಕೆಂಪು ಇರುವೆ.ಬೂದಿರೋಗ.ಚಿಬ್ಬುರೋಗ.ದುಂಡಾಣು ಎಲೆಚುಕ್ಕೆ ರೋಗ.ಹೂ ಅಂಗಮಾರಿ.ವಿಕಾರತೆ.ಇಂತಹ ರೋಗಗಳು ಸಾಮಾನ್ಯ.ಕಾಲ ಕಾಲಕ್ಕೆ ತಗುಲುವ ರೋಗಲಕ್ಷಣಕ್ಕೆ ಅನುಸಾರವಾಗಿ ನುರಿತ ತಙ್ನರ ಸಲಹೆ ಮೇರೆಗೆ ರೋಗ ಹತೋಟಿ ಮಾಡುವದರಿಂದ ಉತ್ತಮ ಕಾಯಿ.ಹಣ್ಣು.ಇಳುವರಿಯನ್ನು ಹೊಂದಬಹುದು.
ಕೊಯ್ಲು ಮತ್ತು ಇಳುವರಿ:
ಕಸಿ ಗಿಡಗಳು ನಾಟಿ ಮಾಡಿದ ಎರಡನೇ ವರ್ಷದಿಂದ ಹೂ ಬಿಡಲು ಪ್ರಾರಂಬಿಸುತ್ತವೆ ಆದರೂ 4 ವರ್ಷದ ನಂತರ ನಿಯಮಿತ ಹಣ್ಣು ಬಿಡುವದನ್ನು ಪ್ರೋತ್ಸಾಹಿಸಬೇಕು.ಹತ್ತು ವರ್ಷದ ನಂತರ ಗರಿಷ್ಠ ಇಳುವರಿಯನ್ನು ಪಡೆಯಬಹುದು.
ಮೊದಲ ನೇ 5 ರಿಂದ 10 ವರ್ಷದಲ್ಲಿ ಪ್ರತಿ ಗಿಡಕ್ಕೆ 50 ರಿಂದ 400 ಕಾಯಿಯವರೆಗೂ ಪ್ರತಿ ಹೆಕ್ಟೇರು ಗೆ 10 ರಿಂದ 100 ಕ್ವಿಂಟಾಲ್ ವರೆಗೂ ಪಡೆಯಬಹುದು.
20 ವರ್ಷದ ನಂತರ ಪ್ರತಿ ಮರದಿಂದ 1500 ಕ್ಕೂ ಹೆಚ್ಚು ಕಾಯಿ ಅಂದರೆ ಪ್ರತಿ ಹೆಕ್ಟೇರ್ ಗೆ 300 ಕ್ವಿಂಟಾಲ್ ವರೆಗೂ ಇಳುವರಿ ಪಡೆಯಬಹುದು.

ವಿಷೇಶ ಸೂಚನೆ : ಸೂಚಿಸಿರುವ ಇಳುವರಿ ಪ್ರತಿ ಹೆಕ್ಟೇರ್ ಗೆ ನಾಟಿ ಮಾಡಿರುವ ಗಿಡಗಳ ಅಂತರದ ಮೇಲೆ ವ್ಯತ್ಯಾಸವಿರುತ್ತದೆ.

ಬುಧವಾರ, ಜೂನ್ 16, 2021

ಕಲ್ಲಂಗಡಿ ಹಣ್ಣಿನ ಕ್ರುಷಿ.

ಕಲ್ಲಂಗಡಿಯನ್ನು ಕರ್ನಾಟಕದ ಬಹುತೇಕ ಎಲ್ಲಾ ಬಾಗದಲ್ಲಿ ಬೆಳೆಯಬಹುದು.ಕಾಯಿ ಹಣ್ಣಾಗುವ ಸಮಯದಲ್ಲಿ ಒಣ ಹವೆ ಇದ್ದರೆ ಸಕ್ಕರೆ ಅಂಶ ಹೆಚ್ಚಾಗಿರುತ್ತದೆ.

ಕಲ್ಲಂಗಡಿ ಬಳ್ಳಿ ಜಾತಿಯ ಬೆಳೆಯಾದ್ದರಿಂದ ನೀರು ಬಸಿದು ಹೋಗುವ ಮರಳು ಮಣ್ಣು.ಮರಳು ಮಿಶ್ರಿತ ಗೋಡು ಮಣ್ಣು.ನದಿ ತೀರದ ಪ್ರದೇಶದ ಭೂಮಿ ಸೂಕ್ತ.ಹೆಚ್ಚು ಹುಳಿ ಮತ್ತು ಕ್ಷಾರೀಯ ಗುಣದ ಮಣ್ಣು ಈ ಬೆಳೆಗೆ ಸೂಕ್ತವಲ್ಲ.  

ಕಲ್ಲಂಗಡಿ ತಳಿಗಳು:ಅರ್ಕಾ ಮಾಣಿಕ್.ಶುಗರ್ ಬೇಬಿ.ಆರ್ಕಾ ಮುತ್ತು.ಇನ್ನು ಮುಂತಾದವು.
ಎಕ್ಕರೆಗೆ 450 ಗ್ರಾಂ ನಿಂದ 600 ಗ್ರಾಂ ಬೀಜ ಬಿತ್ತನೆಗೆ ಬೇಕಾಗುತ್ತದೆ.

ಕಲ್ಲಂಗಡಿ ಬಿತ್ತನೆ ಪದ್ದತಿ : 
ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಿ ಪ್ರತಿ ಹೆಕ್ಟೇರ್  ಗೆ  25 ರಿಂದ 30 ಟನ್ ಕೊಟ್ಟಿಗೆ ಗೊಬ್ಬರವನ್ನು ಮಣ್ಣಿಗೆ ಬೆರೆಸಬೇಕು.ನಂತರ 50 ಕಿ ಗ್ರಾಂ ಸಾರಜನಕ.80 ಕಿ ಗ್ರಾಂ ರಂಜಕ.ಹಾಗೂ 100 ಕಿ ಗ್ರಾಂ ಪೊಟ್ಯಾಶ್ ಗೊಬ್ಬರವನ್ನು ಮಣ್ಣಿಗೆ ಬೆರೆಸಿ ಸಾಲಿನಿಂದ ಸಾಲಿಗೆ  3 ಮೀ ಬೀಜದಿಂದ ಬೀಜಕ್ಕೆ 1 ಮೀ ಅಂತರದಲ್ಲಿ ಪ್ರತಿ ಗುಣಿಯಲ್ಲಿ ಎರಡು ಬೀಜಗಳನ್ನ ಊರಬೇಕು.ಬಿತ್ತನೆ ಮಾಡಿದ 3 ವಾರಗಳ ನಂತರ ಕಳೆ ನಿರ್ಮೂಲನೆ ಮಾಡಿ 50 ಕಿ ಗ್ರಾಂ ಸಾರಜನಕ.25 ಕಿ ಗ್ರಾಂ ಪೊಟ್ಯಾಶ್ ಗೊಬ್ಬರವನ್ನು ಬಳ್ಳಿಯಿಂದ 15 ಸೆಂ ಮೀ ದೂರದಲ್ಲಿ ನೀಡಬೇಕು.ನೀರಾವರಿಯಲ್ಲಿ ಸಾಲು ನೀರಾವರಿ.ಹನಿ ನೀರಾವರಿ ಉತ್ತಮ ಸ್ಪಿಂಕ್ಲರ್ ನೀರಾವರಿ ಈ ಬೆಳೆಗೆ ಸೂಕ್ತವಲ್ಲ.

ಬೀಜ ಹಾಕಿದ  20 ದಿನಗಳ ನಂತರ ಬಳ್ಳಿಯ ಕುಡಿ ಮುರಿಯುವದರಿಂದ ಹೆಚ್ಚು ಹರೆಗಳು ಒಡೆಯುತ್ತದೆ.11 ನೇ ಗಣ್ಣಿಗಿಂತ ಮೊದಲು ಬರುವ ಹೂವುಗಳನ್ನ ಚಿವುಟುವದರಿಂದ ಬಳ್ಳಿಯ ಬೆಳವಣಿಗೆ ಸದ್ರುಡವಾಗುವುದು.ಬಳ್ಳಿಯಲ್ಲಿ ಅವಶ್ಯಕತೆಗಿಂತ ಹೆಚ್ಚಿಗೆ ಕಾಯಿಗಳಿದ್ದರೆ  2 ಅಥವ 3 ಕಾಯಿ ಉಳಿಸಿ ಉಳಿದ ಕಾಯಿಗಳನ್ನ ತೆಗುಯುವದರಿಂದ ಕಾಯಿಯ ಗಾತ್ರ ಹೆಚ್ಚುವದು.ಸಸ್ಯ ಪ್ರಚೋದಕವಾಗಿ ಗಿಬ್ಬರ್ಲಿಕ್  ಆಮ್ಲವನ್ನು ಬಳಸುವದರಿಂದ ಒಳ್ಳೆಯ ಗುಣಮಟ್ಟದ ಕಾಯಿ ಲಬಿಸುವದು.
ಕಲ್ಲಂಗಡಿ ಬೆಳೆಗೆ ತಗುಲುವ ರೋಗಗಳು:
ದುಂಬಿ.ಹೇನು.ನುಸಿ.ನೊಣ.ಎಲೆ ಸುರಂಗ ಕೀಟ.ಬೂದಿರೋಗ.ಸುಳಿನಂಜು.ಚಿಬ್ಬುರೋಗ.ಸೊರಗು ರೋಗ ಸಾಮಾನ್ಯ ರೋಗಗಳು.
ಕಾಲ ಕಾಲಕ್ಕೆ ರೋಗಕ್ಕೆ ಅನುಗುಣವಾಗಿ ತಙ್ನರ ಸಲಹೆ ಮೇರೆಗೆ ಓಷದಿ ಸಿಂಪಡಣೆ ಮಾಡುವದರಿಂದ ರೋಗಗಳ ಹತೋಟಿ ಮಡಬಹುದು.
ಕೊಯ್ಲು ಮತ್ತು ಇಳುವರಿ:
ಬಳ್ಳಿ ನಾಟಿ ಮಾಡಿದ ದಿನದಿಂದ 70 ರಿಂದ 80 ನೇ ದಿನಕ್ಕೆ ಕಟಾವಿಗೆ ಬರುತ್ತದೆ.ಕಟಾವಿಗೆ ಬಂದ ಕಾಯಿಯ ತೊಟ್ಟು ಒಣಗುವದರ ಜೊತೆ ಕಾಯಿಯ ತಳ ಬಾಗ ಹಳದಿ ಬಣ್ಣಕ್ಕೆ ತಿರುಗುತ್ತದೆ ಅಂತಹ ಕಾಯಿಗಳು ಕೊಯ್ಲು ಮಾಡಲು ಸೂಕ್ತ.ಪ್ರತಿ ಹೆಕ್ಟೆರ್ ಗೆ 50 ರಿಂದ 60 ಟನ್ ಇಳುವರಿ ಪಡೆಯಬಹುದು.

ಬಾಳೆ ಕ್ರುಷಿ

ಬಾಳೆ ಒಂದು ಬಹುಜನಪ್ರಿಯ ಹಣ್ಣಿನ ಬೆಳೆ ಮಾವಿನಹಣ್ಣಿನ ನಂತರದ ಸ್ಥಾನ ಬಾಳೆ ಹಣ್ಣಿಗೆ ಲಭಿಸುತ್ತದೆ.ಭಾರತದಲ್ಲಿ 50 ಕ್ಕೂ ಹೆಚ್ಚು ತಳಿಗಳಿದ್ದು ಅವು ವಿವಿಧ ಭಾಗದಲ್ಲಿ ಬೆಳೆ...