expr:class='"loading" + data:blog.mobileClass'>

ಶನಿವಾರ, ಜೂನ್ 12, 2021

ರೈತರ ಆರ್ಥಿಕತೆ ಮತ್ತು ಕ್ರುಷಿ.

ಎರಡನೆ ಹಸಿರು ಕ್ರಾಂತಿಗೂ ಮೊದಲು ರೈತರು ಕ್ರುಷಿ ಜೀವನ ನೆಮ್ಮದಿಯಾಗಿತ್ತು ಕಾರಣ ಆಗ ಕ್ರುಷಿಯನ್ನ ರೈತರು ಕೇವಲ ತಮ್ಮ ಅವಶ್ಯಕತೆಗಾಗಿ ಮಾತ್ರ ಮಾಡುತ್ತಿದ್ದರು ಆಗ ಅವಿಭಕ್ತ ಕುಟುಂಬಗಳೆ ಹೆಚ್ಚು ಮನೆ ತುಂಬಾ ಜನ.ದನ.ಕರು.ಎಲ್ಲಾ ಕುಟುಂಬ ಸದಸ್ಯರು ಕ್ರುಷಿ ಚಟುವಟಿಕೆಗಳಲ್ಲಿ ಪಾಲುಗೊಳ್ಳುತ್ತಿದ್ದರು ತಮ್ಮ ಜೀವನಾವಶ್ಯಕ ದಾನ್ಯಗಳನ್ನ ತಾವೆ ಬೆಳೆದು ಕೊಳ್ಳುತ್ತಿದ್ದರು.ಅವರ ಅವಶ್ಯಕತೆಗಿಂತ ಹೆಚ್ಚಾಗಿ ಉಳಿದರೆ ಮಾತ್ರ ಮಾರಾಟ ಮಾಡುತ್ತಿದ್ದರು.ಅವರು ತಮ್ಮ ಕ್ರುಷಿಗೆ ಬೇಕಾದ ನಾಟಿ ತಳಿ ಬೀಜಗಳನ್ನ ತಾವೆ ಸಂಗ್ರಹಿಸಿ ಇಡುತ್ತಿದ್ದರು.ಮನೆಯ ದನ.ಕರುಗಳ ಸೆಗಣಿ ಗೊಬ್ಬರವನ್ನೆ ಬಳಸುತ್ತಿದ್ದರು.ಹಾಗಾಗಿ ಕ್ರುಷಿಗೆ ಮೂಲ ಬಂಡವಾಳವೆಂದು ಅವರು ಎಂದೂ ಸಾಲ ಮಾಡುತ್ತಿರಲಿಲ್ಲ.ಹಾಗೂ ಅವರ ಜೀವನಾವಶ್ಯಕತೆಗಳು ಕಡಿಮೆ ಇದ್ದವು.
ಕಾಲಾನಂತರ ಎರಡನೇ ಹಸಿರು ಕ್ರಾಂತಿಯ ನಂತರ ದೊಡ್ಡ ದೊಡ್ಡ ವಾಣಿಜ್ಯ ಕಂಪೆನಿಗಳು ರೈತನಿಗೆ ಅಬಿವ್ರುದ್ದಿ ತಳಿಗಳು.ರಾಸಾಯನಿಕ ಗೊಬ್ಬರಗಳು.ಓಷದಗಳು.ಯಂತ್ರಗಳನ್ನು ಪರಿಚಯಿಸುವದರ ಜೊತೆಗೆ ರೈತನಲ್ಲಿ ಅಧಿಕ ಬೆಳೆಯಿಂದ ಅಧಿಕ ಹಣಗಳಿಸಬಹುದೆಂಬ ಆಮೀಷಕ್ಕೆ ಕೆಡವಿದವು.ಕಾಲ ಮುಂದುವರಿದಂತೆ ರೈತನ ಮೂಲ ಜೀವನಾವಶ್ಯಕತೆಗಳು ಹೆಚ್ಚಾಗಿದ್ದವು.ಮೂಲ ಕ್ರುಷಿ ಪದ್ದತಿ ನಾಟಿ ತಳಿಗಳಿಂದ ಬರುವ ಇಳುವರಿಗಳಿಂದ ಅವನ ಜೀವನ ನಿರ್ವಹಣೆ ಕಷ್ಟವಾಗಿತ್ತು.ಹಾಗಾಗಿ ರೈತರು ಬಹು ಬೇಗ ಕಂಪೆನಿಗಳ ಅಧಿಕ ಇಳುವರಿ ತಳಿಗಳಿಗೆ ರೈತರು ಮಾರು ಹೋದರು.ಕಂಪೆನಿಗಳ ಉತ್ಪನ್ನಗಳ ಖರೀದಿ ಇಂದ ಕ್ರುಷಿಯ ಮೂಲ ಬಂಡವಾಳ ಹೆಚ್ಚಾಗುತ್ತಾ ಹೋಯಿತು.ಆ ಬಂಡವಾಳವನ್ನು ಒದಗಿಸಲು ಹತ್ತಾರು ಸರಕಾರಿ.ಮತ್ತು ಖಾಸಗಿ ಹಣಕಾಸು ಸಂಸ್ಥೆಗಳು ಹುಟ್ಟಿಕೊಂಡವು.
ಸರ್ಕಾರ  ಮತ್ತು ಖಾಸಗಿ ಭ್ಯಾಂಕುಗಳ ಸಾಲ ಪಡೆದ ರೈತ ಅದನ್ನು ಬಹುರಾಷ್ಟ್ರೀಯ ಕಂಪೆನಿಗಳ ಬೀಜ.ಗೊಬ್ಬರ.ಓಷದ.ಯಂತ್ರ.ಸಲಕರಣೆಗಳ ಖರೀದಿಸುವದರ ಜೊತೆಗೆ ಬಹುರಾಷ್ಟ್ರೀಯ ಕಂಪೆನಿಗಳನ್ನು ಬೆಳೆಸಿದನೆ ಹೊರತು ರೈತ ಮಾತ್ರ ಆರ್ಥಿಕವಾಗಿ ಬೆಳೆಯಲೆ ಇಲ್ಲ.ರೈತನ ಆದಾಯವನ್ನು ಸುಧಾರಿಸುವ ನಿಟ್ಟಿನಲ್ಲಿ ಸರ್ಕಾರಗಳು ಪಾತ್ರವಹಿಸಲಿಲ್ಲ ಬದಲಾಗಿ ಸರ್ಕಾರಗಳು ಆ ಬಹುರಾಷ್ಟ್ರೀಯ ಕಂಪೆನಿಗಳ ಬೆಳೆವಣಿಗೆಗೆ  ಉತ್ತೇಜನ ನೀಡಿದವು.
ಇನ್ನೊಂದು ಕಡೆ  ಕಾಲ ಕಾಲಕ್ಕೆ ಸರಿಯಾಗಿ ಆಗದ ಮಳೆ.ಒಂದು ಕಡೆ ನೆರೆ.ಇನ್ನೊಂದು ಕಡೆ ಬರ.ನೆರೆ ಬರ ಎಲ್ಲವನ್ನು ಎದುರಿಸಿ ಯಶಸ್ವಿ ಬೆಳೆ ಬೆಳೆದರು ದಲ್ಲಾಳಿಗಳ ಕಾಟ ಬೆಲೆ ಕುಸಿತ.ರೈತ ತನ್ನ ಜೀವನಾವಶ್ಯಕತೆಯ ಆರ್ಥಿಕ ಭದ್ರತೆಗೆಂದು  ಕಡಿಮೆ ಬಂಡವಾಳದ ಸಾಂಪ್ರಧಾಯಿಕ ಕ್ರುಷಿ ಇಂದ ವಿಮುಕನಾಗಿ ಹೆಚ್ಚು ಬಂಡವಾಳ ಬೇಡುವ  ಆಧುನಿಕ ಕ್ರುಷಿಯೆಡೆಗೆ ಬಂದು ಇತ್ತಾ ಆರ್ಥಿಕ ಭದ್ರತೆಯೂ ಇಲ್ಲದೆ  ಪುನಃ ಸಾಂಪ್ರದಾಯಿಕ ಕ್ರುಷಿಯೆಡೆಗೆ ಮರಳಲೂ ಆಗದೆ.ತನ್ನ ಜೀವಮಾನದ ದುಡಿಮೆಯೆಲ್ಲಾ ಬಹುರಾಷ್ಟ್ರೀಯ ಕಂಪೆನಿಗಳಿಗಾಗಿ ದುಡಿಯುವಂತಾಗಿರುವದು ದೊಡ್ಡ ವಿಪರ್ಯಾಸ.
ಮೂಲ ಕ್ರುಷಿ ಪದ್ದತಿಯನ್ನೆ ತಿಳಿಯದ ಇಂದಿನ ಯುವ ಕ್ರುಷಿಕರು ಅಧಿಕ ಸಂಪಾಧನೆ ಆಸೆಯಿಂದ ವಾಣಿಜ್ಯ ಬೆಳೆಗಳನ್ನ ಬೆಳೆಯುವ ತವಕದಲ್ಲಿ ಕಂಪೆನಿ ರಾಸಾಯನಿಕ ಗೊಬ್ಬರ.ಓಷದಗಳನ್ನ ಬಳಸುವದರ ಜೊತೆ ಹೆಚ್ಚು ಹೆಚ್ಚು ಸಾಲಗಾರರಾಗಿ ಅತ್ತ ಬೆಳೆಯೂ ಇಲ್ಲ ಇತ್ತ ಲಾಭವೂ ಇಲ್ಲ ಎನ್ನುವಂತಾಗಿ ಕ್ರುಷಿಯಿಂದ ವಿಮುಕರಾಗುತ್ತಿದ್ದಾರೆ.

ಕಾಮೆಂಟ್‌ಗಳಿಲ್ಲ:

ಬಾಳೆ ಕ್ರುಷಿ

ಬಾಳೆ ಒಂದು ಬಹುಜನಪ್ರಿಯ ಹಣ್ಣಿನ ಬೆಳೆ ಮಾವಿನಹಣ್ಣಿನ ನಂತರದ ಸ್ಥಾನ ಬಾಳೆ ಹಣ್ಣಿಗೆ ಲಭಿಸುತ್ತದೆ.ಭಾರತದಲ್ಲಿ 50 ಕ್ಕೂ ಹೆಚ್ಚು ತಳಿಗಳಿದ್ದು ಅವು ವಿವಿಧ ಭಾಗದಲ್ಲಿ ಬೆಳೆ...