ಮೆಣಸಿನಕಾಯಿ ಬೆಳೆಯನ್ನು.ಬೇಸಿಗೆ ಮತ್ತು ಮಳೆಗಾಲ ಮತ್ತು ಚಳಿಗಾಲ ಮೂರು ಹವಾಮಾನದಲ್ಲೂ ಬೆಳೆಯಬಹುದು.ಖುಷ್ಕಿ ಬೆಳೆಯಾಗಿ ಮೇ _ ಜೂನ್.ಅಲ್ಲಿ.ನೀರಾವರಿ ಬೆಳೆಯಾಗಿ ಅಕ್ಟೋಬರ್ _ ನವೆಂಬರ್ . ಮತ್ತು ಜನವರಿ _ ಫೆಬ್ರವರಿ ತಿಂಗಳುಗಳು ಸೂಕ್ತವಾದ ಕಾಲ.
ಮೆಣಸಿನ ಕಾಯಿಯಲ್ಲಿ ಸ್ಥಳೀಯ ತಳಿಗಳು:
ಬ್ಯಾಡಗಿ ಕಡ್ಡಿ.ಬ್ಯಾಡಗಿ ಡಬ್ಬಿ.ಕೊಳ್ಳೆಗಾಲ.ದ್ಯಾವನೂರು.ಗುಂಟೂರು.ಗೊರಿಬಿದನೂರು.ಸಂಕೇಶ್ವರ.ಕಾದರೊಳಿ.ಚಿಂಚೊಳಿ.ಪೂಸಾ ಜ್ವಾಲ.ಬಾಗ್ಯಲಕ್ಷ್ಮಿ.ಆರ್ಕಾ ತಳಿಗಳು ಉತ್ತಮ.
ಮೆಣಸಿನಕಾಯಿ ನಾಟಿ ವಿಧಾನ:
ಆಳವಾಗಿ ಉಳುಮೆ ಮಾಡಿದ ಭೂಮಿಯನ್ನು ಸಿದ್ದಪಡಿಸಿಕೊಂಡು 75ಸೆಂ ಮೀ ಅಂತರದಲ್ಲಿ ಎತ್ತರಕ್ಕೆ ಮಣ್ಣು ಹೇರುವಂತೆ ಸಾಲು ಮಾಡಿ ಸಾಲಿನಲ್ಲಿ ಕೊಟ್ಟಿಗೆ ಗೊಬ್ಬರ ಹಾಕಿ ಶೇ.50 ಸಾರಜನಕ.ರಂಜಕ.ಪೊಟ್ಯಾಷ್ ಗೊಬ್ಬರವನ್ನು ಹಾಕಿ ನೀರು ಹಾಸಿ ನಂತರ ಗಿಡದಿಂದ ಗಿಡಕ್ಕೆ 45 ಸೆಂ.ಮೀ. ಅಂತರದಲ್ಲಿ ಸಾಲಿನ ಎತ್ತರದ ಮಣ್ಣಿನ ಮೇಲೆ ನಾಟಿ ಮಾಡಿ.
ನೀರಾವರಿ:
ಮಣ್ಣು ಹಾಗು ಹವಾಗುಣವನ್ನಾದರಿಸಿ ಕಪ್ಪು ಮಣ್ಣಿನಲ್ಲಿ 15 ದಿನಕ್ಕೊಮ್ಮೆ.ಕೆಂಪು ಮಣ್ಣಿನಲ್ಲಿ 5 ರಿಂದ 8 ದಿನಕ್ಕೊಮ್ಮೆ ನೀರು ಕೊಡಬಹುದು.
ನಂತರ ಕಳೆ ನಿರ್ವಹಣೆ ಮಾಡಿ ಮೇಲು ಗೊಬ್ಬರವಾಗಿ ಶೇ.50 ರಷ್ಟು ಸಾರಜನಕ.ರಂಜಕ .ಪೊಟ್ಯಾಷ್ ಗೊಬ್ಬರವನ್ನು ಕೊಟ್ಟು ಗಿಡಗಳ ಬುಡಕ್ಕೆ ಮಣ್ಣನ್ನು ಹೇರಬೇಕು.
ಕೀಟ ಮತ್ತು ರೋಗಗಳು:
ಥ್ರಿಪ್ಸ್.ನುಸಿ.ಹೇನು.ಜೇಡ.ಬಿಳಿನೊಣ.ಸಸಿ ಕತ್ತರಿಸುವ ಹುಳು.ಕಾಯಿ ಕೊರಕ.ಸಸಿ ಕೊಳೆ.ಎಲೆ ಚುಕ್ಕಿ.ಬೂದಿರೋಗ.ಹಣ್ಣುಕೊಳೆ ರೋಗ.ಎಲೆ ಮುಟುರು.ಚಿಬ್ಬುರೋಗ.ಹಲವಾರು ರೋಗಗಳಿದ್ದು ಕಾಲ ಕಾಲಕ್ಕೆ ಆ ರೋಗಗಳಿಗೆ ತಜ್ಞರ ಸಲಹೆಯಂತೆ ರೋಗ ನಿಯಂತ್ರಣ ಮಾಡಿದರೆ ಅಧಿಕ ಇಳುವರಿ ಪಡೆಯಬಹುದು.
ಮೆಣಸಿನಕಾಯಿ ಕೊಯ್ಲು:
ನಾಟಿ ಮಾಡಿದ 60 ರಿಂದ 70 ದಿನದಲ್ಲಿ ಹಸಿಕಾಯಿಗಳ ಕೊಯ್ಲು ಮಾಡಬಹುದು.ನಾಟಿ ಮಾಡಿದ 90 ರಿಂದ 110 ದಿನಗಳವರೆಗೆ ಒಣ ಕಾಯಿಗಳನ್ನ ಕೊಯ್ಲು ಮಾಡಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ