expr:class='"loading" + data:blog.mobileClass'>

ಮಂಗಳವಾರ, ಜೂನ್ 22, 2021

ಬೆಂಡೆಕಾಯಿ ಬೆಳೆ ಮಾಹಿತಿ.

ಬೆಂಡೆಕಾಯಿ ನಮ್ಮ ರಾಜ್ಯದ ಪ್ರಮುಖ ತರಕಾರಿ ಬೆಳೆಗಳಲ್ಲಿ ಒಂದು.ಇದು ನಮ್ಮ ದೇಹಕ್ಕೆ ಬೇಕಾದ ವಿಟಮಿನ್ 'ಸಿ" ಜೀವಸತ್ವ ಮತ್ತು ಐಯೋಡಿನ್.ಹಾಗು ಕ್ಯಾಲ್ಸಿಯಂ ಗಳನ್ನು ಹೇರಳವಾಗಿ ಒದಗಿಸುತ್ತದೆ.
ಬೆಂಡೆಯ ಬೆಳೆಗೆ ಮಣ್ಣಿನ ರಸಸಾರ 6 ರಿಂದ 6.8 ಇರಬೇಕಾಗುತ್ತದೆ.ವಾರ್ಷಿಕ ಸರಾಸರಿ 450 ರಿಂದ 650 ಮಿ.ಮೀ ಮಳೆ ಬೀಳುವ ಪ್ರದೇಶ ಹಾಗೂ ಸರಾಗವಾಗಿ ನೀರು ಬಸಿದು ಹೋಗುವ ಎಲ್ಲಾ ಮಣ್ಣಿನಲ್ಲೂ ಬೆಳೆಯ ಬಹುದಾದರೂ ಎರೆ ಭೂಮಿ ಹಾಗೂ ಮರಳು ಮಿಶ್ರಿತ ಗೋಡು ಮಣ್ಣಿನಲ್ಲಿ ಉತ್ತಮ ಬೆಳೆಯನ್ನು ನಿರೀಕ್ಷಿಸಬಹುದು.
 ಬೆಂಡೆಕಾಯಿ ಬಿತ್ತನೆ ಕಾಲ : ಜೂನ್ ಮತ್ತು ಜುಲೈ .ಹಾಗು ಜನೆವರಿ ಮತ್ತು ಫೆಬ್ರವರಿ ಬಿತ್ತನೆಗೆ ಸೂಕ್ತವಾದ ಕಾಲ.ರಾತ್ರಿಯ ವಾತಾವರಣದಲ್ಲಿ ಉಷ್ಣಾಂಶವು 100 ಸೆ. ಗಿಂತ ಕಡಿಮೆಯಾದ ಸಂದರ್ಭದಲ್ಲಿ ಬೀಜ ಸರಿಯಾಗಿ ಮೊಳಕೆ ಹೊಡೆಯದೆ ಬೆಳೆಯ ಬೆಳವಣಿಗೆಯ ಮೇಲೆ ಅಡ್ಡ ಪರಿಣಾಮಗಳಾಗುತ್ತದೆ.
ಬೆಂಡೆಕಾಯಿ ತಳಿಗಳು : ಆರ್ಕಾ ಅಭಯ್.ಪೂಸಾ ಸವಾನಿ.ವಯ್ಟ್ ವೆಲ್ವೆಟ್ (ಹಾಲು ಬೆಂಡೆ).ಪರ್ಬಾನಿ ಕ್ರಾಂತಿ.ಆರ್ಕಾ ಅನಾಮಿಕ.ಮುಂತಾದವು.
ಬೆಂಡೆಕಾಯಿ ಬಿತ್ತನೆ : ಭೂಮಿಯನ್ನು ಉಳುಮೆ ಮಾಡಿ ಹೆಂಡೆ ಒಡೆದು ಸಣ್ಣ ಮಣ್ಣು ಮಾಡಿ 60 ಸೆಂ.ಮೀ ಅಂತರದ ಸಾಲುಗಳನ್ನು ಮಾಡಿ ಸಾಲಿನಲ್ಲಿ ಸಾವಯವ ಕೊಟ್ಟಿಗೆ ಗೊಬ್ಬರ ಬೆರೆಸಿ.ನಂತರ 150 ಕಿ. ಗ್ರಾಂ ಸಾರಜನಕ .75 ಕಿ.ಗ್ರಾಂ ರಂಜಕ.50 ಕಿ.ಗ್ರಾಂ ಪೊಟ್ಯಾಶ್ ಮಿಶ್ರಣ ಮಾಡಿದ ಗೊಬ್ಬರದ ಶೇ.50 ಗೊಬ್ಬರವನ್ನು ಸಾಲಿನಲ್ಲಿ ಮಣ್ಣಿಗೆ ಬೆರೆಸಿ.ನೀರು ಬಿಟ್ಟು ನಂತರ ಬೀಜದಿಂದ ಬೀಜಕ್ಕೆ 30 ಸೆಂ.ಮೀ ಅಂತರದಲ್ಲಿ ಬೀಜವನ್ನು ಊರಿಸಬೇಕು.ನಂತರ ಸ್ಥಳೀಯ ಮತ್ತು ಮಣ್ಣಿನ ವಾತಾರಣಕ್ಕೆ ಅನುಗುಣವಾಗಿ 3 ರಿಂದ 5 ದಿನಕ್ಕೊಮ್ಮೆ ನೀರು ಬಿಡಬೇಕು.ನಂತರ ಬಿತ್ತಿದ 20 ರಿಂದ 30 ದಿನದೊಳಗೆ ಅಂತರ ಬೇಸಾಯ.ಕಳೆನಿರ್ಮೂಲನೆ ಮಾಡಿ ಉಳಿದ ಶೇ 50 ಗೊಬ್ಬರವನ್ನು ಮೇಲು ಗೊಬ್ಬರವಾಗಿ ನೀಡಿ ಸಸಿಗಳ ಬುಡಕ್ಕೆ ಮಣ್ಣು ಹೇರಿ ಕೊಡಬೇಕು.
ಬೆಂಡೆಕಾಯಿ ಬೆಳೆಗೆ ತಗುಲುವ ರೋಗಗಳು : 
ಬಿಳಿ ನೊಣ.ಜಿಗಿ ಹುಳು.ಥ್ರಿಪ್ಸ್ ನುಸಿ.ಮಯ್ಟ್ ನುಸಿ.ರೆಂಬೆ ಕೊರೆಯುವ ಹುಳು.ಕಾಯಿ ಕೊರಕ ಹುಳು.ಹಳದಿ ನಂಜು.ಬೂದಿರೋಗ.ಎಲೆಚುಕ್ಕೆ.ಗಂಟುಬೇರು ರೋಗ.ಈ ಎಲ್ಲಾ ರೋಗ ಲಕ್ಷಣಗಳ ಕಂಡ ತಕ್ಷಣ ತಙ್ನರ ಸಲಹೆ ಮೇರೆಗೆ ರೋಗಗಳನ್ನ ಹತೋಟಿ ಮಾಡಿದರೆ ಉತ್ತಮ ಇಳುವರಿ ಲಭಿಸುತ್ತದೆ.
ಕೊಯ್ಲು ಮತ್ತು ಇಳುವರಿ : 
ಬಿತ್ತಿದ 45 ರಿಂದ 65 ನೇ ದಿನಕ್ಕೆ ಮೊದಲ ಬಾರಿ ಕೊಯ್ಲು ಬರುತ್ತದೆ.ನಂತರ ಪ್ರತಿ 2 ರಿಂದ 3 ದಿನಕ್ಕೊಮ್ಮೆ ಎಳೆ ಹಸಿರು ಕಾಯಿಗಳ ದೊರೆಯುತ್ತವೆ.ನಂತರ 4 ರಿಂದ 6 ವಾರಗಳ ವರೆಗೆ ನಿರಂತರ ಕೊಯ್ಲು ಮಾಡಬಹುದು.ಪ್ರತಿ ಹೆಕ್ಟೇರ್ ಗೆ ತಳಿಗಳಿಗೆ ಅನುಗುಣವಾಗಿ 15 ರಿಂದ 20 ಟನ್ ಇಳುವರಿ ಪಡೆಯಬಹುದು.

ಕಾಮೆಂಟ್‌ಗಳಿಲ್ಲ:

ಬಾಳೆ ಕ್ರುಷಿ

ಬಾಳೆ ಒಂದು ಬಹುಜನಪ್ರಿಯ ಹಣ್ಣಿನ ಬೆಳೆ ಮಾವಿನಹಣ್ಣಿನ ನಂತರದ ಸ್ಥಾನ ಬಾಳೆ ಹಣ್ಣಿಗೆ ಲಭಿಸುತ್ತದೆ.ಭಾರತದಲ್ಲಿ 50 ಕ್ಕೂ ಹೆಚ್ಚು ತಳಿಗಳಿದ್ದು ಅವು ವಿವಿಧ ಭಾಗದಲ್ಲಿ ಬೆಳೆ...