expr:class='"loading" + data:blog.mobileClass'>

ಮಂಗಳವಾರ, ಜುಲೈ 6, 2021

ಬೀಟ್ರೂಟ್ ಬೆಳೆ ಮಾಹಿತಿ.

ಬೀಟ್ರೂಟ್ ಒಂದು ಸಿಹಿಯಾದ ಕಡುಗೆಂಪು ಬಣ್ಣದ ಅಲ್ಪಾವದಿ ತರಕಾರಿ ಬೆಳೆಯಾಗಿದ್ದು ಇದು ನಮ್ಮ ದೇಹಕ್ಕೆ ಬೇಕಾದ 'ಸಿ" ಅನ್ನಾಂಗ ಮತ್ತು ಹೇರಳವಾದ ಖನಿಜಾಂಶಗಳನ್ನು ಒದಗಿಸುತ್ತದೆ.
ಬೀಟ್ರೂಟ್ ಬೆಳೆ ಚೆನ್ನಾಗಿ ನೀರು ಬಸಿದು ಹೋಗುವ ಮರಳು ಮಿಶ್ರಿತ ಗೋಡು ಮಣ್ಣಿನಲ್ಲಿ ಹಾಗೂ ಸವಳು ಮಣ್ಣಿನಲ್ಲಿ ಬೆಳೆಯಬಹುದು.ಚಳಿಗಾಲದ ಬೆಳೆಯಲ್ಲಿ ಒಳ್ಳೆಯ ಗುಣಮಟ್ಟದ ಗೆಡ್ಡೆಗಳು ಹಾಗು ಇಳುವರಿ ಪಡೆಯಬಹುದು.

ಬೀಟ್ರೂಟ್ ಬಿತ್ತನೆ ಕಾಲ : 
ಚಳಿಗಾಲದ ಬೆಳೆಯಾಗಿ ಅಕ್ಟೋಬರ್ - ನವೆಂಬರ್ ನಲ್ಲಿ ಹಾಗು ಮಳೆಗಾಲದ ಬೆಳೆಯಾಗಿ ಜೂನ್ - ಜುಲೈ ಅಲ್ಲಿ ಬಿತ್ತಬಹುದು.
ತಳಿಗಳು : ಕ್ರಮ್ಸನ್ ಗ್ಲೋಬ್.ಡೆಟ್ರಾಯಿಟ್ ಡಾರ್ಕ್ ರೆಡ್.ಹಾಗು ಮುಂತಾದವು.
ಬೀಟ್ರೂಟ್ ಬಿತ್ತನೆ : 
ಭೂಮಿಯನ್ನು ಚೆನ್ನಾಗಿ ಆಳವಾಗಿ ಉಳುಮೆ ಮಾಡಿ ಹೆಂಡೆ ಒಡೆದು ಸಣ್ಣ ಮಣ್ಣು ಮಾಡಿ ತಳಿಗಳಿಗೆ ಅನುಗುಣವಾಗಿ 30 ರಿಂದ 45 ಸೆಂ.ಮೀ ಅಂತರದ ಸಾಲು ಮಾಡಿ ಸಾಲಿನಲ್ಲಿ 20 ಟನ್ ಕೊಟ್ಟಿಗೆ ಗೊಬ್ಬರ ಚೆಲ್ಲಿ.ನಂತರ ಸಾರಜನಕ 75 ಕಿ.ಗ್ರಾಂ. ರಂಜಕ 100 ಕಿ.ಗ್ರಾಂ. ಪೊಟ್ಯಾಶ್ 50 ಕಿ.ಗ್ರಾಂ ಮಿಶ್ರಣ ಮಾಡಿದ ಗೊಬ್ಬರವನ್ನು ಮಣ್ಣಿನಲ್ಲಿ ಬೆರೆಸಿ ನೀರನ್ನು ಹಾಯಿಸಿ ನಂತರ ಸಾಲಿನ ಒಂದು ಬದುವಿನ ಮೇಲೆ 15 ರಿಂದ 20 ಸೆ.ಮೀ ಅಂತರದಲ್ಲಿ ಬೀಜವನು ಊರಿಸಬೇಕು.ಬಿತ್ತಿದ 4 ವಾರಗಳ ನಂತರ ಹೆಚ್ಚುವರಿ ಸಸಿಗಳನ್ನು ಕೀಳಿಸಿ ಜೊತೆಗೆ ಕಳೆ ನಿರ್ವಹಣೆ ಮಾಡಿ ಉಳಿದ ಶೇ 50 ಗೊಬ್ಬರವನ್ನು ಮೇಲುಗೊಬ್ಬರವಾಗಿ ಕೊಟ್ಟು ಸಸಿಗಳ ಬುಡಕ್ಕೆ ಮಣ್ಣು ಕೊಡಬೇಕು.
ನೀರಾವರಿ : ಮಣ್ಣು ಮತ್ತು ಸ್ಥಳಿಯ ಹವಾಗುಣಕ್ಕೆ ಅನುಗುಣವಾಗಿ 5 ರಿಂದ 6 ದಿನಕ್ಕೊಮ್ಮೆ ನೀರು ಬಿಡಬೇಕು.
ಬೀಟ್ರೂಟ್ ಬೆಳೆಯ ರೋಗಗಳು : 
ಹೇನು.ಜಿಗಿ ಹುಳು.ಎಲೆಚುಕ್ಕೆ ರೋಗ.ಗರಿ ತಿನ್ನುವ ಹುಳು.ರೋಗ ಲಕ್ಷಣಕ್ಕೆ ಅನುಗುಣವಾಗಿ ತಙ್ನರ ಸಲಹೆ ಮೇರೆಗೆ ರೋಗ ಹತೋಟಿ ಮಾಡಿದಲ್ಲಿ ಉತ್ತಮ ಇಳುವರಿ ಪಡೆಯಬಹುದು.
ಇಳುವರಿ : ಬಿತ್ತನೆ ಮಾಡಿದ 3 ತಿಂಗಳ ನಂತರ ಕಟಾವಿಗೆ ಬರುತ್ತದೆ.ಪ್ರತಿ ಹೆಕ್ಟೇರ್ ಗೆ 20 ರಿಂದ 30 ಟನ್ ಇಳುವರಿ ಪಡೆಯ ಬಹುದು.

ಕಾಮೆಂಟ್‌ಗಳಿಲ್ಲ:

ಬಾಳೆ ಕ್ರುಷಿ

ಬಾಳೆ ಒಂದು ಬಹುಜನಪ್ರಿಯ ಹಣ್ಣಿನ ಬೆಳೆ ಮಾವಿನಹಣ್ಣಿನ ನಂತರದ ಸ್ಥಾನ ಬಾಳೆ ಹಣ್ಣಿಗೆ ಲಭಿಸುತ್ತದೆ.ಭಾರತದಲ್ಲಿ 50 ಕ್ಕೂ ಹೆಚ್ಚು ತಳಿಗಳಿದ್ದು ಅವು ವಿವಿಧ ಭಾಗದಲ್ಲಿ ಬೆಳೆ...