expr:class='"loading" + data:blog.mobileClass'>

ಶುಕ್ರವಾರ, ಜುಲೈ 2, 2021

ಸೇವಂತಿಗೆ ಹೂ ಬೆಳೆ ಮಾಹಿತಿ.


ಸೇವಂತಿಗೆ ಆಸ್ಟರೇಸಿಯಾ ಕುಟುಂಬದ ಕ್ರಿಸ್ಯಾಂಥಮಮ್ ಜಾತಿಯ  ಹೂವಿನ ಸಸ್ಯ. ಅವು ಏಷ್ಯಾ  ಮತ್ತು ಈಶಾನ್ಯ  ಯುರೋಪ್ ನ ಸ್ಥಳಿಯ ಸಸ್ಯ.ಮಾನವ ಕ್ರುಷಿ ಮಾಡಿದ ಮೊದಲ ಹೂ ಬೆಳೆ ಎಂದೇ ಖ್ಯಾತಿ ಪಡೆದ ಸೇವಂತಿಗೆ ಹೂ ಒಂದು ಪ್ರಮುಖ ವಾಣಿಜ್ಯ ಪುಷ್ಪ ಬೆಳೆ.ಈ ಹೂವನ್ನು ಮಾಲೆ.ಬಿಡಿ ಹೂ.ಅಲಂಕಾರಿಕ ವಸ್ತುವಾಗಿ ಪುಷ್ಪ ಗುಚ್ಚ ಮಾಡಲು.ವೇದಿಕೆ ಅಲಂಕಾರಕ್ಕೆ.ಧಾರ್ಮಿಕ ಕಾರ್ಯ.ಪೂಜೆ ಪುನಸ್ಕಾರಗಳಲ್ಲಿ ಹೇರಳವಾಗಿ ಬಳಸುತ್ತಾರೆ.
ಮಣ್ಣು ಮತ್ತು ಹವಾಗುಣ :ಭೂಮಿಯ ರಸಸಾರ 6 ರಿಂದ 7 ಇರುವ ಮರಳು ಮಣ್ಣು.ಮರಳು ಮಿಶ್ರಿತ ಗೋಡು ಮಣ್ಣು.ಚೆನ್ನಾಗಿ ನೀರು ಬಸಿದು ಹೋಗುವ ಮಣ್ಣು ಸೂಕ್ತ.ನೀರು ನಿಲ್ಲುವ ಜಾಗ ಈ ಬೆಳೆಗೆ ಯೋಗ್ಯವಲ್ಲ.ಈ ಬೆಳೆಗೆ ಗಿಡಗಳ ಬೆಳವಣಿಗೆಗೆ ಹಗಲು ದೊಡ್ಡದಿರುವ ಹಾಗು ಹೂ ಬಿಡಲು ರಾತ್ರಿ ದೊಡ್ಡದಿರುವ ಕಾಲ ಸೂಕ್ತ ಅಂದರೆ ಈ ಬೆಳೆಯನ್ನು ಮೇ - ಜೂನ್  ನಡುವೆ ಮಾಡುವದು ಸೂಕ್ತ.
ಸೇವಂತಿಗೆ ತಳಿಗಳು :
ಹಳದಿ .ಬಿಳಿ.ಕೆಂಪು.ಬಣ್ಣದ ತಳಿಗಳು ವಾಣಿಜ್ಯ ಮಟ್ಟದ ಕ್ರುಷಿಗೆ ಸೂಕ್ತ.ಆದರೂ ಇತ್ತೀಚೆಗೆ ಇತರೆ ಬಣ್ಣದ ತಳಿಗಳು ಹೆಚ್ಚು ಜನಪ್ರಿಯವಾಗುತ್ತಿವೆ.
ಹಳದಿ ತಳಿಗಳು : 
ಆರ್ಕಾ ಸ್ವರ್ಣ.ಎಲ್ಲೊ ಗೋಲ್ಢ್.ವಾಸಂತಿಕ.ಕರ್ನೂಲ್.ಜಯಂತಿ.ಇಂದಿರಾ.ಬಸಂತಿ.ಕಸ್ತೂರಿ.ಉಷಾಕಿರಣ.ರಾಣಿ.ಸಾರವಾಳ.ದುಂಡಿ.ಮುಂತಾದವು.

ಕೆಂಪು ತಳಿಗಳು :
ರವಿಕಿರಣ.ರೆಡ್ ಗೋಲ್ಢ್.ಮುಂತಾದವು.

ಬಿಳಿ ತಳಿಗಳು :
ಹಿಮಾನಿ.ರೀಟಾ.ಕೀರ್ತಿ.ಚಂದ್ರಿಕಾ.ರಾಜ.ಜೋತ್ಸ್ನ್.ಮೀರಾ. ಮುಂತಾದವು.
ಸೇವಂತಿಗೆ ಸಸ್ಯಾಭಿವ್ರುದ್ದಿ :
  • ಕಂದುಗಳು ಹಾಗು ಮ್ರುದುಕಾಂಡದ ತುಂಡುಗಳು ನಾಟಿಗೆ ಉಪಯೋಗಿಸುವದು ಉತ್ತಮ.ಕಡ್ಡಿಯ ತುಂಡುಗಳು ಬಳಸುವ ಮೊದಲು ಮೀಥಾಕ್ಸಿ ಈಥ್ಯೆಲ್ ಕ್ಲೋರೆಡ್ 2 ಗ್ರಾಂ  ಪ್ರತಿ ಲೀ ನೀರಿಗೆ ಬೆರೆಸಿ ನಾಟಿ ಮಾಡುವ ಕಡ್ಡಿಗಳ ತಳಬಾಗವನ್ನು ಅದರಲ್ಲಿ ಅದ್ದಿ ನಾಟಿಗೆ ಬಳಸುವದರಿಂದ ಸಸ್ಯಗಳ ಬೇರು ಬೆಳವಣಿಗೆಗೆ ಪ್ರಚೊದನೆಯಾಗುತ್ತದೆ
  • ಗ್ಲಾಡಿಯೋಲಸ್ ಪುಷ್ಪ ಕ್ರುಷಿ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಸೇವಂತಿಗೆ ನಾಟಿ ಪದ್ದತಿ :
ಮಣ್ಣನ್ನು ಚೆನ್ನಾಗಿ ಉಳುಮೆ ಮಾಡಿ 30 ಸೆಂ.ಮೀ ಅಂತರದ ಸಾಲುಗಳನ್ನು ಮಾಡಿ ಹೆಕ್ಟೆರ್ ಗೆ 25 ಟನ್ ಕೊಟ್ಟಿಗೆ ಗೊಬ್ಬರವನ್ನು ಸಾಲುಗಳಲ್ಲಿ ಚೆಲ್ಲಿ.ನಂತರ ಪ್ರತಿ ಹೆಕ್ಟೇರಿಗೆ ಸಾರಜನಕ 33 ಕಿ.ಗ್ರಾಂ.ರಂಜಕ 150 ಕಿ.ಗ್ರಾಂ.ಪೊಟ್ಯಾಶ್ 100 ಕಿ.ಗ್ರಾಂ ಮಿಶ್ರಣದ ಗೊಬ್ಬರವನ್ನು ಸಾಲುಗಳಲ್ಲಿ ಬಿತ್ತಿ ಮಣ್ಣಲ್ಲಿ ಬೆರೆಸಿ ನೀರು ಹಾಯಿಸಿ.ನಂತರ ಸಾಲುಗಳ ಒಂದು ಬದುವಿನ ಮೇಲೆ 30 ಸೆಂ.ಮೀ ಅಂತರದಲ್ಲಿ ಸಸಿಗಳನ್ನು ನಾಟಿ ಮಾಡಿ.
ಕಳೆ ಮತ್ತು ನೀರು ನಿರ್ವಹಣೆ :
ಮಣ್ಣು ಮತ್ತು ಸ್ಥಳಿಯ ಹವಾಗುಣಕ್ಕೆ ಅನುಗುಣವಾಗಿ ಪ್ರತಿ 4 -ರಿಂದ 5 ದಿನಕ್ಕೊಮ್ಮೆ ನೀರು ಬಿಡಬೇಕು.ನಂತರ ಅಂತರ ಬೇಸಾಯದಿಂದ ಕಳೆ ನಿರ್ವಹಣೆ ಮಾಡಿ.ಮೇಲುಗೊಬ್ಬರವಾಗಿ ನಾಟಿ ಮಾಡಿದ 30 ದಿನಕ್ಕೆ ಹೆಕ್ಟೇರಿಗೆ 45 ಕಿ.ಗ್ರಾಂ ಸಾರಜನಕವನ್ನು ನೀಡಬೇಕು.ಇದಾದ ಮತ್ತೊಂದು ತಿಂಗಳ ನಂತರ ಮತ್ತೊಮ್ಮೆ 45 ಕಿ.ಗ್ರಾಂ ಸಾರಜನಕ ನೀಡಬೇಕು.ನಾಟಿ ಮಾಡಿದ 30 ದಿನದ ನಂತರ ಸಸಿಗಳ ಕುಡಿ ಚಿವುಟಿ ಜಿಬ್ಬರ್ಲಿಕ್ ಓಷದವನ್ನು ಪ್ರತಿ 10 ಲೀ ನೀರಿಗೆ 1 ಗ್ರಾಂ ನಂತೆ ಬೆರೆಸಿ ಸಿಂಪಡಿಸುವದರಿಂದ ಸಸಿಗಳು ಹೆಚ್ಚು ಕವಲೊಡೆದು ಹೆಚ್ಚು ಹೂ ಬಿಡುವದಕ್ಕೆ ಸಹಕಾರಿಯಾಗುತ್ತದೆ.
ಸೇವಂತಿಗೆ ಬೆಳೆಗೆ ತಗುಲುವ ರೋಗಗಳು :
ಸಸಿ ಹೇನು.ಥ್ರಿಪ್ಸ್.ಮೊಗ್ಗು ಕೊರೆಯುವ ಹುಳು.ತುಕ್ಕು ರೋಗ.ಬೂದಿರೋಗ.ಬೇರುಕೊಳೆ ರೋಗ.ಹಳದಿ ನಂಜು.ಎಲೆ ಚುಕ್ಕೆ ರೋಗಗಳು ಕಂಡುಬಂದ ಸಂದರ್ಭದಲ್ಲಿ ತಙ್ನರ ಸಲಹೆ ಮೇರೆಗೆ ಅವುಗಳನ್ನು ನಿಯಂತ್ರಿಸುವದರಿಂದ ಹೆಚ್ಚಿನ ಇಳುವರಿ ಪಡೆಯ ಬಹುದು.
ಕೊಯ್ಲು ಮತ್ತು ಇಳುವರಿ :
ನಾಟಿ ಮಾಡಿದ 90 ದಿನಗಳಿಂದ ಹೂ ಬರಲು ಶುರುವಾಗಿ ಮುಂದೆ 45 ರಿಂದ 55 ದಿನದವರೆಗು ಹೂ ಕೊಡುತ್ತವೆ.ಪ್ರತಿ ಹೆಕ್ಟೆರ್ ಗೆ 10 ರಿಂದ 15 ಟನ್ ಇಳುವರಿ ಪಡೆಯಬಹುದು.

ಬಾಳೆ ಕ್ರುಷಿ

ಬಾಳೆ ಒಂದು ಬಹುಜನಪ್ರಿಯ ಹಣ್ಣಿನ ಬೆಳೆ ಮಾವಿನಹಣ್ಣಿನ ನಂತರದ ಸ್ಥಾನ ಬಾಳೆ ಹಣ್ಣಿಗೆ ಲಭಿಸುತ್ತದೆ.ಭಾರತದಲ್ಲಿ 50 ಕ್ಕೂ ಹೆಚ್ಚು ತಳಿಗಳಿದ್ದು ಅವು ವಿವಿಧ ಭಾಗದಲ್ಲಿ ಬೆಳೆ...