ಈ ಬೆಳೆಯನ್ನು ನೀರು ನಿಲ್ಲುವ ಆಮ್ಲಯುಕ್ತ ಮಣ್ಣನ್ನು ಹೊರತು ಪಡಿಸಿ.ಎಲ್ಲಾ ರೀತಿಯ ಮಣ್ಣಿನಲ್ಲೂ ಬೆಳೆಯ ಬಹುದು.ಸಾಧಾರಣ ಕಪ್ಪು.ಮರಳು ಮಿಶ್ರಿತ ಕಪ್ಪು.ಮರಳು ಮಿಶ್ರಿತ ಕೆಂಪು ಮಣ್ಣು ಈ ಬೆಳೆಗೆ ಸೂಕ್ತ.ಮಣ್ಣಿನ ರಸಸಾರ 6 ರಿಂದ 7 ಇದ್ದರೆ ತುಂಬಾ ಉಪಯುಕ್ತ.
ವರ್ಷದ ಮೂರೂ ಕಾಲದಲ್ಲಿ ಈ ಬೆಳೆಯನ್ನು ಬೆಳೆಯಬಹುದಾದರು ವಾರ್ಷಿಕ 70 ರಿಂ 90 ಸೆಂ ಮೀ ಮಳೆ ಬೀಳುವ ಪ್ರಧೇಶದಲ್ಲಿ ಜುಲೈ ಇಂದ ಅಕ್ಟೋಬರ್ ವರೆಗೆ ಉತ್ತಮ ಬೆಳೆ ಮತ್ತು ಇಳುವರಿ ನಿರೀಕ್ಷಿಸಬಹುದು.
ತಳಿಗಳು:
ಡಿ.ಎಂ.ಟಿ.1.
ಡಿ.ಎಂ.ಟಿ.2.
ಡಿ.ಎಂ.ಟಿ.5.
ಆರ್ಕಾ: ರಕ್ಷಕ್.ಮೇಘಾಲಿ.ಅನನ್ಯ.ಆಶಿಶ್.ಸಾಮ್ರಾಟ್ .ಅಭಾ.ವಿಕಾಸ್.ಅಲೋಕ್.
ಸಂಕ್ರಾಂತಿ.ನಂದಿ.
ಇತ್ತೀಚಿನ ಇನ್ನೂ ಹೋಸ ಸಂಕರಣ ತಳಿಗಳು.
ಸಸಿಗಳನ್ನು ಸಸಿ ಮಡಿ ಮತ್ತು ಪ್ಲಾಸ್ಟಿಕ್ ಟ್ರೇ ಕೋಕೊಪಿಟ್ ಪದ್ದತಿಯಲ್ಲಿ ತಯಾರಿಸಿಕೊಳ್ಳಬಹುದು.ಆರೋಗ್ಯ ಮತ್ತು ಉತ್ತಮ ಬೆಳವಣಿಗೆಗಾಗಿ ಕೋಕೊ ಪಿಟ್ ಟ್ರೇ ಪದ್ದತಿಯಲ್ಲಿ ಸಸಿಗಳನ್ನ ಬೆಳೆಸಿಕೊಳ್ಳುವದೆ ಉತ್ತಮ.
ಟೊಮ್ಯಾಟೊ ನಾಟಿ ಪದ್ದತಿ :
ಮೊದಲು ಭೂಮಿಯನ್ನು ಆಳವಾಗಿ ಉಳುಮೆ ಮಾಡಿ ಹೆಂಡೆಗಳನ್ನು ಒಡೆದು ಸಣ್ಣ ಮಣ್ಣಾಗಿ ಮಾಡಿ ಸಮತಟ್ಟು ಮಾಡಿಕೊಳ್ಳಬೇಕು.ನಂತರ 90 ಸೆಂ ಮೀ ಅಂತರದಲ್ಲಿ ಸಾಲುಗಳನ್ನು ಮಾಡಿ ಸಾಲಿನ ಮದ್ಯೆ ಹೆಕ್ಟೆರ್ ಗೆ 25 ರಿಂದ 30 ಟನ್ ಕೊಟ್ಟಿಗೆ ಗೊಬ್ಬರ ಚೆಲ್ಲಿ ಮಣ್ಣಲ್ಲಿ ಬೆರೆಸಬೇಕು.ನಂತರ ಹೆಕ್ಟೇರ್ ಗೆ 200 ಕಿ ಗ್ರಾಂ ಸಾರಜನಕ .200 ಕಿ ಗ್ರಾಂ ರಂಜಕ.200 ಕಿ ಗ್ರಾಂ ಪೊಟ್ಯಾಶ್ ಮಿಶ್ರಣ ಮಾಡಿದ ಗೊಬ್ಬರದ 40% ಗೊಬ್ಬರವನ್ನು ಮೊದಲ ಕಂತಿನಲ್ಲಿ ಮಣ್ಣಿಗೆ ಬೆರೆಸಿ ನೀರನ್ನು ಹಾಯಿಸ ಬೇಕು ಹನಿ ನೀರಾವರಿಯಾದರೆ ಇನ್ನೂ ಉತ್ತಮ.ನಂತರ ಸಾಲಿನ ಒಂದು ಬದುವಿನ ಮೇಲೆ 45 ಸೆ ಮೀ ಅಂತರದಲ್ಲಿ ಸಸಿಗಳನ್ನು ನಾಟಿ ಮಾಡಬೇಕು.
ಪ್ರತಿ ಹತ್ತು ಸಾಲಿನ ನಡುವೆ ಒಂದು ಸಾಲು ಚೆಂಡು ಹೂ.ಮೆಕ್ಕೆಜೋಳ.ಸಚ್ಚೆ.ಬಿಳಿಜೋಳಗಳನ್ನ ಬೆಳೆಯುವದರಿಂದ ರೋಗಗಳ ಮೇಲೆ ನಿಯಂತ್ರಣ ಸಾಧಿಸಬಹದು.
ಟೊಮ್ಯಾಟೊ ಬೆಳೆಯಲ್ಲಿ ನೀರಾವರಿ ಪದ್ದತಿ :
ಮಣ್ಣು ಮತ್ತು ಸ್ಥಳೀಯ ಪ್ರತಿಕೂಲ ಹವಾಮಾನಕ್ಕೆ ಅನುಗುಣವಾಗಿ ಪ್ರತಿ 4 ರಿಂದ 5 ದಿನಕ್ಕೊಮ್ಮೆ ನೀರು ಕೊಡಬೇಕು.ಅಂತರ ಬೇಸಾಯ ಮತ್ತು ಕಳೆ ನಿರ್ಮೂಲನೆಯ ನಂತರ ನಾಟಿ ಮಾಡಿದ ನಾಲ್ಕನೆ ವಾರದಲ್ಲಿ ಉಳಿದ 60% ಗೊಬ್ಬರವನ್ನು ಮೇಲುಗೊಬ್ಬರವಾಗಿ ನೀಡಬೇಕು.ನಂತರ 30 ಸೆಂ ಮೀ ಬೆಳೆದ ಗಿಡಗಳ ಕವಲು ಟೊಂಗೆಗಳನ್ನು ಕತ್ತರಿಸಿ 2 ರಿಂದ 2.5 ಮೀ ಉದ್ದನೆಯ ಕೋಲುಗಳನ್ನು ನೆಟ್ಟು ಗಿಡಗಳಿಗೆ ಆಸರೆಯನ್ನು ಒದಗಿಸಿ ಎತ್ತಿ ಕಟ್ಟಬೇಕು.ಹೀಗೆ ಮಾಡುವದರಿಂದ ಒಳ್ಳೆಯ ಗುಣಮಟ್ಟದ ಕಾಯಿ ಮತ್ತು ಇಳುವರಿಯನ್ನು ಹೆಚ್ಚಿಸಬಹುದು.
ಟೊಮ್ಯಾಟೊ ಬೆಳೆಗೆ ತಗಲುವ ರೋಗಗಳು :
ಎಲೆ ತಿನ್ನುವ ಕೀಟ.ಎಲೆ ಸುರಂಗ ಕೀಟ.ಹಣ್ಣು ಕೊರೆಯುವ ಹುಳು.ಬಿಳಿನೊಣ.ಹೇನು.ಜಿಗಿಹುಳು.ದುಂಡಾಣು ಸೊರಗು ರೋಗ.ಕೊನೆ ಅಂಗಮಾರಿ ರೋಗ.ಎಲೆ ಚುಕ್ಕಿ.ಎಲೆ ಮುಟುರು.ಬೂದಿರೋಗ.ಗಂಟು ಬೇರು ರೋಗ.ಹೀಗೆ ಹಲವಾರು ಹಂತದ ಬೆಳೆಯಲ್ಲಿ ಕಾಲ ಕಾಲಕ್ಕೆ ಬರುವ ರೋಗಗಳನ್ನು ತಙ್ನರ ಸಲಹೆ ಮೇರೆಗೆ ರೋಗಗಳನ್ನ ನಿಯಂತ್ರಿಸುವ ಮೂಲಕ ಅಧಿಕ ಇಳುವರಿ ಪಡೆಯಬಹುದು.
ಕೊಯ್ಲು ಮತ್ತು ಇಳುವರಿ :
ನಾಟಿ ಮಾಡಿದ 60 ರಿಂದ 70 ದಿನಗಳಿಗೆ ಕೊಯ್ಲಿಗೆ ಬರುತ್ತದೆ ತಳಿ ಮತ್ತು ಕಾಲಕ್ಕನುಗುಣವಾಗಿ 6 ರಿಂದ 8 ವಾರಗಳವರೆಗೆ ಕೊಯ್ಲು ಮಾಡಬಹುದು.ತಳಿಗಳಿಗೆ ಅನುಗುಣವಾಗಿ ಹೆಕ್ಟೆರ್ ಗೆ 30 ರಿಂದ 60 ಟನ್ ಇಳುವರಿಯನ್ನ ಪಡೆಯಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ