expr:class='"loading" + data:blog.mobileClass'>

ಬುಧವಾರ, ಜೂನ್ 30, 2021

ಕ್ಯಾಪ್ಸಿಕಂ.ದೊಣ್ಣೆಮೆಣಸಿನ ಮಾಹಿತಿ.

ದೊಣ್ಣೆ ಮೆಣಸಿನ ಮೂಲ ತವರು ಅಮೇರಿಕ.ನೂರಾರು ವರ್ಷಗಳಿಂದಲು ಅಮೆರಿಕದ ಸಮಶೀತೋಷ್ಣ ವಲಯದ ಪ್ರಧೇಶದಲ್ಲಿ ಹೆಚ್ಚಾಗಿ ಬೆಳೆಯುತ್ತಿದ್ದರು.ಇದನ್ನು ಸಿಹಿ ಮೆಣಸು ಎಂದು ಸಹ ಕರೆಯುತ್ತಾರೆ ಇತ್ತೀಚೆಗೆ ಇದನ್ನು ಎಲ್ಲಾ ಪ್ರಧೇಶಗಳಲ್ಲು ಯಶಸ್ವಿ ಬೆಳೆ ಬೆಳೆಯುತ್ತಿದ್ದಾರೆ.ಕ್ಯಾಪ್ಸಿಕಂ ಅನ್ನು ತರಕಾರಿಯಾಗಿ.ಮಸಾಲೆ ಪಧಾರ್ಥವಾಗಿ ಮತ್ತು ಕೆಲವೊಂದು ಓಷದ ತಯಾರಿಕೆಯಲ್ಲುಿ ಬಳಸುತ್ತಾರೆ.ಇದರಲ್ಲಿ ಮನುಷ್ಯನ ದೇಹಕ್ಕೆ ಅತ್ಯಾವಶ್ಯಕವಾದ ವಿಟಮಿನ್ 'ಎ" ಮತ್ತು 'ಸಿ" ಹೇರಳವಾಗಿ ದೊರೆಯುತ್ತದೆ.
ಮಣ್ಣು ಮತ್ತು ಬಿತ್ತನೆ ಕಾಲ :
ದೊಣ್ಣೆ ಮೆಣಸಿನ ಬೆಳೆಗೆ ಮಣ್ಣಿನ ರಸಸಾರ 5.4 ರಿಂದ 6.8 ಇರುವ ಚೆನ್ನಾಗಿ ನೀರು ಬಸಿದು ಹೋಗುವ ಕೆಂಪು ಗೋಡು ಮಣ್ಣು ಮತ್ತು ಮದ್ಯಮ ಕಪ್ಪು ಮಣ್ಣಿನಲ್ಲಿ ಚೆನ್ನಾಗಿ ಬೆಳೆಯ ಬಹುದು.ತೆಗ್ಗು.ಸವಳು ಮಣ್ಣು ಈ ಬೆಳೆಗೆ ಸೂಕ್ತವಲ್ಲ.ಈ ಬೆಳೆಯನ್ನು ಜುಲೈ - ಆಗಸ್ಟ್. ಮತ್ತು ಅಕ್ಟೋಬರ್ - ನವೆಂಬರ್ ನಾಟಿ ಮಾಡಲು ಸೂಕ್ತ ಕಾಲ.
 ದೊಣ್ಣೆ ಮೆಣಸಿನ ತಳಿಗಳು :
ಆರ್ಕಾ ಮೋಹಿನಿ.ಆರ್ಕಾ ಬಸಂತ್.ಆರ್ಕಾ ಗೊರವ್.ಯೆಲ್ಲೊ ವಂಡರ್.ದಾರವಾಡ ಲೋಕಲ್.ಡಿ ಎಂ ಸಿ - 14.ಅಪೂರ್ವ.ಕ್ಯಾಲಿಫೊರ್ನಿಯಾ ವಂಡರ್.ಮುಂತಾದವು.
ನಾಟಿ ವಿಧಾನ :
ಮೊದಲು ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಿ ನಂತರ 60 ಸೆಂ.ಮೀ.ಅಂತರದ ಸಾಲುಗಳು ಮಾಡಿ ಪ್ರತಿ ಹೆಕ್ಟೇರ್ ಗೆ 25 ಟನ್ ಕೊಟ್ಟಿಗೆ ಗೊಬ್ಬರವನ್ನು ಪ್ರತಿ ಸಾಲಿನಲ್ಲು ಚೆಲ್ಲಿ.ಸಾರಜನಕ 150 ಕಿ.ಗ್ರಾಂ. ರಂಜಕ 75 ಕಿ.ಗ್ರಾಂ. ಪೊಟ್ಯಾಶ್ 50 ಕಿ.ಗ್ರಾಂ ಮಿಶ್ರಣದ ಶೇ 50 ರಷ್ಟು ಗೊಬ್ಬರವನ್ನು ಸಾಲಿನಲ್ಲಿ ಚೆಲ್ಲಿ ಮಣ್ಣಿನಲ್ಲಿ ಬೆರೆಸಿ.ತೆಳುವಾಗಿ ನೀರು ಕೊಟ್ಟು.ಸಾಲಿನ ಹೊರ ಮಗ್ಗುಲಿನ ಎತ್ತರದ ದಿಣ್ಣೆಯ ಮೇಲೆ 45 ಸೆಂ.ಮೀ ಅಂತರದಲ್ಲಿ ಸಸಿ ನಾಟಿ ಮಾಡಬೇಕು.ಟ್ರೇ ಮತ್ತು ಕೊಕೊ ಪಿಟ್ ನಲ್ಲಿ ಬೆಳೆಸಿದ ಸಸಿಗಳು ನಾಟಿಗೆ ತುಂಬಾ ಸೂಕ್ತ.
ಅಂತರ ಬೇಸಾಯ ಮತ್ತು ನೀರಾವರಿ :
ಮಣ್ಣು ಮತ್ತು ಸ್ಥಳಿಯ ಹವಾಗುಣಕ್ಕೆ ಅನುಗುಣವಾಗಿ 3 ರಿಂದ 4 ದಿನಕ್ಕೊಮ್ಮೆ ನೀರು ಹಾಯಿಸ ಬೇಕು.ನಾಟಿ ಮಾಡಿದ 2 ವಾರದ ನಂತರ ಎಡೆಕುಂಟೆ ಹೊಡೆದು ಕಳೆ ನಿರ್ವಹಣೆ ಮಾಡಿ ಮೇಲೆ ತಿಳಿಸಿದ ಗೊಬ್ಬರದ ಉಳಿದ ಶೇ 50 ಗೊಬ್ಬರವನ್ನು ಕೊಟ್ಟು ಸಸಿಗಳ ಬುಡಕ್ಕೆ ಮಣ್ಣು ಏರಿಸಬೇಕು.3 ನೆ ವಾರದಿಂದ ನಾಲ್ಕನೆ ವಾರದಲ್ಲಿ ಬರುವ ಹೂವುಗಳನ್ನು ಚಿವುಟುವದರಿಂದ ಗಿಡಗಳ ಬೆಳವಣಿಗೆಗೆ ಸಹಕರಿಸ ಬೇಕು.ಇದರಿಂದ ಉತ್ತಮ ಗಾತ್ರದ ಗುಣಮಟ್ಟದ ಕಾಯಿಗಳನ್ನು ಮುಂದೆ ಪಡೆಯಲು ಸಹಕಾರಿಯಾಗುತ್ತದೆ.
ರೋಗಗಳು :
ಹೇನು.ಥ್ರಿಪ್ಸ್ ನುಸಿ.ಜೇಡ ನುಸಿ.ಹಣ್ಣು ಕೊರೆಯುವ ಹುಳು.ಸಸಿ ಸೊರಗು ರೋಗ.ಚಿಬ್ಬು ರೋಗ.ಬೂದಿರೋಗ.ಎಲೆ ಮುಟುರು ರೋಗ.ಎಲೆ ಚುಕ್ಕೆ ರೋಗ.ದುಂಡಾಣು ರೋಗ.ಈ ರೋಗ ಲಕ್ಷಣ ಸಮಯದಲ್ಲಿ ತಙ್ನರ ಸಲಹೆ ಮೇರೆಗೆ ರೋಗ ಹತೋಟಿ ಮಾಡಿದಲ್ಲಿ ಉತ್ತಮ ಇಳುವರಿ ಪಡೆಯಬಹುದು.
ಕೊಯ್ಲು ಮತ್ತು ಇಳುವರಿ :
  ದೊಣ್ಣೆ ಮೆಣಸು ನಾಟಿ ಮಾಡಿದ 50 ರಿಂದ 60 ದಿನಕ್ಕೆ ಕೊಯ್ಲು ಪ್ರಾರಂಭಿಸುತ್ತದೆ ಕಾಯಿಗಳು ಪೂರ್ಣ ಕೆಂಪು ಬಣ್ಣಕ್ಕೆ ತಿರುಗುವ ಮೊದಲೆ ಹಸಿರು ಬಣ್ಣದ ಬಲಿತ ಕಾಯಿ ಕೊಯ್ಲಿಗೆ ಸೂಕ್ತ.ಸಂಕರಣ ತಳಿಗಳಿಂದ ಪ್ರತಿ ಹೆಕ್ಟೆರ್ ಗೆ 25 ರಿಂದ 30 ಟನ್ ಇಳುವರಿ ಮತ್ತು ಇತರೆ ತಳಿಗಳಿಂದ ಪ್ರತಿ ಹೆಕ್ಟೆರ್ ಗೆ 10 ರಿಂದ 12 ಟನ್ ಇಳುವರಿ ಪಡೆಯಬಹುದು.

ಕಾಮೆಂಟ್‌ಗಳಿಲ್ಲ:

ಬಾಳೆ ಕ್ರುಷಿ

ಬಾಳೆ ಒಂದು ಬಹುಜನಪ್ರಿಯ ಹಣ್ಣಿನ ಬೆಳೆ ಮಾವಿನಹಣ್ಣಿನ ನಂತರದ ಸ್ಥಾನ ಬಾಳೆ ಹಣ್ಣಿಗೆ ಲಭಿಸುತ್ತದೆ.ಭಾರತದಲ್ಲಿ 50 ಕ್ಕೂ ಹೆಚ್ಚು ತಳಿಗಳಿದ್ದು ಅವು ವಿವಿಧ ಭಾಗದಲ್ಲಿ ಬೆಳೆ...